ಬಾಗಲಕೋಟೆ: ಎಲೆಕ್ಟ್ರಿಕ್‌ ಕಾರನ್ನು ಚಾರ್ಜ್ ಮಾಡುವ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಎರಡು ಕಾರುಗಳು ಭಸ್ಮಗೊಂಡಿರುವ ಘಟನೆ ಬಾಗಲಕೋಟೆಯ ನವನಗರದಲ್ಲಿ ಸೋಮವಾರ ಸಂಭವಿ​ಸಿದೆ. 

ಕಾರುಗಳೆರಡು ಇಲ್ಲಿನ ನಿವಾಸಿ ಇಸಾಕ್‌ ಎಂಬುವರಿಗೆ ಸೇರಿದ್ದಾಗಿವೆ. ಚಾರ್ಜ್ ಇಡಲಾಗಿದ್ದ ಎಲೆಕ್ಟ್ರಿಕ್‌ ಕಾರಿಗೆ ಇದ್ದ​ಕ್ಕಿ​ದ್ದಂತೆ ಬೆಂಕಿ ಹತ್ತಿಕೊಂಡಿದೆ. 

ನಂತರ ಪಕ್ಕದಲ್ಲಿರುವ ಇಂಡಿಗೋ ಕಾರಿಗೂ ಆ ಬೆಂಕಿ ತಗುಲಿ ಅದು ಕೂಡ ಭಸ್ಮಗೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.