ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ವರಾಹಿ ಜಲ ವಿದ್ಯುತ್ ಯೋಜನಾ ಪ್ರದೇಶದ ಅಸುಪಾಸಿನಲ್ಲಿ ಸೋಮವಾರವೂ ಲಘು ಭೂಕಂಪನವಾಗಿದೆ.
ಹೊಸನಗರ: ಭಾನುವಾರ ಭೂಕಂಪನಕ್ಕೆ ಒಳಗಾಗಿದ್ದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ವರಾಹಿ ಜಲ ವಿದ್ಯುತ್ ಯೋಜನಾ ಪ್ರದೇಶದ ಅಸುಪಾಸಿನಲ್ಲಿ ಸೋಮವಾರವೂ ಲಘುಭೂಕಂಪನವಾಗಿದೆ.
ಮಾಸ್ತಿಕಟ್ಟೆ, ಯಡೂರು, ಸುಳಗೋಡು ಹಾಗೂ ಮೇಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ 12.20ಕ್ಕೆ ಮತ್ತೆ ಲಘು ಭೂಕಂಪನ ಆಗಿರುವ ಅನುಭವವಾಗಿದ್ದು ಭೂಮಿ ನಡುಗಿದ ಶಬ್ದಕ್ಕೆ ಜನರು ಭಯಭೀತರಾಗಿ ಮನೆಯಿಂದ ರಸ್ತೆಗೆ ಬಂದಿದ್ದಾರೆ.
ಶಾಲೆಯಲ್ಲಿ ಮಕ್ಕಳು ಸಹ ಲಘು ಭೂಕಂಪನಕ್ಕೆ ಹೆದರಿ ಕೆಲ ಕಾಲ ಶಾಲೆ ಬಿಟ್ಟು ಶಿಕ್ಷಕರ ಜತೆಗೆ ಹೊರಗೋಡಿ ಬಂದಿದ್ದಾರೆ. ಒಮ್ಮೆ ಭೂಕಂಪನದ ನಂತರ ಈ ರೀತಿಯ ಸರಣಿ ಕಂಪನಗಳು ನಡೆಯುವುದು ಸಹಜ ಪ್ರಕ್ರಿಯೆಯಾಗಿದ್ದು ಇದನ್ನು ಪಶ್ಚಾತ್ ಕಂಪನ ಎಂದು ಕರೆಯುತ್ತಾರೆ. ಇದರಿಂದ ಯಾರು ಭಯಪಡಬೇಕಾದ ಅಗತ್ಯವಿಲ್ಲ ಎಂದು ಭೂವಿಜ್ಞಾನಿಗಳು ತಿಳಿಸಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 5, 2019, 11:22 AM IST