ವಿಜಯಪುರ(ಜ.12): ಇಲ್ಲಿ ನಡೆದ ಸಾವಯವ ಮತ್ತು ಸಿರಿಧಾನ್ಯ ಮೇಳ ಉದ್ಘಾಟನೆ ಕಾರ್ಯಕ್ರಮದಲ್ಲಿ ರೈತನೋರ್ವ ತೋಟಗಾರಿಕೆ ಸಚಿವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.

ಸಚಿವ ಎಂ. ಸಿ. ಮನಗೂಳಿ ಭಾಷಣ ಮುಕ್ತಾಯದ ವೇಳೆ ಮಧ್ಯ ಪ್ರವೇಶಿಸಿದ ನಾಗಠಾಣದ ರೈತ ಯಾವ ತಾಲೂಕಿನಲ್ಲಿ ಜಾನುವಾರುಗಳಿಗೆ ಮೇವು ಕೊಟ್ಟಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾನೆ.

ನೀವು ಹೀಗೆ ಹೇಳಿದರೆ ರೈತರು ಸತ್ತು ಹೋಗುತ್ತಾರೆ ಎಂದ ರೈತ, ಸಚಿವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಉತ್ತರ ನೀಡುವವರೆಗೂ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ.

"

ರೖತನ ಆಕ್ರೋಶ ಕಂಡು ತಬ್ಬಿಬ್ಬಾದ ಸಚಿವರು, ಮೂರು ದಿನಗಳ ಹಿಂದೆ ಸಚಿವ ಸಂಪುಟ ಉಪಸಮಿತಿ ಬರ ಅಧ್ಯಯನ ನಡೆಸಿದೆ. ಸಭೆ ಮಾಡಿ ಮೇವು ಒದಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಉತ್ತರ ನೀಡಿದರು. 

ತುಂಬಿದ ಸಮಾವೇಶದಲ್ಲಿ ರೈತನ ಪ್ರಶ್ನೆಯಿಂದ ಕೆಲಹೊತ್ತು ಗೊಂದಲದ ವಾತಾವರಣ ನಿಮಾರ್ಮಾಣವಾಗಿತ್ತು.