Asianet Suvarna News Asianet Suvarna News

ಹೊಸ ದಾಗಿ 22 ತಾಲೂಕುಗಳು ಪ್ರವಾಹ ಪೀಡಿತವೆಂದು ಘೋಷಣೆ

  • ಹೊಸದಾಗಿ 22 ತಾಲೂಕು ಪ್ರವಾಹ ಪೀಡಿತವೆಂದು ಘೋಷಣೆ
  • ಈ ಹಿಂದೆ 61 ತಾಲೂಕುಗಳು ಪ್ರವಾಹ ಪೀಡಿತವೆಂದು ಘೋಷಣೆ 
extra 22 district Declared flood affected in Karnataka  snr
Author
Bengaluru, First Published Aug 17, 2021, 1:42 PM IST
  • Facebook
  • Twitter
  • Whatsapp

ಬೆಂಗಳೂರು (ಆ.17): ರಾಜ್ಯದಲ್ಲಿ  ಭಾರೀ ಮಳೆಯಿಂದ ಪ್ರವಾಹಕ್ಕೆ ತುತ್ತಾಗಿದ್ದ 61 ತಾಲೂಕುಗಳು ಪ್ರವಾಹ ಪೀಡಿತವೆಂದು ಘೋಷಣೆ ಮಾಡಿದ್ದೆವು.  ಮಳೆ‌ ಹೆಚ್ಚಾಗಿ ಮತ್ತೆ ಕೆಲವೆಡೆ ಹಾನಿಯಾಗಿದೆ. ಹೊಸದಾಗಿ 22 ತಾಲೂಕು ಪ್ರವಾಹ ಪೀಡಿತವೆಂದು ಘೋಷಣೆ ಮಾಡಿದ್ದೇವೆ ಎಂದು  ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. 

ಬೆಂಗಳೂರಿನಲ್ಲಿಂದು ಮಾತನಾಡಿದ ಸಚಿವ ಆರ್ ಅಶೋಕ್ ಬೆಳಗಾವಿ, ಚಿಕ್ಕಮಗಳೂರು, ಕಡೂರು,ತರಿಕೆರೆ, ಸೂಪ, ಬಬಲೇಶ್ವರ, ಕೊಲ್ಹಾರ, ಮುದ್ದೆಬಿಹಾಳ, ಮೂಡಿಗೆರೆ ಹೊಸನಗರಗಳನ್ನ ಪ್ರವಾಹ ಪೀಡಿತವೆಂದು ಘೋಷಿಸಿದ್ದೇವೆ ಎಂದರು. 

ರಾಜ್ಯದ 13 ಜಿಲ್ಲೆಗಳ 61 ತಾಲೂಕು ಅತಿವೃಷ್ಟಿ, ಪ್ರವಾಹ ಪೀಡಿತ: ಸರ್ಕಾರ

ಬೆಂಗಳೂರಿನಲ್ಲೂ ಕೆಲ ಪ್ರದೇಶಗಳನ್ನು ಐಡೆಂಟಿಫೈ ಮಾಡಿದ್ದೇವೆ. 50 ಕ್ಕೂ ಹೆಚ್ಚು ರಸ್ತೆಗಳಲ್ಲಿ ನೀರು ನಿಲ್ಲುತ್ತಿದೆ. ಅಧಿಕಾರಿಗಳಿಗೆ ಇದರ ಬಗ್ಗೆ ಸೂಚಿಸಿದ್ದೇನೆ. ನೀರು ನಿಲ್ಲುವ ಡ್ರೈನ್ ಬಗ್ಗೆ ಸೂಚಿಸಿದ್ದೇನೆ. ಜೊತೆಗೆ ಸಮಸ್ಯೆ ಪರಿಹಾರಕ್ಕೂ ತಿಳಿಸಲಾಗಿದೆ.  ನೀರು ನಿಲ್ಲುವ ಜಾಗಗಳ ಬಗ್ಗೆ ಮಾಹಿತಿ ಕೇಳಿದ್ದೇನೆ ಎಂದರು. 

ಅಲ್ಲದೇ ಈ ರೀತಿ ಮಳೆಯಿಂದ ಹಾನಿಯಾಗುವ ಪ್ರದೇಶಗಳಲ್ಲಿ ತುರ್ತಾಗಿ ಕಾಮಗಾರಿ ಮುಗಿಸುವ ಬಗ್ಗೆಯೂ ತಿಳಿಸಿದ್ದೇನೆ ಎಂದು ಸಚಿವ ಆರ್ ಅಶೋಕ್ ಹೇಳಿದರು.  

ಪ್ರತಿಭಟಿಸಿದ್ದ ಶಾಸಕ :  ಮೂಡಿಗೆರೆ ಕ್ಷೇತ್ರ ಕೂಡಾ ಪ್ರವಾಹ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಮೂಡಿಗೆರೆ ಕ್ಷೇತ್ರ ವನ್ನು ಪ್ರವಾಹ ಪೀಡಿತ ಪ್ರದೇಶವೆಂದು ಘೋಷಿಸಲು ಇಲ್ಲಿನ ಶಾಸಕ ಎಂಪಿ ಕುಮಾರಸ್ವಾಮಿ  ಪ್ರತಿಭಟನೆ ನಡೆಸಿದ್ದರು. 

Follow Us:
Download App:
  • android
  • ios