ಶಿರಸಿ ಜಾತ್ರೆ ಸಂಪನ್ನ, ಕಮಾಲ್ ಮಾಡಿದ ಇಕೋ ಗ್ರೀನ್ ಪ್ಯಾನಲ್ಸ್ !
ಶಿರಸಿ ಮಾರಿಕಾಂಬೆ ಜಾತ್ರೆ ಸಂಪನ್ನ
ಜಾತ್ರೆಯಲ್ಲಿ ಕಮಾಲ್ ಮಾಡಿದ ಇಕೋ ಗ್ರೀನ್ ಪ್ಯಾನೆಲ್ಸ್
ಪಾಸ್ಟಿಕ್ ತ್ಯಾಜ್ಯಕ್ಕೆ ಹರಿಹಾರ ಎನ್ನುವಂತಿರುವ ಉತ್ಪನ್ನಗಳು
ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು/ಶಿರಸಿ (ಮಾ.23): ಪ್ಲಾಸ್ಟಿಕ್ ತ್ಯಾಜ್ಯಕ್ಕೆ (Plastic Waste) ಪರಿಹಾರ ಎನ್ನುವಂತಿದೆ ಈ ಉತ್ಪನ್ನಗಳು. ತಗಡಿನ ಮನೆ, ಪ್ಲೈವುಡ್ ಬಳಸುವ ಜಾಗಗಳಲ್ಲಿ, ಸಿಮೆಂಟ್ ಶೀಟ್ ಬಳಕೆಗೂ ಇವು ಪರ್ಯಾಯವಾಗಿದೆ. ಅದೇ ಮಲ್ನಾಡ್ ಎಂಟರ್ ಪ್ರೈಸಸ್ ನ ಇಕೋ ಗ್ರೀನ್ ಪ್ಯಾನಲ್ಸ್ (Eco Green Panel). ಇಕೋ ಗ್ರೀನ್ ಪ್ಯಾನಲ್, ಶಿರಸಿಯ ಮಾರಿಕಾಂಬಾ ಜಾತ್ರೆಯಲ್ಲೂ ಜನರಿಂದ ಸೈ ಎನಿಸಿಕೊಂಡಿವೆ.
ಹೌದು ಒಮ್ಮೆ ಬಳಸಿ ಬಿಸಾಡುವ, ಲೇಸ್, ಕುರ್ಕುರೆ, ಹಾಲಿನ ಪ್ಯಾಕೆಟ್, ಟ್ಯಾಬ್ಲೆಟ್‌ಗಳ ಕವರ್, ಔಷಧ ಬಾಟಲ್ ತ್ಯಾಜ್ಯಗಳೇ ಮಲ್ನಾಡ್ ಇಕೋ ಗ್ರೀನ್ ಪ್ಯಾನಲ್ ಗೆ ಕಚ್ಚಾವಸ್ತು. ಇವುಗಳನ್ನು ಚಿಕ್ಕ ಚಿಕ್ಕ ಪೀಸ್ ಗಳನ್ನಾಗಿ ಮಾಡಿ, ಚೆನ್ನಾಗಿ ತೊಳೆದು, ಒಣಗಿಸಿ, ಕಾಯಿಸಿ ಬೇಕಾದ ಆಕಾರಕ್ಕೆ ಮೌಲ್ಡ್ ಮಾಡಲಾಗುತ್ತದೆ.
ಬೆಂಗಳೂರಲ್ಲಿ ಇಕೋ ಗ್ರೀನ್ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದ ಮಲ್ನಾಡ್ ಎಂಟರ್ ಪ್ರೈಸಸ್ ಸಿಇಓ ಹರೀಶ್ ಹೆಗಡೆ (malnad enterprises CEO harish Hegde), ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಲು, ಸ್ವಚ್ಛತೆಯ ದೃಷ್ಟಿಯಿಂದ ಈ ಉತ್ಪನ್ನಗಳನ್ನು ತಯಾರಿಸುತ್ತಿದ್ದೇವೆ. ಶಿರಸಿಯ ಸುತ್ತಮುತ್ತ ಸುಮಾರು 100 ಕ್ಕೂ ಹೆಚ್ಚು ಪ್ರಾಜೆಕ್ಟ್ ಗಳನ್ನ ಮಾಡಿದ್ದೇವೆ. ಜನರ ಪೋತ್ಸಾಹ ಕೂಡ ಸಿಕ್ತಿದೆ ಅಂದ್ರು. ಶಿರಸಿ ಮಾರಿಕಾಂಬೆ ಜಾತ್ರೆಯಲ್ಲೂ ಕೂಡ ಇಕೋ ಗ್ರೀನ್ ಪ್ಯಾನಲ್ ಬಳಸಿದ ಮೂತ್ರಾಲಯ, ತಳ್ಳುಗಾಡಿ, ಕಸದಡಬ್ಬಿಗಳ ಅಳವಡಿಸಲಾಗಿತ್ತು. ಉತ್ತಮ ಪ್ರತಿಕ್ರಿಯೆ ಕೂಡ ಬಂದಿದೆ
ಮಾರಿಕಾಂಬಾ ಜಾತ್ರೆಯಲ್ಲಿ ಮೊದಲ ಬಾರಿ ಇಕೋ ಗ್ರೀನ್ ಪ್ಯಾನಲ್‌ನ ಎರಡು ತಳ್ಳುಗಾಡಿಗಳನ್ನು ಕಸ ನಿರ್ವಹಣೆಗೆ ಬಳಸಲಾಗಿತ್ತು. ರಾಯಪ ಹುಲೇಕಲ್ ಶಾಲೆಯ ಆವರಣ ಹಾಗೂ ದೇವಿಕೆರೆ ಎರಡು ಕಡೆ ಸಾರ್ವಜನಿಕ ಮೂತ್ರಾಲಯವನ್ನು ನಿರ್ಮಿಸಲಾಗಿತ್ತು. ಕಸದ ತೊಟ್ಟಿಯೂ ಇದೆ ಪ್ಯಾನಲ್ ಬಳಸಿ ಮಾಡಲಾಗಿತ್ತು.
ಅಲ್ಯುಮೀನಿಯಂ ಹಾಗೂ ಮಲ್ಟಿ ಲೇಯರ್ ಆಗಿರುವುದರಿಂದ ಈ ಇಕೋ ಗ್ರೀನ್ ಪ್ಯಾನಲ್ ಗಲಕು ಹೆಚ್ಚು ಬಾಳಿಕೆ ಹೆಚ್ಚು ಬರುತ್ತದೆ ಎಂದು ಹರೀಶ್ ಹೆಗಡೆ ಹೇಳಿದ್ರು. ಇಕೋ ಗ್ರೀನ್ ಪ್ಯಾನಲ್ ಬಳಕೆ ಸ್ವಚ್ಛ ಭಾರತ್ ಕನಸನ್ನೂ ಕೂಡ ಸಾಕಾರಗೊಳಿಸುತ್ತದೆ. ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಲು, ಸ್ವಚ್ಛತೆಯ ದೃಷ್ಟಿಯಿಂದ ಈ ಉತ್ಪನ್ನಗಳನ್ನು ತಯಾರಿಸುತ್ತಿದ್ದೇವೆ. ಇದಕ್ಕೆ ಜನರ ಪೋತ್ಸಾಹ, ಸಹಕಾರ ಇನ್ನಷ್ಟು ಬೇಕಿದೆ ಅಂತ ಹರೀಶ್ ಅಭಿಪ್ರಾಯಪಟ್ಡರು.
Uttara Kannada: ಶಿರಸಿ ಮಾರಿಕಾಂಬಾ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಮಂದಿ ಭಾಗಿ
ಈ ಇಕೋ ಗ್ರೀನ್ ಪ್ಯಾನಲ್ ಗಳು ಬೇಸಿಗೆಯಲ್ಲಿ ಸೆಖೆಯಾಗದು. ಮಳೆ ಬಂದಾಗ ಹೆಚ್ಚು ಶಬ್ದ ಕೂಡ ಉಂಟಾಗುವುದಿಲ್ಲ. ಅಲ್ಲದೆ ಇವು ತುಕ್ಕು ಹಿಡಿಯದ ಕಾರಣ ಇದರ ಬಳಕೆ ಸಾಕಷ್ಟು ಲಾಭದಾಯಕವೂ ಆಗಿದೆ. ಕಳೆದ 25-30 ವರ್ಷಗಳಿಂದ ಈ ಸಂಸ್ಥೆ ಈ ರೀತಿಯ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು, ರೈತರಿಗೂ ವಿವಿಧ ರೀತಿಯಲ್ಲಿ ಅನುಕೂಲವಾಗುವ ಉತ್ಪನ್ನಗಳಾಗಿದೆ.
Uttara Kannada: ಶಿರಸಿಯಲ್ಲಿ ಸಂಭ್ರಮದ ಮಾರಿಕಾಂಬೆ ಜಾತ್ರಾ ಮಹೋತ್ಸವ
ವುದೇ ಕೆಮಿಕಲ್ ಉಪಯೋಗ ಮಾಡದೇ ನೈಸರ್ಗಿಕವಾಗಿ ಇದನ್ನು ತಯಾರು ಮಾಡಲಾಗುತ್ತಿದ್ದು ಪರಿಸರ ಪೂರಕವಾದ ವಸ್ತು ಇದಾಗಿದೆ. ಇದರಿಂದ ಎಲ್ಲರಿಗೂ ಅನುಕೂಲವಿದೆ ಎಂದು ಮಲ್ಲಾಡ್ ಎಂಟರ್ ಪೈಸಸ್ ಮಾಲಕ ಹರೀಶ ಹೆಗಡೆ ಹೇಳಿದ್ದಾರೆ.