Asianet Suvarna News Asianet Suvarna News

ಜಾತಿ ಗಣತಿ ಬಗ್ಗೆ ಅನುಮಾನ: ಸಿದ್ದರಾಮಯ್ಯಗೆ ಸಚಿವ ಈಶ್ವರ ಖಂಡ್ರೆ ಮನವಿ

ಜಾತಿ ಗಣತಿಗೆ ತಾವು ವಿರೋಧವಿಲ್ಲ, ಆದರೆ ಹಿಂದೆ ನಡೆದ ಗಣತಿ ವೇಳೆ ಎಲ್ಲರ ಮನೆಗಳಿಗೆ ಹೋಗಿಲ್ಲ, ಸರಿಯಾಗಿ ಸಮೀಕ್ಷೆ ನಡೆದಿಲ್ಲ ಎಂಬ ದೂರುಗಳು ಇವೆ. 7 ವರ್ಷಗಳ ಹಿಂದೆ ನಡೆದ ಗಣತಿ ಬಗ್ಗೆ ನಮ್ಮ ಅನುಮಾನವಿದೆ. 

Doubt about Caste Census Minister Eshwar Khandre appeals to Siddaramaiah gvd
Author
First Published Dec 20, 2023, 5:43 AM IST

ಬೆಂಗಳೂರು (ಡಿ.20): ಜಾತಿ ಗಣತಿಗೆ ತಾವು ವಿರೋಧವಿಲ್ಲ, ಆದರೆ ಹಿಂದೆ ನಡೆದ ಗಣತಿ ವೇಳೆ ಎಲ್ಲರ ಮನೆಗಳಿಗೆ ಹೋಗಿಲ್ಲ, ಸರಿಯಾಗಿ ಸಮೀಕ್ಷೆ ನಡೆದಿಲ್ಲ ಎಂಬ ದೂರುಗಳು ಇವೆ. 7 ವರ್ಷಗಳ ಹಿಂದೆ ನಡೆದ ಗಣತಿ ಬಗ್ಗೆ ನಮ್ಮ ಅನುಮಾನವಿದೆ. ಹಾಗಾಗಿ ಹೊಸದಾಗಿ ಜಾತಿ ಗಣತಿ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿರುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿ ನಡೆಯಬೇಕು. 

ಅವಕಾಶ ವಂಚಿತರಿಗೆ ಹೆಚ್ಚಿನ ಅನುಕೂಲ ದೊರೆಯಬೇಕು ಎಂದು ಹೇಳಿದ್ದಾರೆ. ಈ ವಿಷಯದಲ್ಲಿ ನಮ್ಮ ಸಹಮತ ಇದೆ. ಆದರೆ ಏಳು ವರ್ಷಗಳ ಹಿಂದೆ ನಡೆದ ಗಣತಿ ಬಗ್ಗೆ ಅನುಮಾನ ಇದೆ. ಮನೆ ಮನೆಗಳಿಗೆ ಭೇಟಿ ನೀಡಿ ಗಣತಿ ಮಾಡಿಲ್ಲ ಎಂಬ ದೂರುಗಳು ಇವೆ. ಕೆಲವರು ಸರ್ಕಾರಿ ಸೌಲಭ್ಯಕ್ಕಾಗಿ ಜಾತಿ ಬಳಕೆ ಮಾಡುತ್ತಿದ್ದಾರೆ. ನಡೆದಿರುವ ಜಾತಿ ಗಣತಿಯ ಕುರಿತು ಇರುವ ಅನುಮಾನಗಳನ್ನು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇವೆ. ನಮ್ಮ ಮನವಿಯನ್ನು ಪರಾಮರ್ಶಿಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಂಸದ ಪ್ರತಾಪ್‌ ಸಿಂಹ ಅಪ್ಪಟ ಹಿಂದುತ್ವವಾದಿ: ಕೆ.ಎಸ್.ಈಶ್ವರಪ್ಪ

ಸಮಾವೇಶ: ದಾವಣಗೆರೆಯಲ್ಲಿ ನಡೆಯುತ್ತಿರುವ ವೀರಶೈವ-ಲಿಂಗಾಯತ ಮಹಾಸಮಾವೇಶ ಡಿ. 23,24ರಂದು ನಡೆಯಲಿದೆ. ಮುಂದಿನ ವರ್ಷ ಹೊಸ ಅಧ್ಯಕ್ಷರ ಚುನಾವಣೆ ನಡೆಯಲಿದೆ. ಹೀಗಾಗಿ ಚುನಾವಣೆ ಮುಂಚೆಯೇ ಸಮಾವೇಶ ನಡೆಸಲಾಗುತ್ತಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಧ್ಯಾತ್ಮ ಚಿಂತನ ಜೀವನಕ್ಕೆ ಆಧಾರ: ಆಧ್ಯಾತ್ಮದ ಒಲವು ಹೊಂದಿದ್ದರೆ ಶಾಂತಮಯ, ಶರಣಮಯ ಜೀವನ ಸಾಗಿಸಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ಪಟ್ಟಣದ ಉಪನ್ಯಾಸಕರ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಜೈ ಹನುಮಾನ ಮಂದಿರದ ಕಳಸ ಮೆರವಣಿಗೆ ಮತ್ತು ಕಳಸಾ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಇಂದಿನ ಯಾಂತ್ರಿಕ ಮತ್ತು ತಾಂತ್ರಿಕ ಯುಗದಲ್ಲಿ ಮನುಷ್ಯ ಭೌತಿಕ ಸಂಪತ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಆತ್ಮೀಯತೆ, ಸ್ನೇಹತ್ವ ಕಳೆದುಕೊಳ್ಳುತ್ತಿದ್ದಾನೆ ಎಂದರು.

ರಾಮನ ಭಕ್ತನಾಗಿ ಹನುಮಂತ ಸಲ್ಲಿಸಿದ ಸೇವೆ ಅವಿಸ್ಮರಣೀಯವಾಗಿದೆ. ಯುವಕರು ಟೀವಿ, ಮೊಬೈಲ್‌ನಲ್ಲಿ ಕಾಲ ಹಗರಣ ಮಾಡಿ ಅಮೂಲ್ಯ ಜೀವನ ನಶ್ವರ ಮಾಡಿಕೊಳ್ಳೊತ್ತಿರುವುದು ಖೇದಕರವಾಗಿದೆ ಎಂದರು. ಹನುಮಾನ ಮಂದಿರದ ಜೀರ್ಣೋದ್ಧಾರಕ್ಕಾಗಿ ಅಗತ್ಯವಿರುವ ಅನುದಾನ ಬಿಡುಗಡೆ ಮಾಡುತ್ತೇನೆ. ನಾನು ಸಚಿವನಾದನಂತರ ಜಿಲ್ಲೆಯಾದ್ಯಂತ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿವೆ. ಇನ್ಮುಂದೆಯೂ ಹೆಚ್ಚಿನ ಪ್ರಗತಿ ಮಾಡಲು ತಮ್ಮೆಲ್ಲರ ಸಹಕಾರ ಪ್ರೋತ್ಸಾಹ ಇರಲಿ ಎಂದು ತಿಳಿಸಿದರು.

ನನಗೆ ಈಶ್ವರಪ್ಪ ಭೇಟಿ ಆಗುವ ಅವಶ್ಯಕತೆ ಇಲ್ಲ: ಜಗದೀಶ್‌ ಶೆಟ್ಟರ್‌

ಈ ಸಂದರ್ಭದಲ್ಲಿ ಜೈ ಹನುಮಾನ ಸೇವಾ ಸಮಿತಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ರಾಜಕುಮಾರ ಬಕ್ಕಾ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ಪ್ರಮುಖರಾದ ಪ್ರದೀಪ ಅಷ್ಟೂರೆ, ಅಶೋಕ ಬಾವುಗೆ, ರಾಜಕುಮಾರ ಕಾರಾಮುಂಗೆ, ಶರಣಪ್ಪ ಬಸನಾಳೆ, ಜೈರಾಜ ಪಾತ್ರೆ ಹಾಗೂ ರಾಹುಲ ಪೂಜಾರಿ ಸೇರಿದಂತೆ ಇತರರಿದ್ದರು. ಹಿರಿಯರಾದ ರಾಜಶೇಖರ ಚಿದ್ರೆ ನಿರೂಪಿಸಿ ವಂದಿಸಿದರು.

Follow Us:
Download App:
  • android
  • ios