ಬೆಂಗಳೂರು (ಏ.10):  ಸಾರಿಗೆ ನೌಕರರ ಮುಷ್ಕರದ ಬೆನ್ನಲ್ಲೇ ರಾಜ್ಯ ಸರ್ಕಾರ ನಾಲ್ಕು ಸಾರಿಗೆ ನಿಗಮಗಳ ವಾರ್ಷಿಕ ಆದಾಯ ಹಾಗೂ ವೆಚ್ಚದ ಲೆಕ್ಕಾಚಾರವನ್ನು ಮುಂದಿಟ್ಟಿದೆ. ರಾಜ್ಯ ನಾಲ್ಕು ರಸ್ತೆ ಸಾರಿಗೆ ನಿಗಮಗಳಲ್ಲಿ ನೌಕರರ ವೇತನ, ವಿವಿಧ ಭತ್ಯೆಗಳು, ಡೀಸೆಲ್‌ ಸೇರಿದಂತೆ ವಿವಿಧ ರೂಪದಲ್ಲಿ ವಾರ್ಷಿಕ 10,057.77 ಕೋಟಿ ರು. ಭರಿಸಲಾಗುತ್ತಿದೆ.

ಆದರೆ, ನಾಲ್ಕು ನಿಗಮಗಳಿಂದ ವಾರ್ಷಿಕ ಸಾರಿಗೆ ಆದಾಯ 6,205 ಕೋಟಿ ರು. ಹಾಗೂ ಇತರೆ ಆದಾಯ 513.78 ಕೋಟಿ ರು. ಸೇರಿ ಒಟ್ಟು 6718 ಕೋಟಿ ರು. ಮಾತ್ರ ಬರುತ್ತಿದೆ.

ಮುಳುಗುತ್ತಿರುವ ಹಡಗಿಗೆ ರಂಧ್ರ ತೋಡಬೇಡಿ: ಸಚಿವ ಅಶೋಕ್‌ .

 ಈ ಅಂಕಿ-ಅಂಶಗಳನ್ನು ಗಮನಿಸಿದಾಗ ಸಾರಿಗೆ ನಿಗಮಗಳಿಗೆ ವಾರ್ಷಿಕ ಆದಾಯಕ್ಕಿಂತ ಸುಮಾರು 4500 ಕೋಟಿ ರು. ವೆಚ್ಚವೇ ಹೆಚ್ಚಿದೆ. ವಾರ್ಷಿಕ ಭರಿಸಲಾಗುವ 10,057 ಕೋಟಿ ರು. ಪೈಕಿ ಡೀಸೆಲ್‌ಗೆ 4,821 ಕೋಟಿ ರು., ನೌಕರರ ವೇತನಕ್ಕೆ 4,536 ಕೋಟಿ ರು., ಚಾಲಕ ಮತ್ತು ನಿರ್ವಾಹಕರಿಗೆ ಪ್ರೋತ್ಸಾಹ ಧನ 169 ಕೋಟಿ ರು., ಹೆಚ್ಚುವರಿ ಅವಧಿ ಕರ್ತವ್ಯ ನಿರ್ವಹಣೆಗೆ(ಓಟಿ) 274 ಕೋಟಿ ರು., ಮಾಸಿಕ, ದಿನ ಭತ್ಯೆ ಸೇರಿದಂತೆ ಇತರೆ ಭತ್ಯೆಗಳಿಗೆ 254 ಕೋಟಿ ರು. ಭರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದೆ.