ನವದೆಹಲಿ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಉಡುಪಿ ಅಡುಗೆ ಸವಿದ ಗಣ್ಯಾತಿಗಣ್ಯರು!
ಸೋಮವಾರ ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ಜಗತ್ಪ್ರಸಿದ್ಧ ಉಡುಪಿ ಅಡುಗೆಯ ರುಚಿಯನ್ನು ಪ್ರಸಿದ್ಧ ಬಾಣಸಿಗ ಬುಡ್ನಾರು ಸುಬ್ರಹ್ಮಣ್ಯ ಆಚಾರ್ಯರು ತಯಾರಿಸಿದ್ದು, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ , ಕೇಂದ್ರ ಮಂತ್ರಿ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಸವಿದಿದ್ದಾರೆ.
ಉಡುಪಿ (ಮಾ.29): ಸೋಮವಾರ ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ಜಗತ್ಪ್ರಸಿದ್ಧ ಉಡುಪಿ ಅಡುಗೆಯ ರುಚಿಯನ್ನು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ , ಕೇಂದ್ರ ಮಂತ್ರಿ ಅಮಿತ್ ಶಾ ಸೇರಿದಂತೆ ದೇಶಾದ್ಯಂತದಿಂದ ಆಗಮಿಸಿದ್ದ ಇನ್ನೂರಕ್ಕೂ ಅಧಿಕ ಗಣ್ಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗಾಗಿ ಲೋಕ ಪ್ರಸಿದ್ಧ ಉಡುಪಿ ಅಡುಗೆ ತಯಾರಿಸಬೇಕೆಂಬ ಮನವಿಯ ಮೇರೆಗೆ ಉಡುಪಿಯ ಪ್ರಸಿದ್ಧ ಬಾಣಸಿಗ ಬುಡ್ನಾರು ಸುಬ್ರಹ್ಮಣ್ಯ ಆಚಾರ್ಯರು ಭಾನವಾರ ರಾತ್ರಿ ನವದೆಹಲಿಗೆ ತೆರಳಿ ಸೋಮವಾರ ಅಡುಗೆ ತಯಾರಿಸಿದ್ದಾರೆ . ಭಾಗವಹಿಸಿದ್ದ ಎಲ್ಲರೂ ಉಡುಪಿಯ ಅಡುಗೆಯ ಸವಿಯುಂಡು ಬಾಯಿ ಚಪ್ಪರಿಸಿ ಬಹುತ್ ಅಚ್ಚಾ ಥಾ ಎಂದು ಸುಬ್ಬಣ್ಣ ( ಸುಬ್ರಹ್ಮಣ್ಯ ಆಚಾರ್ಯ) ನವರನ್ನು ಪ್ರಶಂಸಿದ್ದಾರೆ .
ಈ ಮೂಲಕ ರಾಜಧಾನಿಯಲ್ಲಿ ಅದೂ ಅಮಿತ್ ಶಾ ನಡ್ಡಾ ರಂಥ ಗಣ್ಯಾತಿಗಣ್ಯರಿಗೆ ಉಡುಪಿ ಅಡುಗೆಯ ಸವಿಯುಣಿಸಿದ ಅತೀವ ಸಂತಸದಲ್ಲಿದ್ದಾರೆ ಸುಬ್ಬಣ್ಣ. ಪ್ರಧಾನಿ ಮೋದಿಯವರೂ ಈ ಸಭೆಯಲ್ಲಿ ಸಂಜೆ ಭಾಗವಹಿಸಿದ್ದರು. ಆದರೆ ಮಧ್ಯಾಹ್ನದ ಊಟಕ್ಕೆ ಬಂದಿರಲಿಲ್ಲ. ಜೆಪಿ ನಡ್ಡಾ ಅವರು ಅಡುಗೆಯ ರುಚಿ ಸವಿದು ಖುದ್ದು ಸುಬ್ಬಣ್ಣ ಅಡುಗೆ ಮಾಡುತ್ತಿದ್ದ ಸ್ಥಳಕ್ಕೆ ಬಂದು ಮಾತನಾಡಿಸಿ ಶಹಬ್ಬಾಸ್ ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾ.ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರೂ ಭೇಟಿಯಾಗಿ ಅಡುಗೆ ಬಹಳ ಬಹಳ ಚೆನ್ನಾಗಿತ್ತು ಅಂತ ಹೇಳಿದ್ದಾರೆ.
ಕರಿದ ಆಹಾರ ಎಷ್ಟ್ ಬೇಕಾದ್ರೂ ತಿನ್ತೀನಿ ಅನ್ನೋ ಪೈಕಿನಾ? ತಯಾರಿಸುವಾಗ ಈ ಟಿಪ್ಸ್ ನೆನಪಿರ್ಲಿ
ಬೆಳಗ್ಗಿನ ಉಪಾಹಾರಕ್ಕೆ ಇಡ್ಲಿ ಸಾಂಬಾರ್ , ಚಟ್ನಿ
ಮಧ್ಯಾಹ್ನದ ಊಟಕ್ಕೆ ಉಪ್ಪಿನಕಾಯಿ , ಹುರುಳಿ ಚಟ್ನಿ , ಕೋಸುಂಬರಿ ಎರಡು ಬಗೆ ಪಲ್ಯ , ಚಿತ್ರಾನ್ನ , ಅನ್ನ ಹಪ್ಪಳ ಸಂಡಿಗೆ , ಸಂಡಿಗೆ ಮೆಣಸು , ಸಾರು , ಗಟ್ಟಿಬಜೆ , ಪೂರಿ ಕೂರ್ಮ , ಮೆಣಸುಕಾಯಿ , ಮಟ್ಟುಗುಳ್ಳದ ಹುಳಿ , ಹಯಗ್ರೀವ ಮಡ್ಡಿ , ಖರ್ಜೂರ ಪಾಯಸ ಮೊಸರು ಮಜ್ಜಿಗೆ ತಯಾರಿಸಿದ್ದಾರೆ ಇತರೆ ಕೆಲವು ಸಿಹಿ ಭಕ್ಷ್ಯ ಗಳನ್ನು ಅಲ್ಲಿಯ ಸ್ಥಳೀಯರೇ ತಯಾರಿಸಿದ್ದಾರೆ.
LPG ಗ್ರಾಹಕರಿಗೆ ಶುಭಸುದ್ದಿ; ಅಡುಗೆ ಅನಿಲ ಸಿಲಿಂಡರ್ ಗೆ ಇನ್ನೂಒಂದು ವರ್ಷ ಸಿಗಲಿದೆ 200ರೂ. ಸಬ್ಸಿಡಿ
ಕಾರ್ಯಕ್ರಮ ಮುಗಿಸಿ ಮಂಗಳವಾರ ಅಪರಾಹ್ನ ವಿಮಾನದ ಮೂಲಕ ಉಡುಪಿಗೆ ಮರಳಿದ ಸುಬ್ಬಣ್ಣ , ಗುರುಗಳಾದ ಶ್ರೀ ಪೇಜಾವರ ಮಠದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಕೃಪೆಯೇ ಇದಕ್ಕೆಲ್ಲ ಕಾರಣ ; ಅವರೇ ನಮಗೆ ಸ್ಫೂರ್ತಿ ಎಂದು ಭಾವುಕರಾಗಿ ನುಡಿದ್ದಾರೆ.