Asianet Suvarna News Asianet Suvarna News

ಮಹದಾಯಿ ಯೋಜನೆ ಜಾರಿಗೆ ಪಕ್ಷ ಭೇದ ಮರೆತು ಪ್ರಯತ್ನ; ಸಂಸದ ಬಸವರಾಜ ಬೊಮ್ಮಾಯಿ

ಮಹದಾಯಿ ಯೋಜನೆ ಜಾರಿಗೆ ತರಲು ಕೇಂದ್ರ ಸರ್ಕಾರದ ಮುಂದೆ ಪಕ್ಷಾತೀತವಾಗಿ ಪ್ರಯತ್ನ ಮಾಡುತ್ತೇವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

Efforts on to implement Mahadayi project across party lines says MP Basavaraj Bommai sat
Author
First Published Jul 13, 2024, 6:53 PM IST | Last Updated Jul 13, 2024, 6:53 PM IST

ಹುಬ್ಬಳ್ಳಿ (ಜು.13): ಮಹದಾಯಿ ಯೋಜನೆ ಜಾರಿಗೆ ತರಲು ನಮಗೂ ಕೂಡ ಬದ್ಧತೆ ಇದೆ. ಎಲ್ಲರೂ ಪಕ್ಷ ಭೇದ ಮರೆತು ಕೆಲಸ ಮಾಡಿ ಆದಷ್ಟು ಬೇಗ ಯೋಜನೆ ಜಾರಿಗೊಳಿಸಲು ಕೇಂದ್ರದಿಂದ ಬೇಕಾಗುವ ಅನುಮತಿ ಕೊಡಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನವಲಗುಂದ ವಿದಾನಸಭಾ ಕ್ಷೇತ್ರದ ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧಾರವಾಡದಿಂದ ನವಲಗುಂದ, ರೋಣ, ಗದಗ ಹಾಗೂ ನರಗುಂದವರೆಗೆ ಪಾದಯಾತ್ರೆ ಮಾಡಿ ಈ ಯೋಜನೆ ಜಾರಿ ಮಾಡಲು ಸಾಕಷ್ಟು ಹೋರಾಟ ಮಾಡಿದ ಸಂದರ್ಭದಲ್ಲಿ ಎಲ್ಲರೂ ಬೆಂಬಲಿಸಿದ್ದಾರೆ. ಯೋಜನೆ ಬಗ್ಗೆ ನಮಗೂ ಕೂಡ ಬದ್ಧತೆ ಇದ್ದು, ಆದಷ್ಟು ಬೇಗ ಯೋಜನೆ ಜಾರಿಗೆ ಕೇಂದ್ರದಿಂದ ಬೇಕಾಗುವ ಅನುಮತಿ ಕೊಡಿಸುವುದಾಗಿ ಭರವಸೆ ನೀಡಿದರು.

ಮಹಾದಾಯಿ ನದಿಗೆ ಗೋಡೆ ಕಟ್ಟಲಾಗಿದ್ದು ಅದನ್ನು ತೆರವುಗೊಳಿಸುವ ಕೆಲಸವಾಗಬೇಕು. ಯೋಜನೆಗೆ ಅರಣ್ಯ ಇಲಾಖೆಯ ಅನುಮತಿ ಬೇಕಿದ್ದು, ಅದನ್ನು ದೊರಕಿಸಿ ಕೊಡುವ ಕೆಲಸ ಮಾಡೋಣ. ನವಲಗುಂದ ಶಾಸಕರಾದ ಎನ್ ಎಚ್. ಕೋನರೆಡ್ಡಿ ಹಾಗೂ ನಾವು ಸೇರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಕೇಂದ್ರದ ಪರಿಸರ ಇಲಾಖೆ ಅನುಮತಿ ಪಡೆಯಲು ಅಗತ್ಯ ಕ್ರಮ ವಹಿಸಲು ಮನವಿ ಮಾಡೋಣ ಎಂದರು.

ಪ್ರೀತಿಸಿ ಮದುವೆಯಾದ ಕುಟುಂಬದಲ್ಲಿ ಗಂಡ ಸಾವು; ಮಗನನ್ನು ನೇಣು ಬಿಗಿದು, ತಾನೂ ಆತ್ಮಹತ್ಯೆಗೆ ಶರಣಾದ ತಾಯಿ!

ಮಹಾದಾಯಿ ನಮ್ಮ ಯೋಜನೆಯಾಗಿದ್ದು, ಇದು ರೈತರ ಅನುಕೂಲಕ್ಕಾಗಿದ್ದು, ರೈತರ ವಿಚಾರದಲ್ಲಿ ಯಾರೂ ರಾಜಕಾರಣ ಮಾಡುವುದಿಲ್ಲ. ರೈತ ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧ ಪಟ್ಟಿಲ್ಲ. ಆದರೆ, ಎಲ್ಲ ರಾಜಕೀಯ ಪಕ್ಷಗಳೂ ರೈತನಿಗೆ ಸಂಬಂಧಿಸಿವೆ. ಹೀಗಾಗಿ ರಾಜ್ಯದ ಹಾಗೂ ರೈತರ ಹಿತ ದೃಷ್ಟಿಯಿಂದ ಮಹಾದಾಯಿ ಯೋಜನೆ ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಇದೇ ವೇಳೆ ಹೆಬಸೂರ ಗ್ರಾಮದ ಬಗ್ಗೆ ಮಾಜಿ ಮುಖ್ಯಮಂತ್ರಿ ಎಸ್​.ಆರ್​. ಬೊಮ್ಮಾಯಿ ಅವರು ಹಾಗೂ ನನಗೆ ವ್ಯಯಕ್ತಿವಾಗಿ ಅವಿನಾಭಾವ ಸಂಬಂಧ ಹೊಂದಿದ್ದು ಕಾರಣ ನನ್ನ ತಂದೆ ಎಸ್​.ಆರ್​. ಬೊಮ್ಮಾಯಿ ಅವರ ಪುತ್ಥಳಿ ಸ್ಥಾಪಿಸಿ ಅನಾವರಣ ಗೊಳಿಸಿದ್ದಕ್ಕೆ ಈ ಬಾಗದ ಹಿರೀಯರಿಗೆ ಹಾಗೂ ಯುವ ಜನತೆಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ತೂಕ ಇಳಿಸಿಕೊಳ್ಳಲು ಹೋಗಿ ಜೀವಂತ ಅಸ್ಥಿಪಂಜರವಾದ ಸುಂದರಿ; ಈಕೆ ದೇಹದಲ್ಲಿ ಹುಡುಕಿದರೂ ಪಾವ್ ಕೆಜಿ ಮಾಂಸವಿಲ್ಲ!

ಶಿಗ್ಗಾವಿ ಬಳಿ ಇಂದು ನಡೆದ ಕಾರು ಅಪಘಾತದಲ್ಲಿ ನಾಲ್ಕು ಜನ ಮೃತಪಟ್ಟ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ನೋವಾಯಿತು. ಮೃತರ ಕುಟುಂಬಕ್ಕೆ ಅವರ ಅಗಲಿಕೆಯ ದುಖಃವನ್ನು ಭರಿಸುವ ಶಕ್ತಿಯನ್ನು ಭಗವಂತ‌ ಕರುಣಿಸಲಿ, ಮೃತರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಈ ಅಪಘಾತದಲ್ಲಿ ಗಾಯಗೊಂಡವರಿಗೆ ಸರ್ಕಾರ ಸೂಕ್ತ ಚಿಕಿತ್ಸೆ  ಕೊಡಿಸಲಿ ಹಾಗೂ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತೇನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

Latest Videos
Follow Us:
Download App:
  • android
  • ios