Asianet Suvarna News Asianet Suvarna News

ಧಾರವಾಡ ಸಾಹಿತ್ಯ ಸಮ್ಮೇ​ಳ​ನದ ಲಾಂಛನ, ವೆಬ್‌ಸೈಟ್‌ ಬಿಡು​ಗ​ಡೆ

 ಜ.4ರಿಂದ 6ರವರೆಗೆ ನಡೆಯಲಿರುವ 84ನೇ ಅಖಿತ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಶುಕ್ರವಾರ ಲೋಕಾರ್ಪಣೆ ಮಾಡಲಾಯಿತು. 

Deshpande released logo of the 84th Kannada sahitya sammelana
Author
Bengaluru, First Published Nov 17, 2018, 8:52 AM IST

ಧಾರ​ವಾ​ಡ :  ಧಾರವಾಡದಲ್ಲಿ ಜ.4ರಿಂದ 6ರವರೆಗೆ ನಡೆಯಲಿರುವ 84ನೇ ಅಖಿತ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಶುಕ್ರವಾರ ಲೋಕಾರ್ಪಣೆ ಮಾಡಲಾಯಿತು. ಧಾರ​ವಾ​ಡದ ಗರಿಮೆಗಳಾದ ಕರ್ನಾ​ಟಕ ವಿದ್ಯಾ​ವ​ರ್ಧಕ ಸಂಘ, ಕರ್ನಾ​ಟಕ ವಿಶ್ವ​ವಿ​ದ್ಯಾ​ಲಯ, ಡಯಟ್‌ ಹಾಗೂ ಸಾಹಿತ್ಯ ಮತ್ತು ಸಂಗೀ​ತದ ಹಿನ್ನೆ​ಲೆಯ ಕಲ್ಪ​ನೆ​ಯಲ್ಲಿ ಕಲಾವಿದ ಮಹೇಶ ಪತ್ತಾರ ರಚಿ​ಸಿದ ಈ ಲಾಂಛನವನ್ನು ಶುಕ್ರ​ವಾರ ಕಂದಾಯ ಸಚಿವ ಆರ್‌.ವಿ. ದೇಶ​ಪಾಂಡೆ ಬಿಡು​ಗಡೆ ಮಾಡಿ​ದರು.

ಕನ್ನಡ ಸಾಹಿತ್ಯ ಪರಿ​ಷತ್‌ ಲಾಂಛನ ಸೇರಿ ಕನ್ನ​ಡದ ಬಾವುಟ, ಹುಬ್ಬ​ಳ್ಳಿಯ ಕಿತ್ತೂರು ಚೆನ್ನಮ್ಮನ ಪ್ರತಿಮೆ, ಪುಸ್ತ​ಕ​ಗಳ ಹೊತ್ತಿಗೆ, ಸಂಗೀ​ತದ ಪರಿ​ಕ​ರ​ಗ​ಳನ್ನು ಒಳ​ಗೊಂಡ ಲಾಂಛನ ಇದಾಗಿದೆ. ಲಾಂಛನ ಬಿಡುಗಡೆ ಜತೆಗೆ, ಸಮ್ಮೇ​ಳ​ನದ ಮಾಹಿತಿ ಇಡೀ ಜಗ​ತ್ತಿಗೆ ಪಸ​ರಿ​ಸಲು ಸಿದ್ಧ​ವಾದ ವೆಬ್‌​ಸೈಟ್‌(  (abkssdwd.org) ಅನ್ನು ಸಹ ಜಿ.ಪಂ. ಸಭಾಂಗ​ಣ​ದಲ್ಲಿ ನಡೆದ ಸಮ್ಮೇ​ಳ​ನದ ಪೂರ್ವ​ಭಾವಿ ಸಭೆ​ಯಲ್ಲಿ ಸಚಿ​ವರು ಲೋಕಾ​ರ್ಪ​ಣೆ​ಗೊ​ಳಿ​ಸಿ​ದರು.

ಮುಂದುವರಿದ ಗೊಂದಲ:  ಸಮ​ಯದ ಅಭಾ​ವ​ದಿಂದ ಈಗಾ​ಗಲೇ ಜನ​ವ​ರಿ ತಿಂಗ​ಳಿಗೆ ಮುಂದೂ​ಡಿ​ರುವ ಸಾಹಿತ್ಯ ಸಮ್ಮೇ​ಳನಕ್ಕೆ ಇದೀಗ ಸ್ಥಳ ನಿಗದಿ ಕುರಿ​ತಂತೆ ಮತ್ತಷ್ಟುಗೊಂದ​ಲ​ಗಳು ಸೃಷ್ಟಿ​ಯಾ​ಗಿ​ವೆ. ಆರಂಭ​ದಲ್ಲಿ ಶತ​ಮಾ​ನದ ಇತಿ​ಹಾಸ ಹೊಂದಿ​ರುವ ಕರ್ನಾ​ಟಕ ಕಾಲೇಜು ಆವ​ರ​ಣ​ದಲ್ಲಿ ಸಮ್ಮೇ​ಳನ ನಡೆ​ಸುವ ಚರ್ಚೆ​ಯಾಗಿ ಅಂತಿ​ಮವೂ ಆಗಿತ್ತು. ನಂತ​ರ ​ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ದೃಷ್ಟಿಯಿಂದ ಕೃಷಿ ವಿವಿಯಲ್ಲೇ ಸಮ್ಮೇಳನ ನಡೆಸಲು ಚಿಂತನೆ ನಡೆಯಿತು.

ಇದಕ್ಕೆ ಪೂರ​ಕ​ವಾಗಿ 2 ದಿನ​ಗಳ ಹಿಂದಷ್ಟೇ ಜಿಲ್ಲಾ​ಧಿ​ಕಾರಿಗಳ ಹಾಗೂ ​ಸಾ​ಹಿ​ತಿ​ಗಳ ಸಭೆ​ಯಲ್ಲಿ ಈ ವಿಚಾರ ತೀರ್ಮಾ​ನವೂ ಆಗಿತ್ತು. ಆದರೆ, ಶುಕ್ರ​ವಾರ ಮತ್ತೆ ಈ ಕುರಿತ ಗೊಂದಲ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.

Follow Us:
Download App:
  • android
  • ios