ರಾಜ್ಕೋಟ್ನಲ್ಲಿ ಮೊದಲ ಟೆಸ್ಟ್ ಆಡುವ ಸಂದರ್ಭದಲ್ಲಿ ಹೊಟೇಲ್ ಬಿಲ್ ಕೊಡುವಾಗ ನನ್ನ ಪರ್ಸ್ನಲ್ಲಿ ಹಳೆಯ 500 ಮತ್ತು 1000 ನೋಟುಗಳಿದ್ದವು. ಈಗ ನಾನು ಆ ನೋಟುಗಳನ್ನ ನನ್ನ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಲು ಇಟ್ಟುಕೊಳ್ಳುತ್ತೇನೆ ಎಂದು ವಿರಾಟ್ ಹೇಳಿಕೊಂಡಿದ್ದಾರೆ.
ವಿಶಾಖಪಟ್ಟಣ(ನ.16): 500 ಹಾಗೂ 1000 ರೂಪಾಯಿ ನೋಟುಗಳನ್ನ ನಿಷೇಧಿಸಿರುವ ಪ್ರಧಾನಿ ನರೇಂದ್ರ ಮೋದಿಯನ್ನ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ. ಇಂತಹ ಬೆಳವಣಿಗೆಯನ್ನ ನಾನು ನೋಡಿಯೇ ಇರಲಿಲ್ಲ ಎಂದು ಕೊಹ್ಲಿ ಬಣ್ಣಿಸಿದ್ದಾರೆ.
ರಾಜ್ಕೋಟ್ನಲ್ಲಿ ಮೊದಲ ಟೆಸ್ಟ್ ಆಡುವ ಸಂದರ್ಭದಲ್ಲಿ ಹೊಟೇಲ್ ಬಿಲ್ ಕೊಡುವಾಗ ನನ್ನ ಪರ್ಸ್ನಲ್ಲಿ ಹಳೆಯ 500 ಮತ್ತು 1000 ನೋಟುಗಳಿದ್ದವು. ಈಗ ನಾನು ಆ ನೋಟುಗಳನ್ನ ನನ್ನ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಲು ಇಟ್ಟುಕೊಳ್ಳುತ್ತೇನೆ ಎಂದು ವಿರಾಟ್ ಹೇಳಿಕೊಂಡಿದ್ದಾರೆ.
ನಾಳೆಯಿಂದ ಭಾರತ-ಇಂಗ್ಲೆಂಡ್ 2ನೇ ಟೆಸ್ಟ್ ವೈಜಾಕ್ನಲ್ಲಿ ಆರಂಭವಾಗಲಿದೆ. ಟೆಸ್ಟ್ ಬಗ್ಗೆ ಪತ್ರಿಕಾಗೋಷ್ಠಿ ನಡೆಯುವಾಗ ಈ ಮಾತುಗಳನ್ನ ಕೊಹ್ಲಿ ಆಡಿದ್ದಾರೆ.