Asianet Suvarna News Asianet Suvarna News

ವಾಲ್ಮೀಕಿ ನಿಗಮದ ಹಗರಣ: ಮೊನ್ನೆ ರಾತ್ರಿಯೇ ದಾಳಿಗೆ ಸ್ಕೆಚ್‌ ಹಾಕಿದ್ದ ಇ.ಡಿ..!

80 ಅಧಿಕಾರಿಗಳಿಂದ ಸಿನಿಮೀಯ ರೀತಿಯಲ್ಲಿ ನಿನ್ನೆ ಬೆಳಗ್ಗೆ ದಿಢೀರ್ ರೇಡ್ | ಗೌಪ್ಯತೆ ಕಾಪಾಡಲು ರಾಜ್ಯ ಪೊಲೀಸರಿಗೂ ಮಾಹಿತಿ ಇಲ್ಲ ಭದ್ರತೆಗೆ ದಿಲ್ಲಿಯಿಂದ ಬಂದ ಸಿಆರ್‌ಪಿಎಫ್ ಯೋಧರು | ರಾಜ್ಯ ಪೊಲೀಸರು ಬಂದಾಗ 'ನಿಮ್ಮನ್ನು ಕರೆದಿದ್ಯಾರು?' ಎಂದ ಸಿಆರ್‌ಪಿಎಫ್‌
 

enforcement directorate plan to raid on former minister b nagendra's residence in bengaluru on july 9th grg
Author
First Published Jul 11, 2024, 9:23 AM IST

ಬೆಂಗಳೂರು(ಜು.11):  ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಕೋಟ್ಯಂತರ ರು. ಆಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಇ.ಡಿ.(ಜಾರಿ ನಿರ್ದೇಶನಾಲಯ) ಅಧಿಕಾರಿಗಳ ಕಾರ್ಯಾಚರಣೆಯು ಸಿನಿಮೀಯ ರೀತಿಯಲ್ಲಿ ನಡೆದಿದ್ದು, ಮಂಗಳವಾರ ರಾತ್ರಿಯಿಂದಲೇ ದಾಳಿಯ ರೂಪುರೇಷ ರೂಪುಗೊಂಡಿತ್ತು.

ಬುಧವಾರ ಬೆಳ್ಳಂಬೆಳಗ್ಗೆ ಬೆಂಗಳೂರು, ರಾಯಚೂರು, ಬಳ್ಳಾರಿ ಮತ್ತು ಹೈದರಾಬಾದ್‌ನಲ್ಲಿ ಕಾರ್ಯಾಚರಣೆ ಕೈಗೊಂಡ ಇಡಿ ಅಧಿಕಾರಿಗಳು ದಾಳಿಗೂ ಮುನ್ನ ಯೋಜಿತ ಕಾರ್ಯಾಚರಣೆ ನಡೆಸಿದರು. ಬೆಂಗಳೂರಿನ ಇ.ಡಿ. ಅಧಿಕಾರಿಗಳು ಸೇರಿದಂತೆ ದೆಹಲಿ ಸೇರಿದಂತೆ ಇತರೆ ರಾಜ್ಯಗಳ ಅಧಿಕಾರಿಗಳು ಸಹ ಕಾರ್ಯಾಚರಣೆಯಲ್ಲಿ ತೊಡಗಿದ್ದರು ಎಂದು ಹೇಳಲಾಗಿದೆ. 

ವಾಲ್ಮೀಕಿ ನಿಗಮದ ಹಗರಣ: ಮಾಜಿ ಸಚಿವ ನಾಗೇಂದ್ರ ನಿವಾಸದಲ್ಲಿ 24 ಗಂಟೆಯಿಂದ ಮುಂದುವರೆದ ಇಡಿ ದಾಳಿ

ಸ್ಥಳೀಯ ಪೊಲೀಸರಿಗೆ ಯಾವುದೇ ಮುನ್ಸೂಚನೆ ನೀಡದೆ ದೆಹಲಿಯಿಂದ ಕರೆಸಿದ ಸಿಆರ್‌ಪಿಎಫ್‌  ಯೋಧರ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಸ್ಥಳೀಯ ಪೊಲೀಸರ ನೆರವು ಪಡೆದರೆ ಕಾರ್ಯಾಚರಣೆಯ ಸುಳಿವು ಸೋರಿಕೆಯಾಗಬಹುದೆಂದು ಗೌಪ್ಯವಾಗಿಯೇ ದಾಳಿ ನಡೆಸಲಾಗಿದೆ.

ರಾಜ್ಯ ಪೊಲೀಸರು ವಾಪಸ್: 

ಪ್ರಕರಣ ಸಂಬಂಧ ದಾಳಿ ವೇಳೆ ನಾಗೇಂದ್ರ ಅವರ ನಿವಾಸಕ್ಕೆ ಸ್ಥಳೀಯ ಪೊಲೀಸರು ತೆರಳಿದ್ದರು. ಆದರೆ, ಭದ್ರತೆಗೆ ನಿಯೋಜನೆಗೊಂಡಿದ್ದ ಸಿಆ‌ರ್ ಪಿಎಫ್ ಯೋಧರು, ಪೊಲೀಸರನ್ನು ವಾಪಸ್ ಕಳುಹಿಸಿದರು. ಪೊಲೀಸರು ತಮ್ಮ ಗುರುತಿನ ಚೀಟಿ ತೋರಿಸಿದರು ಸಹ, ನಿಮ್ಮನ್ನು ಯಾರು ಇಲ್ಲಿಗೆ ಬರಲು ಹೇಳಿದ್ದು?' ಎಂದು ಹೇಳಿ ಕಳುಹಿಸಿದರು ಎಂದು ಹೇಳಲಾಗಿದೆ. ಮಾಹಿತಿ ಸೋರಿಕೆ ಸಾಧ್ಯತೆ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದರು ಎನ್ನಲಾಗಿದೆ. 

ವಾಲ್ಮೀಕಿ ನಿಗಮದ ಹಗರಣ: ಮಾಜಿ ಸಚಿವ ನಾಗೇಂದ್ರ ನಿವಾಸದಲ್ಲಿ 24 ಗಂಟೆಯಿಂದ ಮುಂದುವರೆದ ಇಡಿ ದಾಳಿ

ಇಂದು ವಿಚಾರಣೆಗೆ ನಾಗೇಂದ್ರ, ದದ್ದಲ್‌ಗೆ ಎಸ್‌ಐಟಿ ಬುಲಾವ್

ಬೆಂಗಳೂರು: ಇಡಿ ದಾಳಿ ಬೆನ್ನಲ್ಲೇ ರಾಜ್ಯ ಮಹಷಿ ವಾಲ್ಮೀಕಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾ ವಣೆ ಪ್ರಕರಣ ಸಂಬಂಧ ಗುರುವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರಿಗೆ ವಿಶೇಷ ತನಿಖಾ ದಳ (ಎಸ್‌ಐಟಿ) ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಇದೇ ಪ್ರಕರಣದಲ್ಲಿ ಈ ಇಬ್ಬರನ್ನು ಸುದೀರ್ಘವಾಗಿ ವಿಚಾರಣೆ ನಡೆಸಿದ್ದ ಎಸ್‌ಐಟಿ, ಬುಧವಾರ ಸಹ ವಿಚಾರಣೆಗೆ ಬರುವಂತೆ ಸೂಚಿಸಿ ಅವರನ್ನು ಕಳುಹಿಸಿತ್ತು. ಆದರೆ ದಿಢೀನ್ ಇಡಿ ದಾಳಿ ನಡೆದ ಬಳಿಕ ನಾಗೇಂದ್ರ ಹಾಗೂ ದದ್ದಲ್ ವಿಚಾರಣೆಗೆ ಗೈರಾಗಿದ್ದರು.

ಎಸ್‌ಐಟಿ ಮಾಹಿತಿ ಮೇರೆಗೆ ದಾಳಿ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹು ಕೋಟಿ ಆಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ನೀಡಿರುವ ಮಾಹಿತಿ ಮೇರೆಗೆ ಇ.ಡಿ. ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ನಿಗಮದವ್ಯವಸ್ಥಾಪಕ ನಿರ್ದೇಶಕರಾಗಿದ್ದ ಆರೋಪಿ ಪದ್ಮನಾಭ ಅವರನ್ನು ಎಸ್‌ಐಟಿ ಅಧಿಕಾರಿಗಳುಬಂಧಿಸಿತೀವ್ರವಿಚಾರಣೆಗೊಳ ಪಡಿಸಿದರು.ಈವೇಳೆಪದ್ಮನಾಭ. ಪ್ರಕರಣದ ಕುರಿತು ಸಂಪೂರ್ಣ ಮಾಹಿತಿಯನ್ನು ಎಸ್ ಐಟಿ ಅಧಿಕಾರಿಗಳಿಗೆ ನೀಡಿದ್ದರು. ಅಲ್ಲದೇ, ಮತ್ತೋರ್ವ ಅಧಿಕಾರಿ ಪರತುರಾಮ್ ಸಹ ಹಗರಣದ ಬಗ್ಗೆ ವಿವರಿಸಿದ್ದಾರೆ ಎಂದು ಹೇಳ ಲಾಗಿದೆ. ಪದ್ಮನಾಭ ಮತ್ತು ಪರಶುರಾಮ್ ನೀಡಿದ ಮಾಹಿತಿ ಮೇರೆಗೆ ಎಸ್‌ಐಟಿ ಅಧಿಕಾರಿಗಳು ಮಾಜಿ ಸಚಿವ ಬಿ.ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರನ್ನು ವಿಚಾರಣೆಗೊಳಪಡಿಸಿ, ಹಲವು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದರು. ಕೋಟ್ಯಂತರ ರು. ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಶಾಸಕರಿಬ್ಬರು ನೀಡಿದ ಎಲ್ಲಾ ಮಾಹಿತಿಯನ್ನು ಇ.ಡಿ. ಅಧಿಕಾರಿಗಳಿಗೆ ನೀಡಿದ್ದರು. ಹೀಗಾಗಿ ಇ.ಡಿ. ದಾಳಿ ಮಾಡಿದೆ.

Latest Videos
Follow Us:
Download App:
  • android
  • ios