ತುಮಕೂರು: ಇದೇ ಗುರುವಾರ ನಡೆಯಲಿರುವ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳ ಪುಣ್ಯಾರಾಧನೆಗೆ ಇಲ್ಲಿನ ಸಿದ್ಧಗಂಗಾ ಮಠದಲ್ಲಿ ಸಿದ್ಧತೆಗಳು ಭರದಿಂದ ಸಾಗಿದೆ. ಜ.31 ರಂದು ನಡೆಯಲಿರುವ ಸಿದ್ಧಗಂಗಾ ಶ್ರೀಗಳ 11 ನೇ ದಿನದ ಪುಣ್ಯಸ್ಮರಣಾ ಕಾರ್ಯಕ್ರಮಕ್ಕೆ 8 ರಿಂದ 10 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದೆ. 

ಭಕ್ತರಿಗಾಗಿ 69 ಕ್ವಿಂಟಾಲ್‌ನಷ್ಟು ಸಿಹಿ ಬೂಂದಿ, 2 ಲಕ್ಷ ಜಾಹಂಗೀರ್, ಪಾಯಸ ಹಾಗೂ ಮಾಲ್ದಿಪುಡಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ 70 ಮಂದಿ ಅಡುಗೆ ಭಟ್ಟರು ಅಡುಗೆ ತಯಾರಿ ಮಾಡುತ್ತಿದ್ದಾರೆ. 

ಮಠದ ನಾಲ್ಕು ಕಡೆ ಸಿಹಿ ತಿಂಡಿಗಳನ್ನು ತಯಾರಿಸಲಾಗುತ್ತಿದೆ. ಪುಣ್ಯಾರಾಧನೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಮಠಕ್ಕೆ ಲೋಡ್‌ಗಟ್ಟಲೇ ದವಸ-ಧಾನ್ಯದ ರಾಶಿ ಹರಿದು ಬರುತ್ತಿದೆ.