Asianet Suvarna News Asianet Suvarna News

ಡಿವೈಎಸ್‌ಪಿ ಗಣಪತಿ ಕೇಸಲ್ಲಿ ಜಾರ್ಜ್‌ಗೆ ಕ್ಲೀನ್‌ಚಿಟ್!

ಗಣಪತಿ ಕೇಸಲ್ಲಿ ಜಾಜ್‌ರ್‍ಗೆ ಕ್ಲೀನ್‌ಚಿಟ್| ಆತ್ಮಹತ್ಯೆಗೆ ಪ್ರಚೋದನೆ ಆರೋಪಕ್ಕೆ ಯಾವುದೇ ಪುರಾವೆ ಇಲ್ಲ: ಸಿಬಿಐ| ಚೆನ್ನೈನ ಸಿಬಿಐ ತಂಡದಿಂದ ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಕೆ

DySP Ganapathy suicide CBI gives clean chit to former home minister KJ George
Author
Bangalore, First Published Nov 22, 2019, 8:13 AM IST

ಬೆಂಗಳೂರು[ನ.22]: ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆಗೆ ಅಂದಿನ ಗೃಹ ಸಚಿವರಾಗಿದ್ದ ಕೆ.ಜೆ. ಜಾಜ್‌ರ್‍ ಅವರ ಪ್ರಚೋದನೆ ಇತ್ತು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಸಂಸ್ಥೆ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಹೇಳಿದೆ.

ಗಣಪತಿ ಮಾಡಿದ್ದ ಆರೋಪಗಳಿಗೂ ಜಾಜ್‌ರ್‍ಗೂ ಸಂಬಂಧವಿಲ್ಲ. 2008ರಲ್ಲಿ ನಡೆದಿರುವ ಘಟನೆಗಳನ್ನು ನೆಪವಾಗಿ ಇಟ್ಟುಕೊಂಡು, ಜಾಜ್‌ರ್‍ ಕಿರುಕುಳ ನೀಡಿದ್ದಾರೆ ಎಂದು ನಂಬುವುದಕ್ಕೆ ಆಧಾರಗಳಿಲ್ಲ ಎಂದು ಸಿಬಿಐನ ಚೆನ್ನೈ ತಂಡ ಸಲ್ಲಿಸಿರುವ ‘ಬಿ’ ವರದಿ ಹೇಳುತ್ತದೆ.

ಇನ್ನು ಐಪಿಎಸ್‌ ಅಧಿಕಾರಿಗಳಾದ ಪ್ರಣಬ್‌ ಮೊಹಂತಿ ಹಾಗೂ ಪ್ರಸಾದ್‌ ಅವರ ಪಾತ್ರ ಪ್ರಕರಣದಲ್ಲಿ ಇದ್ದಂತೆ ಇಲ್ಲ. ಗಣಪತಿ ಅವರು ಸೇವೆಯಲ್ಲಿದ್ದ ಸಮಯದಲ್ಲಿ ಕರ್ತವ್ಯಲೋಪ ಎಸಗಿರುವ ಹಲವು ನಿದರ್ಶನಗಳಿವೆ. ಆದರೆ, ಅದಕ್ಕೆ ಸಂಬಂಧಪಟ್ಟಂತೆ ಆಗ್ಗಿಂದಾಗ್ಗೆ ಶಿಸ್ತು ಕ್ರಮಗಳನ್ನು ಸಂಬಂಧಪಟ್ಟವರು ಕೈಗೊಂಡಿದ್ದಾರೆ. ಇದು ಬಡ್ತಿ ಅಥವಾ ವೇತನ ಹೆಚ್ಚಳದ ಮೇಲೆ ಪರಿಣಾಮ ಬೀರಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಗಣಪತಿ ಅವರು ಆತ್ಮಹತ್ಯೆಗೂ ಮುನ್ನ ಸ್ಥಳೀಯ ಟಿ.ವಿ. ಚಾನಲ್‌ಗೆ ನೀಡಿದ್ದ ಸಂದರ್ಶನದಲ್ಲಿ ಜಾಜ್‌ರ್‍ ಹಾಗೂ ಪೊಲೀಸ್‌ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಆತ್ಮಹತ್ಯೆ ಪ್ರಕರಣ ತೀವ್ರ ಸಂಚಲನ ಸೃಷ್ಟಿಸಿತ್ತು. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಜಾಜ್‌ರ್‍ ಅವರ ಮೇಲೆ ಆರೋಪ ಕೇಳಿ ಬಂದ ಕಾರಣ ಜಾಜ್‌ರ್‍ ಸಚಿವ ಸ್ಥಾನಕ್ಕೆ ರಾಜೀನಾಮೆ ಕೂಡ ಸಲ್ಲಿಸಿದ್ದರು.

Follow Us:
Download App:
  • android
  • ios