Asianet Suvarna News Asianet Suvarna News

ಮೀನುಗಾರರಂತೆ ರೈತರಿಗೂ ಡಿಸೇಲ್ ಸಬ್ಸೀಡಿ, ಎಕರೆಗೆ 10 ಲೀ: ಬಿಸಿ ಪಾಟೀಲ್

ಮೀನುಗಾರಿಗೆ ಇಲಾಖೆ ಮೀನುಗಾರರಿಗೆ ನೀಡಲಾಗುತ್ತಿರುವ ಡೀಸೆಲ್ ರಿಯಾಯ್ತಿ ಮಾದರಿಯಲ್ಲಿ ಕೃಷಿ ಮಾಡುತ್ತಿರುವ ರೈತರಿಗೂ ಸಿಗಲಿದೆ.

Diesel subsidy for farmers says BC Patil gow
Author
First Published Sep 18, 2022, 9:11 PM IST

ಧಾರವಾಡ (ಸೆ.18): ಮೀನುಗಾರಿಗೆ ಇಲಾಖೆ ಮೀನುಗಾರರಿಗೆ ನೀಡಲಾಗುತ್ತಿರುವ ಡೀಸೆಲ್ ರಿಯಾಯ್ತಿ ಮಾದರಿಯಲ್ಲಿ ಕೃಷಿ ಮಾಡುತ್ತಿರುವ ರೈತರಿಗೂ ರೈತ ಶಕ್ತಿ ಯೋಜನೆ ಮೂಲಕ ಐದು ಎಕರೆ ವರಗೂ ಜಮೀನು ಹೊಂದಿದ ರೈತರಿಗೆ ಡಿಸೈಲ್ ರಿಯಾಯ್ತಿ ನೀಡಲು ರಾಜ್ಯ ಸರ್ಕಾರಕ್ಕೆ ಒಪ್ಪಿದ್ದು ಸದಸ್ಯದಲ್ಲಿ ಹಣ ಬಿಡುಗಡೆಯಾಗಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು. ಕೃಷಿ ವಿಶ್ವವಿದ್ಯಾಲಯದಲ್ಲಿ 'ರೈತರ ಆದಾಯ ದ್ವಿಗುಣಕ್ಕೆ ತಾಂತ್ರಿಕತೆಗಳು; ಘೋಷವಾಕ್ಯದಡಿ ನಾಲ್ಕು ದಿನಗಳು ನಡೆಯುವ ಕೃಷಿ ಮೇಳಕ್ಕೆ ಭಾನುವಾರ ಚಾಲನೆ ನೀಡಿದ ಅವರು, ರೈತರಿಗೆ ಆಶ್ರಯ ಒದಗಿಸಲು 'ರೈತ ಶಕ್ತಿ' ಜಾರಿಗೊಳಿಸಿದೆ. ಸಾಮಾನ್ಯವಾಗಿ ರೈತರು ಬಿತ್ತನೆ ಸೇರಿದಂತೆ ಕೃಷಿ ಚುಟವಟಿಕೆಗೆ ಪ್ರತಿ ಎಕೆರೆಗೆ 25 ಲೀಟರ್ ಡಿಸೇಲ್ ಖರ್ಚು ಮಾಡುತ್ತಾರೆ. ರಾಜ್ಯ ಸರ್ಕಾರದಿಂದ ಪ್ರತಿ ಎಕೆರೆಗೆ  20 ಲೀಟರಗೆ ರು. 25 ರಂತೆ ರಿಯಾಯ್ತಿ ಹಣ ನೀಡಬೇಕೆಂಬುದು ನನ್ನ ಆಗ್ರಹವಾಗಿತ್ತು. ಆದರೆ, ಮುಖ್ಯಮಂತ್ರಿಗಳು ಎಕರೆಗೆ 10 ಲೀಟರಗೆ ರು. 25ರಂತೆ ಐದು ಎಕರೆ ವರೆಗೆ ರು. 1250 ವರೆಗೆ ರಿಯಾಯ್ತಿ ಹಣ ಒದಗಿಸಲು ಒಪ್ಪಿಗೆ ಸೂಚಿಸಿದೆ. ಶೀಘ್ರ ಈ ಯೋಜನೆಗೆ ಅನುದಾನ ದೊರೆಯಲಿದೆ. ಈ ಯೋಜನೆಯಡಿ ಒಟ್ಟು 69 ಲಕ್ಷ ರೈತರು ಯೋಜನೆ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದರು.

ಪ್ರಿಯಾಂಕ ಖರ್ಗೆಗೆ ಕೌರವ ಖ್ಯಾತಿ ಬಿ.ಸಿ. ಪಾಟೀಲ ತೀರುಗೇಟು, ಜೊಲ್ಲು ಸುರಿಸುವಲ್ಲಿ ಕಾಂಗ್ರೆಸಿಗರು ನಿಸ್ಸೀಮರು:
ಜೊಲ್ಲು ಸುರಿಸುವುದರಲ್ಲಿ ಕಾಂಗ್ರೆಸ್ಸಿಗರೇ ನಿಸ್ಸೀಮರು. ಹೈ ಜೀವನ ನಡೆಸಿದ ಅವರಿಗೆ ಜೊಲ್ಲು ಸುರಿಸುವುದು ಚೆನ್ನಾಗಿ ಗೊತ್ತು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ ಬಿಜೆಪಿ ನಾಯಕರು ಜೊಲ್ಲು ಸುರಿಸುತ್ತಾರೆ ಎಂಬ ಹೇಳಿಕೆಗೆ ಭಾನುವಾರ ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಬಿ.ಸಿ.ಪಾಟೀಲ, ಕಾಂಗ್ರೆಸ್ ನಾಯಕರಿಗೆ ವಾಸ್ತವದ ಅರಿವಿಲ್ಲ. ರೈತರ ಬಗ್ಗೆ ಕಾಳಜಿಯಂತೂ ಮೊದಲೇ ಇಲ್ಲ. ಹೀಗಾಗಿ ಮನಸ್ಸಿಗೆ ತೋಚಿದಂತೆ ಎಲುಬಿಲ್ಲದ ನಾಲಿಗೆ ಹರಿಬಿಡುವುದು ಸರಿಯಲ್ಲ. ಈ ಹಿಂದೆಯೇ ಅವರು ಹೆಣ್ಣು ಮಕ್ಕಳ ಬಗ್ಗೆ ಅಸಹ್ಯವಾಗಿ ಮಾತನಾಡಿದ್ದು, ಇದು ಅವರ ಹಾಗೂ ಕಾಂಗ್ರೆಸ್‌ನ ಸಂಸ್ಕೃತಿ ತಿಳಿಸುತ್ತದೆ. ಕೈ ಹಿರಿಯ ನಾಯಕರು ಪ್ರಿಯಾಂಕ ಖರ್ಗೆಗೆ ಸಂಸ್ಕಾರ ಕಲಿಸಲಿ ಎಂದು ಹೇಳಿದರು.

Follow Us:
Download App:
  • android
  • ios