ರಾಜ್ಯ ಮಟ್ಟದ ಸಚಿವರ ಟಾಸ್ಕ್ ಫೋರ್ಸ್ ಪುನಾರಚನೆ| ಟಾಸ್ಕ್ ಫೋರ್ಸ್‌ನಲ್ಲಿ ಸಚಿವರಾದ ಡಾ.ಕೆ ಸುಧಾಕರ್, ಸುರೇಶ್ ಕುಮಾರ್ ಮತ್ತು ಸಿ ಸಿ ಪಾಟೀಲ್‌ಗೆ ಸ್ಥಾನ| ಕೊರೋನಾ ನಿಯಂತ್ರಣವನ್ನ ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ| 

ಬೆಂಗಳೂರು(ಮೇ.03): ರಾಜ್ಯದಲ್ಲಿ ದಿನೇ ದಿನೆ ಕೊರೋನಾ ತನ್ನ ಅಟ್ಟಹಾಸವನ್ನ ಮೆರೆಯುತ್ತಿದೆ. ಜನತಾ ಕರ್ಫ್ಯೂ ಜಾರಿ ಮಾಡಿದರೂ ಕೂಡ ಕೋವಿಡ್‌ ಪ್ರಕರಣಗಳು ಮಾತ್ರ ಹತೋಟಿಗೆ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ ಕೊರೋನಾ ನಿಯಂತ್ರಣವನ್ನ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಕೊರೋನಾ ವೈರಸ್‌ಅನ್ನು ನಿಯಂತ್ರಿಸುವ ಕುರಿತು ತೆಗೆದುಕೊಳ್ಳುವ ಕ್ರಮದ ಬಗ್ಗೆ ಪರಾಮರ್ಶಿಸಲು ರಾಜ್ಯ ಕಾರ್ಯಪಡೆ(ಟಾಸ್ಕ್ ಫೋರ್ಸ್) ಯನ್ನು ಪುನರ್‌ ರಚಿಸಿದೆ.

ಡಿಸಿಎಂ ಕಾರಜೋಳ ಬದಲಿಗೆ ಮತ್ತೋರ್ವ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಅವರನ್ನ ಅಧ್ಯಕ್ಷರಾಗಿ ನೇಮಕ ಮಾಡಿ ರಾಜ್ಯ ಸರ್ಕಾರದ ಉಪ ಕಾರ್ಯದರ್ಶಿ ಬಿ.ಎಸ್‌. ನಾಗರಾಜ್‌ ಅವರು ಆದೇಶ ಹೊರಡಿಸಿದ್ದಾರೆ.

"

2 ನೇ ಅಲೆ ಅಪಾಯದ ಬಗ್ಗೆ ಎಚ್ಚರಿಸಿದ ಟಾಸ್ಕ್‌ಫೋರ್ಸ್, ಮುಂಜಾಗ್ರತಾ ಕ್ರಮಕ್ಕೆ ಸುಧಾಕರ್ ಮನವಿ!

ರಾಜ್ಯದಲ್ಲಿ ಕೊರೋನಾ ವೈರಸ್‌ ನಿಯಂತ್ರಿಸುವ ಕುರಿತು ತೆಗೆದುಕೊಳ್ಳುವ ಕ್ರಮಗಳ ಕುರಿತು ಪರಾಮರ್ಶಿಸಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಟಾಸ್ಕ್‌ ಫೋರ್ಸ್‌ ತಂಡದ ಅಧ್ಯಕ್ಷರಾಗಿ ಡಿಸಿಎಂ ಡಾ.ಅಶ್ವಥ್ ನಾರಾಯಣ್, ಸದಸ್ಯರಾಗಿ ಸಚಿವರುಗಳಾದ ಸುರೇಶ್‌ ಕುಮಾರ್, ಸಿ.ಸಿ ಪಾಟೀಲ್‌ ಹಾಗೂ ಅರೋಗ್ಯ ಸಚಿವ ಡಾ.ಕೆ. ಸುಧಕಾರ್‌ ಅವರನ್ನು ಒಳಗೊಂಡ ಟಾಸ್ಕ್‌ ಫೋರ್ಸ್‌ಅನ್ನು ಪುರನ್‌ ರಚನೆ ಮಾಡಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona