Asianet Suvarna News Asianet Suvarna News

ಜಯದೇವ ಆಸ್ಪತ್ರೆ ಪ್ರಭಾರಿ ನಿರ್ದೇಶಕರಾಗಿ ಡಾ.ರವೀಂದ್ರನಾಥ್ ನೇಮಕ: ಡಾ.ಸಿ.ಎನ್.ಮಂಜುನಾಥ್ ನಿರ್ಗಮನ

ರಾಜ್ಯದ ಪ್ರತಿಷ್ಠಿತ ಹೃದ್ರೋಗ ಆಸ್ಪತ್ರೆ ಜಯದೇವ ಆಸ್ಪತ್ರೆ ಪ್ರಭಾರಿ ನಿರ್ದೇಶಕರನ್ನಾಗಿ ಡಾ.ರವೀಂದ್ರನಾಥ್ ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

Dr Ravindranath selected as Jayadeva Hospital Director in Charge and Dr CN Manjunath retiral sat
Author
First Published Jan 31, 2024, 7:14 PM IST

ಬೆಂಗಳೂರು  (ಜ.31): ರಾಜ್ಯದ ಪ್ರತಿಷ್ಠಿತ ಹೃದ್ರೋಗ ಆಸ್ಪತ್ರೆಯಾಗಿರುವ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರು ಇಂದು ನಿವೃತ್ತಿಯಾದ ಬೆನ್ನಲ್ಲಿಯೇ ಡಾ.ರವೀಂದ್ರನಾಥ್ ಅವರನ್ನು ಪ್ರಭಾರಿ ನಿರ್ದೇಶಕರನ್ನಾಗಿ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

ಡಾ.ಸಿ.ಎನ್. ಮಂಜುನಾಥ್ ಅವರು ಜಯದೇವ ಆಸ್ಪತ್ರೆ ನಿರ್ದೇಶಕ ಸ್ಥಾನದಿಂದ ನಿವೃತ್ತಿ ಹೊಂದಿದ ಬೆನ್ನಲ್ಲಿಯೇ ಈ ಸ್ಥಾನಕ್ಕೆ ಪ್ರಭಾರಿ ನಿರ್ದೇಶಕರನ್ನಾಗಿ ಡಾ. ರವಿಂದ್ರನಾಥ್ ಅವರನ್ನು ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ರವೀಂದ್ರನಾಥ್ ಅವರು ಜಯದೇವ ಆಸ್ಪತ್ರೆ ಪ್ರಭಾರಿ ಆಗಿ ಮುಂದುವರೆಯಲಿದ್ದು, ಶಾಶ್ವತ ನಿರ್ದೇಶಕರ ಆಯ್ಕೆಗೆ ಸರ್ಕಾರ ಹಿಂದೇಟು ಹಾಕಿದೆ. ಈಗ 69 ವಯಸ್ಸಾಗಿರುವ ಡಾ.ರವೀಂದ್ರನಾಥ್ ಅವರು ಜಯದೇವ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸ್ತಿದ್ದರು. ಇವರು ಈ ಹಿಂದೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ಕುಲಪತಿಯಾಗಿ ಕಾರ್ಯ ನಿರ್ವಹಿಸಿದ್ದರು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಅವಧಿ ವಿಸ್ತರಣೆ: ಸರ್ಕಾರದ ಕೈ ಸೇರಲಿದೆ ಜಾತಿಗಣತಿ ವರದಿ

ರಾಜ್ಯದಲ್ಲಿ ನಿಗಮ ಮಂಡಳಿಗಳು ಹಾಗೂ ಸರ್ಕಾರಿ ಸಂಸ್ಥೆಗಳ ಮುಖ್ಯಸ್ಥರ ನೇಮಕದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆಯನ್ನು ನಡೆಸಲಾಗುತ್ತದೆ. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಸಲಾಗುವ ಜಯದೇವ ಹೃದ್ರೋಗ ಸಂಸ್ಥೆಯ ಬೋರ್ಡ್‌ ಮೀಟಿಂಗ್‌ನಲ್ಲಿ ಅಧಿಕೃತವಾಗಿ ನಿರ್ದೇಶಕರನ್ನು ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ ಬೋರ್ಡ್‌ ಮೀಟಿಂಗ್ ನಡೆದು, ಶಾಶ್ವತ ನಿರ್ದೇಶಕರ ಆಯ್ಕೆಯವರೆಗೆ ಜಯದೇವ ಆಸ್ಪತ್ರೆಗೆ ಡಾ. ರವೀಂದ್ರನಾಥ್ ಅವರು ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಡಾ.ಮಂಜುನಾಥ್‌ಗೆ 'ಹೃದಯ'ಸರ್ಶಿ ಬೀಳ್ಕೊಡುಗೆ
ಯಾವ ಖಾಸಗಿ ಆಸ್ಪತ್ರೆಗಳಿಗೂ ಕಡಿಮೆ ಇಲ್ಲದಂತೆ ಏಷ್ಯಾದಲ್ಲೇ ಅತಿ ದೊಡ್ಡ ಆಸ್ಪತ್ರೆಯಾಗಿ ಜಯದೇವ ಹೃದ್ರೋಗ ಸಂಸ್ಥೆ ಬೆಳೆಯಲು ಶ್ರಮಿಸಿದ್ದ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಮಂಗಳವಾರ ಭಾರವಾದ ಹೃದಯದಿಂದ ಬೀಳ್ಕೊಡುಗೆ ನೀಡಿದರು. ಇನ್ನು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಸ್ಥಾನದಿಂದ ನಿರ್ಗಮಿಸುತ್ತಿರುವ ಮಂಜುನಾಥ್ ಅವರಿಗೆ ಸಂಸ್ಥೆಯಲ್ಲಿ  ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭಕ್ಕೆ ಆಗಮಿಸಿದಾಗ ಇಲ್ಲಿನ ನೂರಾರು ಸಿಬ್ಬಂದಿ ಆರತಿ ಬೆಳಗಿ, ಪುಷ್ಪವೃಷ್ಟಿ ಸುರಿಸಿ, ಹೂಗುಚ್ಛ ನೀಡಿ ಭಾರವಾದ ಹೃದಯದಿಂದ ಸ್ವಾಗತಿಸಿದ್ದರು. 

ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವಧಿ ಮುಕ್ತಾಯ: ಕಲಬುರಗಿ ಆಸ್ಪತ್ರೆ ಉದ್ಘಾಟಿಸೋ ಆಸೆಗೆ ತಣ್ಣೀರು?

ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ್ದ ಮಂಜುನಾಥ್, ನಾನು ನಿರ್ದೇಶಕನಾದಾಗ ಬಡವರ ಆರೋಗ್ಯ ನಿಧಿ 5 ಲಕ್ಷ ರೂ. ಇತ್ತು. ಈಗ 2,150 ಕೋಟಿ ಆಗಿದೆ. ದೇಣಿಗೆಯ ಮೊತ್ತ ಕೂಡ 5 ಲಕ್ಷ ರೂ. ಇದ್ದದ್ದು, ಈಗ 250 ಕೋಟಿ ರೂ. ಆಗಿದೆ. ಆಸ್ಪತ್ರೆ ಎಂದರೆ ಕೇವಲ ಕಟ್ಟಡ, ಉಪಕರಣ, ಚಿಕಿತ್ಸೆ ಇದ್ದರಷ್ಟೇ ಸಾಲದು. ಮಾನವೀಯತೆ, ಹೃದಯವಂತಿಕೆಯಿಂದ ಚಿಕಿತ ನೀಡುವ ಮನೋಭಾವ ಇರಬೇಕು ಎಂಬು ವಾತಾವರಣ ಇಲ್ಲಿ ನಿರ್ಮಿಸಲಾಗಿದೆ. ಜಯದೇವ ಆಸ್ಪತ್ರೆಯನ್ನು ವಿಶ್ವ ದರ್ಜೆಯ ಆಸ್ಪತ್ರೆ ಮಾಡುವ ಕನಸಿತ್ತು. ಆದರೆ, ಈ ಮಟ್ಟಕ್ಕೆ ಆಗುತ್ತದೆ ಎಂದು ನನಗೂ ಗೊತ್ತಿರಲಿಲ್ಲ. ನಮ್ಮ ಸೇವೆ, ಸಾಧನೆ ಬಗ್ಗೆ ಜನತೆ ಮಾತನಾಡುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು.

Follow Us:
Download App:
  • android
  • ios