ಬಯಲುಸೀಮೆಯ ನೀರಾವರಿ ಹೋರಾಟಗಾರ, ಚಿಂತಕ ಹಾಗೂ ವೈದ್ಯ ಡಾ. ಮಧುಸೀತಪ್ಪ(59) ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಾಗೇಪಲ್ಲಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ಬುಧವಾರ ರಾತ್ರಿ ಈ ಘಟನೆ ಸಂಭವಿಸಿದೆ. 

ಚಿಕ್ಕಬಳ್ಳಾಪುರ (ಆ.28): ಬಯಲುಸೀಮೆಯ ನೀರಾವರಿ ಹೋರಾಟಗಾರ, ಚಿಂತಕ ಹಾಗೂ ವೈದ್ಯರಾಗಿದ್ದ ಡಾ. ಮಧುಸೀತಪ್ಪ(59) ಬುಧವಾರ ರಾತ್ರಿ ಬಾಗೇಪಲ್ಲಿಯ ಶಿವಪುರದ ತಮ್ಮ ಫಾರ್ಮ್ ಹೌಸ್ ನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಲಂಡನ್ ನಲ್ಲಿ ಅತ್ಯುನ್ನತ ವೈದ್ಯರಾಗಿದ್ದ ಮೃತ ಮಧುಸೀತಪ್ಪ ಅವರು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸಿಕೊಡುವ ಕನಸು ಕಂಡಿದ್ದರು. ಅಷ್ಟೇ ಅಲ್ಲದೇ ವೈದ್ಯ ಮಧುಸೀತಪ್ಪನವರು ನೀರಾವರಿ ಹೋರಾಟಕ್ಕೆ ಸಂಬಂಧಿಸಿದಂಟೆ ಡಾಕ್ಯುಮೆಂಟರಿ, ಜಾನಪದ ಹಾಡುಗಳನ್ನು ನಿರ್ಮಿಸಿ ತಮ್ಮದೇ ಆದ ಕಾಣಿಕೆ ನೀಡಿದ್ದರು.

2023 ವಿಧಾನ ಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಎಎಪಿ ಫಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದಕ್ಕೂ ಮೊದಲು ಅವರು ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಲೋಕಸಭಾ ಚುನಾವಣೆಯ ಸ್ಪರ್ಧಾಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ದೊರೆಯದ ಕಾರಣ ಎಎಪಿ ಸೇರಿದ್ದರು.

ಮೃತರ ಪತ್ನಿ ಹಾಗೂ ಪುತ್ರ ಲಂಡನ್ ನಲ್ಲಿಯೇ ವಾಸವಿದ್ದು, ಅವರು ಬಂದ ನಂತರ ಅಂತ್ಯಕಿಯೆ ನಡೆಯಲಿದೆ ಎಂದು ಆಪ್ತರು ತಿಳಿಸಿದ್ದಾರೆ.