ಬೆಳಗಾವಿ (ಮಾ.30):  ಮಾಜಿ ಸಚಿವರ ಸಿ.ಡಿ. ಬಹಿರಂಗ ಪ್ರಕರಣ ವಿಚಾರವಾಗಿ ದಯವಿಟ್ಟು ನನ್ನನ್ನು ಏನೂ ಕೇಳಬೇಡಿ. ನಿಮಗೆ ಕೈಮುಗಿಯುತ್ತೇನೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸತೀಶ್‌ ಜಾರಕಿಹೊಳಿ ಹೇಳಿದರು. 

ನಗರದಲ್ಲಿ ಸೋಮವಾರ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳು ಸಿ.ಡಿ. ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿ.ಡಿ. ವಿಚಾರವಾಗಿ ನನ್ನನ್ನು ಏನೂ ಕೇಳಬೇಡಿ ಎಂದು ಕೈ ಮುಗಿದರು. ಸಿ.ಡಿ. ಯುವತಿಯ ಪೋಷಕರು ಆರೋಪ ಮಾಡಿದರೆ ನಾನೇನೂ ಮಾಡಲಿ. 

ಇತ್ತಅವರ ಗೆಲುವಿಗೆ ಡಿಕೆಶಿ ಪಣ : ಅತ್ತ ಡಿಕೆಶಿ ಬಂದರೂ ಬಾರದ ಸತೀಶ್

ಈಗಾಗಲೇ ನಾನು ಸಿ.ಡಿ. ವಿಚಾರದ ಬಗ್ಗೆ ಕೇಳದಂತೆ ಹತ್ತಾರು ಬಾರಿ ಮನವಿ ಮಾಡಿದ್ದೇನೆ. ಸಿ.ಡಿ. ವಿಚಾರ ಹೊರತುಪಡಿಸಿ ಬೇರೆ ಏನಾದರು ಇದ್ದರೆ ಮಾತ್ರ ಕೇಳಿ ಎಂದು ಹೊರಟುಹೋದರು.