Asianet Suvarna News Asianet Suvarna News

ಭಾರತದ ಜತೆ ಕೈಜೋಡಿಸಲು ಅಮೆರಿಕ ನೌಕಾಪಡೆ ಉತ್ಸುಕ: ರಾಜನಾಥ ಸಿಂಗ್‌

ಇತ್ತೀಚೆಗೆ ಭಾರತದ ಚಿತ್ರಣ ಬದಲಾಗಿದ್ದು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಇಂದು ಭಾರತದೊಂದಿಗೆ ಕೈಜೋಡಿಸಲು ಮುಂದಾಗಿವೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ತಿಳಿಸಿದ್ದಾರೆ. 

Defense Minister Rajnath Singh Karwar Visit Ins Kadamba Naval Base gvd
Author
Bangalore, First Published May 27, 2022, 3:22 AM IST

ಕಾರವಾರ (ಮೇ.27): ಇತ್ತೀಚೆಗೆ ಭಾರತದ ಚಿತ್ರಣ ಬದಲಾಗಿದ್ದು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಇಂದು ಭಾರತದೊಂದಿಗೆ ಕೈಜೋಡಿಸಲು ಮುಂದಾಗಿವೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ತಿಳಿಸಿದ್ದಾರೆ. ಇಲ್ಲಿನ ಐಎನ್‌ಎಸ್‌ ಕದಂಬ ನೌಕಾನೆಲೆಗೆ ಗುರುವಾಗ ಸಂಜೆ ಆಗಮಿಸಿ ಮಾತನಾಡಿದ ಅವರು, ತಾವು ಈಚೆಗೆ ಅಮೆರಿಕಕ್ಕೆ ಭೇಟಿ ನೀಡಿದಾಗ ಅಲ್ಲಿನ ನೌಕಾಪಡೆ ಮುಖ್ಯಸ್ಥರ ಜತೆ ಮಾತುಕತೆ ನಡೆಸಿದ್ದು, ಭಾರತದ ಜತೆ ಕೈಜೋಡಿಸಲು ಅವರು ಬಯಸಿದ್ದಾರೆ ಎಂದು ಹೇಳಿದರು.

ಈ ಹಿಂದೆ ಭಾರತವನ್ನು ಗಂಭೀರವಾಗಿ ಪರಿಗಣಿಸದೆ ಇದ್ದವರೂ ಈಗ ಭಾರತದತ್ತ ಒಲವು ತೋರುತ್ತಿದ್ದಾರೆ. ಕಾಲ ಬದಲಾಗಿದೆ. ಭಾರತದ ಸಲಹೆ, ಸೂಚನೆಗಳಿಗೆ ಎಲ್ಲೆಡೆ ಗೌರವ ಸಿಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ದೇಶದ ಗೌರವ, ಪ್ರತಿಷ್ಠೆ ಹೆಚ್ಚಾಗಿದೆ ಎಂದು ಹೇಳಿದರು. ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್‌ ಆರ್‌. ಹರಿಕುಮಾರ ಮತ್ತು ವೈಸ್‌ ಅಡ್ಮಿರಲ್‌ ಅಜೇಂದ್ರ ಬಹದ್ದೂರ ಸಿಂಗ್‌, ರಿಯರ್‌ ಅಡ್ಮಿರಲ್‌ ಅತುಲ್‌ ಆನಂದ್‌, ಶಾಸಕಿ ರೂಪಾಲಿ ನಾಯ್ಕ ಮತ್ತಿತರರು ಇದ್ದರು.

ಆತ್ಮನಿರ್ಭರತೆಗೆ ಮತ್ತಷ್ಟು ವೇಗ, 101 ಶಸ್ತ್ರಾಸ್ತ್ರ ಸ್ವದೇಶಿಕರಣಕ್ಕೆ ರಕ್ಷಣಾ ಇಲಾಖೆ ನಿರ್ಧಾರ!

ಕಾರವಾರದಲ್ಲಿಂದು ಸಬ್‌ಮರೀನ್‌ನಲ್ಲಿ ರಾಜ್‌ನಾಥ್‌ ಪ್ರಯಾಣ: ಐಎನ್‌ಎಸ್‌ ಕದಂಬ ನೌಕಾನೆಲೆಗೆ ಆಗಮಿಸಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಶುಕ್ರವಾರ ನೌಕಾಪಡೆಯ ಜಲಾಂತರ್ಗಾಮಿ ನೌಕೆ ಏರಲಿದ್ದಾರೆ. ನೌಕಾನೆಲೆ ಹಾಗೂ ಇತರ ಗಣ್ಯರೊಂದಿಗೆ ರಾಜನಾಥ ಸಿಂಗ್‌ ಸಬ್‌ಮರೀನ್‌ನಲ್ಲಿ ಕೆಲ ಸಮಯ ಕಳೆಯಲಿದ್ದಾರೆ. ಎರಡು ದಿನಗಳ ಭೇಟಿಗೆ ಇಲ್ಲಿನ ನೌಕಾನೆಲೆಗೆ ರಾಜನಾಥ ಸಿಂಗ್‌ ಗುರುವಾರ ಸಂಜೆ ಆಗಮಿಸುತ್ತಿದ್ದಂತೆ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್‌ ಆರ್‌. ಹರಿಕುಮಾರ ಮತ್ತು ವೈಸ್‌ ಅಡ್ಮಿರಲ್‌ ಅಜೇಂದ್ರ ಬಹದ್ದೂರ ಸಿಂಗ್‌ ಸ್ವಾಗತಿಸಿದರು. ರಿಯರ್‌ ಅಡ್ಮಿರಲ್‌ ಅತುಲ್‌ ಆನಂದ್‌ ಇದ್ದರು. ನಂತರ ರಕ್ಷಣಾ ಸಚಿವರು ಕರ್ನಾಟಕ ನೌಕಾ ಪ್ರದೇಶದ ರಕ್ಷಣಾ ಸಿಬ್ಬಂದಿ ಮತ್ತು ಅವರ ಕುಟುಂಬದೊಂದಿಗೆ ಸಂವಾದ ನಡೆಸಿದರು.

ದೇಶೀಯ ನಿರ್ಮಿತ ಎರಡು ಯುದ್ಧನೌಕೆಗಳು ಸೇನೆಗೆ ಸೇರ್ಪಡೆ: ಭಾರತೀಯ ನೌಕಾಪಡೆಗೆ ದೇಶೀಯವಾಗಿ ನಿರ್ಮಿತ ಎರಡು ಯುದ್ಧನೌಕೆಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಮುಂಬೈನಲ್ಲಿ ಚಾಲನೆ ನೀಡಲಿದ್ದಾರೆ. ಯುದ್ಧ ನೌಕೆಗಳ ವಿಚಾರದಲ್ಲಿ ಚಾಲನೆ ಎಂದಲ್ಲಿ, ನೌಕೆಗಳು ಮೊದಲ ಬಾರಿಗೆ ನೀರಿಗೆ ಇಳಿಯುವುದಾಗಿರುತ್ತದೆ. ಈ ವಾರದ ಆರಂಭದಲ್ಲಿ, ಭಾರತೀಯ ನೌಕಾಪಡೆಯ ಅಧಿಕಾರಿಯೊಬ್ಬರೂ ಕೂಡ ಮಾಧ್ಯಮಗಳಿಗೆ ಈ ವಿಚಾರ ತಿಳಿಸಿದ್ದರು. 

45 ದಿನದಲ್ಲಿ 7 ಅಂತಸ್ತಿನ ಕಟ್ಟಡ, ಇಲ್ಲಿ ತಯಾರಾಗುತ್ತೆ ಭಾರತದ ಅತ್ಯಾಧುನಿಕ ಯುದ್ಧ ವಿಮಾನ!

"ಭಾರತೀಯ ನೌಕಾಪಡೆಯ ಎರಡು ಮುಂಚೂಣಿಯ ಯುದ್ಧನೌಕೆಗಳು ಮೇ 17 ರಂದು ಮುಂಬೈನ ಮಜಗಾಂವ್ ಡಾಕ್ಸ್ ಲಿಮಿಟೆಡ್ನಲ್ಲಿ ಏಕಕಾಲದಲ್ಲಿ ಅನಾವರಣಗೊಳ್ಳುವ ಸಂದರ್ಭದೊಂದಿಗೆ ದೇಶವು ದೇಶೀಯ ನಿರ್ಮಿತ ಯುದ್ಧನೌಕೆ ನಿರ್ಮಾಣದ ಇತಿಹಾಸದಲ್ಲಿ ಒಂದು ಮಹತ್ವದ ಘಟನೆಗೆ ಸಾಕ್ಷಿಯಾಗಲಿದೆ' ಎಂದು ಹೇಳಿದ್ದರು. ಅನಾವರಣವಾಗಲಿರುವ ಎರಡು ಹಡಗುಗಳೆಂದರೆ 'ಸೂರತ್' ಮತ್ತು 'ಉದಯಗಿರಿ'. ಮೊದಲನೆಯದು 'ಪ್ರಾಜೆಕ್ಟ್ 15 ಬಿ' ಕಾರ್ಯಕ್ರಮದ ಅಡಿಯಲ್ಲಿ ಸ್ಟೆಲ್ತ್ ಡಿಸ್ಟ್ರಾಯರ್‌ಗಳಲ್ಲಿ ನಾಲ್ಕನೇ ಮತ್ತು ಕೊನೆಯದು ಇನ್ನು  ಎರಡನೆಯದು 'ಪ್ರಾಜೆಕ್ಟ್ 17 ಎ' ಫ್ರಿಗೇಟ್ ಕಾರ್ಯಕ್ರಮದ ಭಾಗವಾಗಿದೆ.

Follow Us:
Download App:
  • android
  • ios