ಹೊಸ‌ ಎಲೆಕ್ಟ್ರಿಕ್ ವಸ್ತು ಖರೀದಿ ಮಾಡುವ ಗ್ರಾಹಕರಿಗೆ ಸರ್ಕಾರದಿಂದ ಬಂಪರ್ ಕೊಡುಗೆ!

ದಿನದಿಂದ ದಿನಕ್ಕೆ ಮನೆಗಳಲ್ಲೂ ಅಪಾಯಕಾರಿಯಾದ ಇ-ತ್ಯಾಜ್ಯ ಹೆಚ್ಚಳವಾಗುತ್ತಿದೆ. ಸಾರ್ವಜನಿಕ ಮತ್ತು ಸಮುದಾಯ ಆರೋಗ್ಯ ರಕ್ಷಣೆ ಹಿನ್ನೆಲೆ ಇನ್ಮುಂದೆ ಗ್ರಾಹಕರು ಇಚ್ಛಿಸಿದಲ್ಲಿ ಹಳೆ ಎಲೆಕ್ಟ್ರಾನಿಕ್ ಸಾಧನಗಳಿಗೆ ಕನಿಷ್ಠ ಬೆಲೆ ನಿಗದಿ ಮಾಡಿ ಮಾರಾಟಗಾರರು ಕಡ್ಡಾಯವಾಗಿ ಖರೀದಿ ಮಾಡುವಂತೆ ಹೊಸ ನಿಯಮ ಜಾರಿ ತರಲು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಮುಂದಾಗಿದೆ.

 

 

department of Forest Environment takes forward scientific disposal of e-waste rav

ಬೆಂಗಳೂರು (ಸೆ.10): ದಿನದಿಂದ ದಿನಕ್ಕೆ ಮನೆಗಳಲ್ಲೂ ಅಪಾಯಕಾರಿಯಾದ ಇ-ತ್ಯಾಜ್ಯ ಹೆಚ್ಚಳವಾಗುತ್ತಿದೆ. ಸಾರ್ವಜನಿಕ ಮತ್ತು ಸಮುದಾಯ ಆರೋಗ್ಯ ರಕ್ಷಣೆ ಹಿನ್ನೆಲೆ ಇನ್ಮುಂದೆ ಗ್ರಾಹಕರು ಇಚ್ಛಿಸಿದಲ್ಲಿ ಹಳೆ ಎಲೆಕ್ಟ್ರಾನಿಕ್ ಸಾಧನಗಳಿಗೆ ಕನಿಷ್ಠ ಬೆಲೆ ನಿಗದಿ ಮಾಡಿ ಮಾರಾಟಗಾರರು ಕಡ್ಡಾಯವಾಗಿ ಖರೀದಿ ಮಾಡುವಂತೆ ಹೊಸ ನಿಯಮ ಜಾರಿ ತರಲು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಮುಂದಾಗಿದೆ.

ಇತ್ತೀಚಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಇ-ತ್ಯಾಜ್ಯ ಹೆಚ್ಚಾಗಿದೆ ಇದರ ವೈಜ್ಞಾನಿಕವಾಗಿ ವಿಲೇವಾರಿ ಆಗುತ್ತಿಲ್ಲ. ಗುಜರಿ ಅಂಗಡಿಗಳಲ್ಲಿ ಸಂಗ್ರಹವಾಗುವ ಇ-ತ್ಯಾಜ್ಯಗಳಲ್ಲಿ  ಆಯ್ದ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಉಳಿದ ಇ-ತ್ಯಾಜ್ಯ ವೈಜ್ಞಾನಿಕ ವಿಲೇವಾರಿಯಾಗುತ್ತಿಲ್ಲ. ಜೊತೆಗೆ ಮೊಬೈಲ್, ಟಿವಿ ಕಂಪ್ಯೂಟರ್ ಗುಜರಿಗೆ ಹಾಕುವುದರಿಂದ ದತ್ತಾಂಶ ದುರ್ಬಳಕೆ ಆಗುವ ಸಾಧ್ಯತೆಯೂ ಹೆಚ್ಚಿದೆ. ಈ ಹಿನ್ನೆಲೆ  ದಿಟ್ಟ ಕ್ರಮಕ್ಕೆ ಮುಂದಾಗಿರುವ ಸರ್ಕಾರ.
 
ಈ ನಿಯಮ ಜಾರಿಗೆ ಬಂದರೆ ಗ್ರಾಹಕರು ಹೊಸ ಟಿವಿ, ಕಂಪ್ಯೂಟರ್, ಮೊಬೈಲ್ ಯಾವುದೇ ಎಲೆಕ್ಟ್ರಾನಿಕ್  ಉಪಕರಣಗಳನ್ನು ಖರೀಸುವ ಸಂದರ್ಭದಲ್ಲಿ ಗ್ರಾಹಕರು ಇಚ್ಚಿಸಿದ್ದಲ್ಲಿ ಅವರ ಹಳೆಯ ಟಿವಿ, ಕಂಪ್ಯೂಟರ್, ಮೊಬೈಲ್, ಚಾರ್ಜರ್ ಇತ್ಯಾದಿ ವಿದ್ಯುನ್ಮಾನ ಉಪಕರಣಗಳನ್ನು ಮಾರಾಟಗಾರರೇ  ಕನಿಷ್ಠ ಬೆಲೆ ನೀಡಿ ಖರೀದಿ ಮಾಡಬೇಕು. ಇದರಿಂದ ಇ-ತ್ಯಾಜ್ಯ ನಿಯಂತ್ರಿಸಬಹುದಾಗಿದೆ ಅಲ್ಲದೆ, ಕಂಪ್ಯೂಟರ್, ಮೊಬೈಲ್ ದತ್ತಾಂಶ ದುರ್ಬಳಕೆಯಾಗುವುದನ್ನ ತಡೆಗಟ್ಟಬಹುದಾಗಿದೆ. ಈ ಕುರಿತು ಸಾಧಕ-ಬಾಧಕ ಮತ್ತು ಅನುಷ್ಠಾನದ ಬಗ್ಗೆ 30 ದಿನಗಳ ಒಳಗಾಗಿ ಪ್ರಸ್ತಾವನೆ ಸಲ್ಲಿಸಲು ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

Latest Videos
Follow Us:
Download App:
  • android
  • ios