ಸಚಿವ ಡಿ.ಕೆ. ಶಿವಕುಮಾರ್ ಅವರು ಬಳ್ಳಾರಿ ನಾಯಕರಿಗೆ ಖಡಕ್ ಸವಾಲೊಂದನ್ನು ಹಾಕಿದ್ದಾರೆ. ಫಲಿತಾಂಶದ ದಿನ ನನ್ನನ್ನು ಅದೆಲ್ಲಿಗೋ ಕಳುಹಿಸುತ್ತೇನೆ ಎಂದು ಹೇಳಿದ್ದಾರೆ, ಅಲ್ಲಿಗೇ ಕಳುಹಿಸಲಿ, ಆವತ್ತು ಬಳ್ಳಾರಿಯಲ್ಲೇ ಅವರನ್ನು ಭೇಟಿ ಮಾಡ್ತೇನೆ ಎಂದಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ನಡೆಯುವ ಉಪ ಚುನಾವಣೆಯ ಫಲಿತಾಂಶದ ದಿನ ನನ್ನನ್ನು ಅದೆಲ್ಲಿಗೋ ಕಳುಹಿಸುತ್ತೇನೆ ಎಂದು ಹೇಳಿದ್ದಾರೆ, ಅಲ್ಲಿಗೇ ಕಳುಹಿಸಲಿ, ಆವತ್ತು ಬಳ್ಳಾರಿಯಲ್ಲೇ ಅವರನ್ನು ಭೇಟಿ ಮಾಡ್ತೇನೆ. ಶ್ರೀ ರಾಮುಲು ಅಣ್ಣನಿಗೆ ಈ ವಿಷಯ ತಿಳಿಸಿ.
ನ.6ರಂದು ಬಿಜೆಪಿಯ ಜೆ.ಶಾಂತಾ ಗೆದ್ದು ದೆಹಲಿಗೆ ಹೋಗುತ್ತಾರೆ.
ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗುತ್ತಾರೆ ಎಂದ ಶ್ರೀರಾಮುಲು ಅವರಿಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನೀಡಿದ ವ್ಯಂಗ್ಯಭರಿತ ತಿರುಗೇಟು ಇದು.
