Asianet Suvarna News Asianet Suvarna News

ಇದು ನನ್ನ ಕೊನೆಯ ಭಾಷಣ ಆಗಬಹುದು ಎಂದರೂ ಗೌಡರ ಭಾಷಣಕ್ಕೆ ಬ್ರೇಕ್!

ಇದು ನನ್ನ ಕೊನೆಯ ಭಾಷಣ ಆಗಬಹುದು ಎಂದು ಸ್ಪೀಕರ್ ಅವರಲ್ಲಿ ಮನವಿ ಮಾಡಿಕೊಂಡಿದ್ದರೂ ಲೋಕಸಭೆಯಲ್ಲಿ ನನಗೆ ಮಾತನಾಡಲು ಅವಕಾಶ ಸಿಕ್ಕಿಲ್ಲ- ಎಚ್. ಡಿ ದೇವೇಗೌಡ

Deve gowda s Speech in loksabha
Author
New Delhi, First Published Feb 9, 2019, 11:47 AM IST

ನವದೆಹಲಿ[ಫೆ.09]: ಇದು ನನ್ನ ಕೊನೇ ಭಾಷಣ ಆಗಬಹುದು ಎಂದು ಸ್ಪೀಕರ್ ಅವರಲ್ಲಿ ಮನವಿ ಮಾಡಿಕೊಂಡಿದ್ದರೂ ಲೋಕಸಭೆಯಲ್ಲಿ ನನಗೆ ಮಾತನಾಡಲು ಅವಕಾಶ ಸಿಕ್ಕಿಲ್ಲ, ರಾಷ್ಟ್ರಪತಿಗಳ ಭಾಷಣದ ಮೇಲೆ ಮಾತನಾಡಲು ಅವಕಾಶ ನೀಡಿಯೂ ಕೇವಲ 5 ನಿಮಿಷಕ್ಕೆ ನನ್ನ ಮಾತು ಮೊಟಕುಗೊಳಿಸುವಂತೆ ಮಾಡಲಾಯಿತು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇದು ನನ್ನ ಕೊನೆಯ ಭಾಷಣ ಆಗಬಹುದು ಎಂದು ಸ್ಪೀಕರ್ ಅವರಲ್ಲಿ ಮನವಿ ಮಾಡಿಕೊಂಡಿದ್ದರೂ ಲೋಕಸಭೆಯಲ್ಲಿ ನನಗೆ ಮಾತನಾಡಲು ಅವಕಾಶ ಸಿಕ್ಕಿಲ್ಲ. ಶುಕ್ರವಾರ ಕೂಡ ನನ್ನ ಮನವಿಗೆ ಮನ್ನಣೆ ಸಿಗಲಿಲ್ಲ. ಪದೇ ಪದೆ ಮನವಿ ಮಾಡಿಕೊಂಡರೂ ನನ್ನನ್ನು ಸ್ಪೀಕರ್ ಗಮನಿಸದ ಹಿನ್ನೆಲೆಯಲ್ಲಿ ತಾಳ್ಮೆ ಕಳೆದುಕೊಂಡೆ. ಆದರೆ ಸೋಮವಾರ ಹಣಕಾಸು ವಿಧೇಯಕದ ಬಗ್ಗೆ ಮಾತಾನಾಡಲು ಅವಕಾಶ ನೀಡುವುದಾಗಿ ಸ್ಪೀಕರ್ ಹೇಳಿದ್ದಾರೆ ಎಂದು ದೇವೇಗೌಡ ತಿಳಿಸಿದರು.

ಪ್ರಧಾನಿ ಮೋದಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯಲ್ಲಿ ನನ್ನ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಮೈತ್ರಿ ಸರ್ಕಾರದ ಸಾಲ ಮನ್ನಾದ ಬಗೆಗಿನ ಟೀಕೆಗೂ ಸ್ಪಷ್ಟಿಕರಣ ನೀಡಬೇಕಿತ್ತು ಎಂದರು.

ನಾರಾಯಣ ಗೌಡ ಬಗ್ಗೆ ಆಕ್ರೋಶ ಕೆ.ಆರ್.ಪೇಟೆ ಶಾಸಕ ನಾರಾಯಣ ಗೌಡ ಅವರ ಮುಂಬೈ ವಾಸದ ಬಗ್ಗೆ ದೇವೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನ್ನ ಮಗನೂ ಒಂದೊಂದು ಬಾರಿ ತಪ್ಪು ಮಾಡುತ್ತಾನೆ. ಕೆ.ಆರ್.ಪೇಟೆಯಲ್ಲಿ ಬೇರೆ ಅರ್ಹರಿದ್ದರೂ ನಾರಾಯಣ ಗೌಡರಿಗೆ ಟಿಕೆಟ್ ನೀಡಲಾಗಿದೆ. ಅವರು ಎಲ್ಲಿಂದ ಬಂದಿದ್ದಾರೋ ಅಲ್ಲಿಗೆ ಹೋಗಿದ್ದಾರೆ ಎಂದು ಕಿಡಿಕಾರಿದರು.

Follow Us:
Download App:
  • android
  • ios