Asianet Suvarna News Asianet Suvarna News

ಹಳ್ಳಿ ಶಾಲೆಗಳಿಗೆ ಸರ್ಕಾರದ ಗುಡ್ ನ್ಯೂಸ್

ಹಳ್ಳಿ ಶಾಲೆಗಳಿಗೆ ಇನ್ಮುಂದೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತದೆ.  ಜಲಶಕ್ತಿ ಮಿಷನ್ ಯೋಜನೆ ಅಡಿ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ. 

Drinking Water facility to Village School Says Minister KS Eshwarappa snr
Author
Bengaluru, First Published Mar 24, 2021, 9:56 AM IST

ವಿಧಾನ ಪರಿಷತ್‌ (ಮಾ.24):  ರಾಜ್ಯದ ಗ್ರಾಮೀಣ ಭಾಗದಲ್ಲಿ ಇರುವ ಎಲ್ಲ ಶಾಲೆ, ಅಂಗನವಾಡಿ ಕೇಂದ್ರ ಮತ್ತು ಆಶ್ರಮ ಶಾಲೆಗಳಿಗೆ ಕುಡಿಯವ ನೀರು ಒದಗಿಸಲು ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದ್ದಾರೆ.

ಜೆಡಿಎಸ್‌ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಅವರ ಗಮನ ಸೆಳೆಯುವ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರದ ಜಲಶಕ್ತಿ ಮಂತ್ರಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ‘ಜಲಜೀವನ ಮಿಷನ್‌’ನ 100 ದಿನಗಳ ಅಭಿಯಾನದ ಅಡಿ ಕುಡಿಯಲು ಹಾಗೂ ಇತರ ಬಳಕೆಗೆ ನೀರು ಪೂರೈಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಶುದ್ಧ ನೀರಿನ ಘಟಕಗಳಿಂದ ಶಾಲೆಗೆ ಹಾಗೂ ಅಂಗನವಾಡಿಗಳಿಗೆ ಗ್ರಾಮ ಪಂಚಾಯಿತಿಯಿಂದ ನೀರು ಪೂರೈಸುವಂತೆ ಈಗಾಗಲೇ ಸರ್ಕಾರ ಆದೇಶಿಸಿದೆ ಎಂದರು.

'ವಿಶ್ವನಾಥ್ ಪ್ರೆಸ್ ಮೀಟ್ ಕರೆದು BJP,ಕಾಂಗ್ರೆಸ್, ಜೆಡಿಎಸ್ ಯಾವ್ದೆಂದು ಹೇಳಲಿ' ...

ಒಂದು ವೇಳೆ ಅಂಗನವಾಡಿ ಕೇಂದ್ರ ಖಾಸಗಿ ಕಟ್ಟಡದಲ್ಲಿ ಇದ್ದರೂ ನಳ ನೀರಿನ ವ್ಯವಸ್ಥೆ ಕಲ್ಪಿಸಿ ಅದಕ್ಕೆ ತಗಲುವ ವೆಚ್ಚವನ್ನು ಕಟ್ಟಡ ಮಾಲೀಕರಿಗೆ ಸಲ್ಲಿಸುವ ಬಾಡಿಗೆ ಹಣದಲ್ಲಿ ಪಡೆಯಲು ಸೂಚಿಸಲಾಗಿದೆ. ಕುಡಿಯುವ ನೀರು ಒದಗಿಸಲು ಹಣದ ಕೊರತೆ ಇಲ್ಲ. ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಜೊತೆಗೆ ಶಾಲೆಗಳಿಗೆ ಶೌಚಾಲಯ ನಿರ್ಮಿಸಲಾಗುವುದು. ನರೇಗಾ ಮೂಲಕ ಶಾಲೆಗಳಿಗೆ ಕಾಂಪೌಂಡ್‌ ನಿರ್ಮಿಸಲಾಗುವುದು ಎಂದು ಸಚಿವ ಈಶ್ವರಪ್ಪ ತಿಳಿಸಿದರು.

Follow Us:
Download App:
  • android
  • ios