ಸಂಡೂರು ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಸಿಎಂ ಸಿದ್ದರಾಮಯ್ಯ ಸಂಡೂರು ಕ್ಷೇತ್ರಕ್ಕೆ ₹1200 ಕೋಟಿ ಅನುದಾನ ನೀಡಿ ಈ ಕ್ಷೇತ್ರದ ಪ್ರಗತಿಗೆ ಮುನ್ನುಡಿ ಬರೆದಿದ್ದಾರೆ ಎಂದ ಉಪಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್‌ 

ಬಳ್ಳಾರಿ(ಅ.15): ಎಡಗೈ ಮತ್ತು ಬಲಗೈ ಸಮುದಾಯಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಲಿದ್ದು, ಬಿಜೆಪಿಯ ಕುತಂತ್ರಗಳಿಗೆ ಬಲಿಯಾಗಬೇಡಿ ಎಂದು ಉಪಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್‌ ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಒಳಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಮಾತುಕೊಟ್ಟಂತೆ ನಡೆಯುತ್ತದೆ. ಕೆಲ ತಾಂತ್ರಿಕ ತೊಂದರೆ ಗಳಿದ್ದು, ನಮ್ಮ ಪಕ್ಷ ಎಲ್ಲರಿಗೂ ನ್ಯಾಯ ಒದಗಿಸಲಿದೆ. ಕಾಂಗ್ರೆಸ್‌ ದಲಿತ ಸಮುದಾಯಗಳ ಹಿತ ಕಾಯುವ ಕೆಲಸ ಮಾಡುತ್ತಾ ಬಂದಿದ್ದು, ಎಲ್ಲ ಸಮಾಜಗಳ ಕಲ್ಯಾಣನಮ್ಮ ಧೈಯವಾಗಿದೆ. ನಮ್ಮ ಸರ್ಕಾರ ಎಡಗೈ ಮತ್ತು ಬಲಗೈ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ. ಈ ಸಮುದಾಯಗಳಿಗೆ ನ್ಯಾಯ ಕೊಡಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಲಿದೆ. ಬಿಜೆಪಿಯವರು ಬರೀ ಸುಳ್ಳುಗಳನ್ನು ಹೇಳಿಕೊಂಡು ಹೊರಟಿದ್ದು, ಷಡ್ಯಂತ್ರ್ಯಗಳನ್ನು ರೂಪಿಸುತ್ತಾರೆ. ಅವರ ಸುಳ್ಳು ಹೇಳಿಕೆಗಳು ಹಾಗೂ ಷಡ್ಯಂತ್ರಗಳಿಗೆಯಾರು ಬಲಿಯಾಗಬಾರದು ಎಂದು ಮನವಿ ಮಾಡಿದ್ದಾರೆ. 

ಒಳಮೀಸಲಾತಿಗಾಗಿ ಬಿಜೆಪಿಯಿಂದ ಶೀಘ್ರ ಸಿಎಂ ಭೇಟಿ: ವಿಜಯೇಂದ್ರ

ಸಂಡೂರು ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಸಿಎಂ ಸಿದ್ದರಾಮಯ್ಯ ಸಂಡೂರು ಕ್ಷೇತ್ರಕ್ಕೆ ₹1200 ಕೋಟಿ ಅನುದಾನ ನೀಡಿ ಈ ಕ್ಷೇತ್ರದ ಪ್ರಗತಿಗೆ ಮುನ್ನುಡಿ ಬರೆದಿದ್ದಾರೆ ಎಂದರು.