Asianet Suvarna News Asianet Suvarna News

ಗಣೇಶ ಹಬ್ಬಕ್ಕೆ ಗೋ ಭಕ್ಷಕರು, ಗೋ ಹಂತಕರಿಂದ ಏನೂ ಖರೀದಿಸಬೇಡಿ: ಪ್ರಮೋದ್ ಮುತಾಲಿಕ್

ಹೂ ಹಣ್ಣು ತರಕಾರಿ ಅಲಕಾಂರಿಕ ವಸ್ತುಗಳನ್ನು ಸಹ ಹಲಾಲ್ ಮುಕ್ತವಾಗಿ ಖರೀದಿಸಿ. ಈ ಮೂಲಕ ಮುಸ್ಲಿಂರಿಂದ ಹಬ್ಬಕ್ಕಾಗಿ ಯಾವುದೇ ವಸ್ತುಗಳನ್ನು ಖರೀದಿಸದಂತೆ ಕರೆ ನೀಡಿದ ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ 

Do not purchase any items from Muslims during Ganesh Chaturthi Says Pramod Mutalik grg
Author
First Published Aug 31, 2024, 9:23 PM IST | Last Updated Aug 31, 2024, 9:23 PM IST

ಬೆಂಗಳೂರು(ಆ.31):  ಗೋ ಭಕ್ಷಕರು, ಗೋ ಹಂತಕರಿಂದ ಯಾವುದೇ ರೀತಿಯ ವಸ್ತುಗಳನ್ನು ಖರೀದಿಸಬೇಡಿ, ಹಲಾಲ್ ಮಾಡಿದ್ದು, ಅಪವಿತ್ರವಾದದ್ದು, ಹಾಗಾಗಿ ಯಾರು ಸಹ ಆ ರೀತಿಯ ತಪ್ಪನ್ನು ಮಾಡಬೇಡಿ‌. ಹಲಾಲ್ ಮುಕ್ತ ಗಣೇಶ ಹಬ್ಬ ಮಾಡುವಂತೆ ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮನವಿ ಮಾಡಿದ್ದಾರೆ. 

ಇಂದು(ಶನಿವಾರ) ನಗರದಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್ ಅವರು, ಹೂ ಹಣ್ಣು ತರಕಾರಿ ಅಲಕಾಂರಿಕ ವಸ್ತುಗಳನ್ನು ಸಹ ಹಲಾಲ್ ಮುಕ್ತವಾಗಿ ಖರೀದಿಸಿ. ಈ ಮೂಲಕ ಮುಸ್ಲಿಂರಿಂದ ಹಬ್ಬಕ್ಕಾಗಿ ಯಾವುದೇ ವಸ್ತುಗಳನ್ನು ಖರೀದಿಸದಂತೆ ಕರೆ ನೀಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಹಲಾಲ್ ವಿರುದ್ಧದ ಕೂಗು ಚಾಲ್ತಿಗೆ ಬಂದಿದೆ. 

ಜಮ್ಮು ಕಾಶ್ಮೀರದಲ್ಲಿರುವ ಎಲ್ಲರನ್ನು ಒದ್ದು ಪಾಕಿಸ್ತಾನಕ್ಕೆ ಕಳಿಸಿ: ಪ್ರಮೋದ್ ಮುತಾಲಿಕ್

ಶಾಸ್ತ್ರ ಬದ್ಧವಾದ ಮಣ್ಣಿನ ಗಣಪತಿ ಪೂಜೆ ಮಾಡಬೇಕು, ಪಿಓಪಿ ಗಣೇಶನನ್ನು ಉಪಯೋಗಿಸಬಾರದು. ಮೆರವಣಿಗೆಗಳಲ್ಲಿ ಮಂಟಪಗಳಲ್ಲಿ ಅಶ್ಲೀಲ ಗೀತೆಗಳನ್ನು ಹಾಕದೆ ಭಕ್ತಿ ಗೀತೆಗಳನ್ನು ಹಾಕಿ. ನಮ್ಮ ದೇವರು, ನಮ್ಮ ಗಣೇಶ, ನಮ್ಮ ಸಂಪ್ರದಾಯ ಇಲ್ಲಿ ಅಪವಿತ್ರವಾದದನ್ನು ಮಾಡಬೇಡಿ. ಮದ್ಯ ಸೇವನೆ, ಗುಟ್ಕಾ ಸೇವೆನೆ ಮೆರವಣಿಗೆಯಲ್ಲಿ ಮಾಡಬೇಡಿ ಎಂದು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios