ಕರ್ನಾಟಕ ಚಿತ್ರಕಲಾ ಪರಿಷತ್ತನ್ನು ಬರುವ ದಿನಗಳಲ್ಲಿ ಡೀಮ್ಡ್ ವಿಶ್ವವಿದ್ಯಾಲಯವಾಗಿ ರೂಪಿಸಲಾಗುವುದು. ಮುಂದಿನ ವಿಧಾನಮಂಡಲ ಅಧಿವೇಶನದಲ್ಲೇ ಈ ಸಂಬಂಧ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆಯಲಾಗುವುದು.
ಬೆಂಗಳೂರು (ಮಾ.28): ಕರ್ನಾಟಕ ಚಿತ್ರಕಲಾ ಪರಿಷತ್ತನ್ನು (Karnataka Chitrakala Parishad) ಬರುವ ದಿನಗಳಲ್ಲಿ ಡೀಮ್ಡ್ ವಿಶ್ವವಿದ್ಯಾಲಯವಾಗಿ (Deemed University) ರೂಪಿಸಲಾಗುವುದು. ಮುಂದಿನ ವಿಧಾನಮಂಡಲ ಅಧಿವೇಶನದಲ್ಲೇ ಈ ಸಂಬಂಧ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆಯಲಾಗುವುದು. ಜೊತೆಗೆ ರಾಜ್ಯದ ಆರು ಪ್ರಾದೇಶಿಕ ವಲಯಗಳಲ್ಲಿ ಪ್ರತ್ಯೇಕ ಚಿತ್ರಕಲಾ ಗ್ಯಾಲರಿ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದ್ದಾರೆ.
ಕುಮಾರಕೃಪಾ ರಸ್ತೆಯ ಚಿತ್ರಕಲಾ ಪರಿಷತ್ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ‘19ನೇ ವರ್ಷದ ಚಿತ್ರಸಂತೆ’ಗೆ ಭಾರತ ಮಾತೆಯ ಕಲಾಕೃತಿಯ ಮೇಲೆ ಸಹಿ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕದ ಚಿತ್ರಕಲೆಗೆ ಒಂದು ತಾಯಿಯ ಸ್ಥಾನವಿದೆ. ಇದು ದೇಶದ ಎಲ್ಲ ಕಡೆ ಹರಡಬೇಕು. ಆ ನಿಟ್ಟಿನಲ್ಲಿ ಆರು ಪ್ರಾದೇಶಿಕ ವಲಯಗಳಲ್ಲಿ ಒಂದೊಂದು ಚಿತ್ರಕಲಾ ಗ್ಯಾಲರಿ ಆರಂಭಿಸಲಾಗುವುದು. ಚಿತ್ರಕಲಾ ಪರಿಷತ್ತನ್ನು ಡೀಮ್‌್ಡ ವಿವಿಯಾಗಿ ರೂಪಿಸಲು ಮುಂದಿನ ಅಧಿವೇಶನದಲ್ಲೇ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆಯಲಾಗುವುದು. ಆ ಮೂಲಕ ಚಿತ್ರಕಲೆಗೆ ಹೊಸ ಆಯಾಮ ನೀಡಲಾಗುವುದು ಎಂದು ಹೇಳಿದರು.
Karnataka Politics: ಶಿಗ್ಗಾಂವಿ ಬಿಟ್ಟು ಬೇರೆ ಕಡೆ ಹೋಗುವ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ
ಕಲೆ ಸಾರ್ವಜನಿಕವಾಗಿ ತೆರೆದುಕೊಳ್ಳುವ ನಿಟ್ಟಿನಲ್ಲಿ ಚಿತ್ರಕಲಾ ಪರಿಷತ್ತು ಕಲಾವಿದರಿಗೆ ನಿರಂತರ ಸಹಕಾರ ನೀಡುತ್ತಾ ಬರುತ್ತಿದೆ. ಚಿತ್ರಸಂತೆ ಕಲೆಗೆ ಬೆಲೆ ಕೊಡುವ ಒಂದು ಪ್ರಯೋಗ. ಇದರಲ್ಲಿ ಪ್ರತೀ ವರ್ಷ ಲಕ್ಷಾಂತರ ಜನ ಭಾಗಿಯಾಗುತ್ತಾರೆ. ಇದರಿಂದ ಕಲಾವಿದನಿಗೂ ಸ್ಫೂರ್ತಿ ದೊರೆಯುತ್ತದೆ. ಇದರ ನಡುವೆ ಕಲೆಯಲ್ಲಿ ತಪ್ಪು ಕಂಡುಹಿಡಿಯುವ, ಟೀಕಿಸುವ ಒಂದು ವರ್ಗ ಇರುತ್ತದೆ. ಸೃಷ್ಟಿಕರ್ತ ಸೃಷ್ಟಿಸಿದ ಈ ಜಗತ್ತೇ ಪರಿಪೂರ್ಣತೆಯಿಂದ ಕೂಡಿಲ್ಲ. ಇನ್ನು ನಾವು ಪರಿಪೂರ್ಣರಾಗಲು ಸಾಧ್ಯವೆ? ಹಾಗಾಗಿ ಟೀಕಿಸುವವರ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂದರು.
ನಮ್ಮ ಸರ್ಕಾರ ನೆಲದ ಕಲೆ, ಸಾಂಸ್ಕೃತಿಕ ಮತ್ತು ಸಾಹಿತ್ಯವನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತದೆ. ಇವುಗಳನ್ನು ಉಳಿಸಿ, ಬೆಳೆಸಿಕೊಂಡು ಹೋದಾಗ ಮಾತ್ರ ನಮ್ಮ ದೇಶದ ಅಂತಃಸತ್ವ , ಗುರುತು ಉಳಿಯಲು ಸಾಧ್ಯ. ಈ ಕಾರ್ಯವನ್ನು ಬಿ.ಎಲ್.ಶಂಕರ್ ನೇತೃತ್ವದಲ್ಲಿ ಚಿತ್ರಕಲಾ ಪರಿಷತ್ತು ಮಾಡಿಕೊಂಡು ಬರುತ್ತಿದೆ. ಕೆಲವೇ ಜನರಿಗೆ ಸೀಮಿತವಾಗಿದ್ದ ಚಿತ್ರಕಲಾ ಪರಿಷತ್ತಿನ ಬಾಗಿಲುಗಳನ್ನು ಎಲ್ಲ ಸಾರ್ವಜನಿಕರಿಗೂ ಮುಕ್ತ ಮಾಡಿದ ಶ್ರೇಯಸ್ಸು ಬಿ.ಎಲ್.ಶಂಕರ್ ಮತ್ತು ಅವರ ತಂಡದ ಎಲ್ಲ ಸದಸ್ಯರಿಗೂ ಸಲ್ಲುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್‌ಥನಾರಾಯಣ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ರಿಜ್ವಾನ್ ಅರ್ಷದ್ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟದಲ್ಲಿ ಮತ್ತೆ ಯಶಸ್ವಿನಿ: ಬಡಜನರಿಗೆ ಉಪಯುಕ್ತ ಆರೋಗ್ಯ ವಿಮೆ
ಚಿತ್ರಸಂತೆಗೆ ಸರ್ಕಾರದಿಂದ 1 ಕೋಟಿ ರು.: ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ಮುಖ್ಯಮಂತ್ರಿ ಅವರು ಚಿತ್ರಸಂತೆಗೆ 1 ಕೋಟಿ ರು. ಅನುದಾನ ನೀಡಿ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಉತ್ತರ ಕರ್ನಾಟಕದಲ್ಲೂ ಚಿತ್ರಸಂತೆ ಏರ್ಪಡಿಸಿದರೆ ಎಲ್ಲ ಸೌಲಭ್ಯಗಳನ್ನು ನೀಡುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ ಎಂದರು. ಈ ಹಿಂದೆ ಚಿತ್ರಸಂತೆಗೆ ರಸ್ತೆ ಬದಿಯಲ್ಲಿ ಅವಕಾಶ ನೀಡಿದ್ದಕ್ಕೆ ಕೆಲವರು ಕಲಾವಿದರನ್ನು ಬೀದಿಗೆ ಹಾಕಿದ್ದಾರೆ ಎಂಬ ಟೀಕೆಗಳನ್ನು ಮಾಡಿದರು. ಆದರೆ, ಕಲೆ ಕೇವಲ ಪಂಚತಾರಾ ಹೋಟೆಲ್‌ನಲ್ಲಿ ಇರುವವರಿಗೆ, ಶ್ರೀಮಂತರಿಗೆ ಮಾತ್ರ ಸೀಮಿತವಲ್ಲ. ಎಲ್ಲರಿಗೂ ಸಿಗಬೇಕೆಂದು ಚಿತ್ರಸಂತೆ ಆರಂಭಿಸಲಾಯಿತು ಎಂದರು.
