ಎಚ್‌ಡಿಕೆ ಸಪೋರ್ಟ್ ಮಾಡೋ ವಿಚಾರ; ನೋಡಪ್ಪ ಮಾಡೋ ಕಾಲದಲ್ಲೇ ಮಾಡಿಲ್ಲ, ಈಗೇನು ಮಾಡೋದು: ಡಿಕೆಶಿ ತಿರುಗೇಟು
ನೋಡಪ್ಪ, ನೀನು ಸಪೋರ್ಟ್ ಮಾಡೋದು ನಮಗೆ ಸಂತೋಷ. ಆದರೆ ನಮಗೂ NDAಗೂ ಸಂಬಂಧ ಇಲ್ಲ. ಮೊದಲು NDAಯಿಂದ ಆಚೆಗೆ ಬಂದು ಮಾತನಾಡು ಎನ್ನುವ ಮೂಲಕ ಎಚ್‌ಡಿ ಕುಮಾರಸ್ವಾಮಿ ಸಪೋರ್ಟ್ ಮಾಡ್ತಿನಿ ಎಂಬ ವಿಚಾರಕ್ಕೆ ಡಿಸಿಎಂ ಡಿಕೆ ಶಿವಕುಮಾರ ತಿರುಗೇಟು ನೀಡಿದರು.
ಬೆಂಗಳೂರು (ನ.4): ನೋಡಪ್ಪ, ನೀನು ಸಪೋರ್ಟ್ ಮಾಡೋದು ನಮಗೆ ಸಂತೋಷ. ಆದರೆ ನಮಗೂ NDAಗೂ ಸಂಬಂಧ ಇಲ್ಲ. ಮೊದಲು NDAಯಿಂದ ಆಚೆಗೆ ಬಂದು ಮಾತನಾಡು ಎನ್ನುವ ಮೂಲಕ ಎಚ್‌ಡಿ ಕುಮಾರಸ್ವಾಮಿ ಸಪೋರ್ಟ್ ಮಾಡ್ತಿನಿ ಎಂಬ ವಿಚಾರಕ್ಕೆ ಡಿಸಿಎಂ ಡಿಕೆ ಶಿವಕುಮಾರ ತಿರುಗೇಟು ನೀಡಿದರು.
ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮಗೆ 136 ಜನರ ಸೀಟ್ ಇದೆ. ರಾಜ್ಯದ ಜನರು ಕೊಟ್ಟಿರುವ ಆಶೀರ್ವಾದ ಸಾಕು ನಮಗೆ. ನಿಮ್ಮ ಸಪೋರ್ಟ್ ಅಗತ್ಯ ಇಲ್ಲ. ಮಾಡೋ ಕಾಲದಲ್ಲೇ ಮಾಡಿಲ್ಲ ಈಗ ಏನ್ ಮಾಡೋದು. ಮೊದಲು ಅವರು ಒಳ್ಳೆಯ ವಿಪಕ್ಷ ನಾಯಕರಾಗಲಿ. ವಿಪಕ್ಷ ಸ್ಥಾನದಲ್ಲಿ ಇದ್ದು, ಸರ್ಕಾರವನ್ನು ತಿದ್ದುವ ಕೆಲಸ ಮಾಡಲಿ. ಸುಮ್ಮನೆ ಟೀಕೆ ಮಾಡುವುದಲ್ಲ ತಿದ್ದುವ ಕೆಲಸ ಮಾಡಬೇಕು. ಅವರಿಗೆ ಅಪಾರ ಅನುಭವ ಇದೆ. ನಮಗೆ ಅವರ ಮಾರ್ಗದರ್ಶನ ಬೇಕು. ಜನರು ನಮಗೆ ಆಶೀರ್ವಾದ ಕೊಟ್ಟಿದ್ದಾರೆ ಅದಕ್ಕೆ ಕೆಲಸ ಮಾಡುತ್ತೇವೆ ಎಂದರು.
ಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್, ಬಹಿರಂಗ ಹೇಳಿಕೆ ನೀಡಿದ ಸಚಿವರಿಗೆ ಖಡಕ್ ವಾರ್ನಿಂಗ್
ಕುಮಾರಸ್ವಾಮಿ ಅಷ್ಟೊಂದು ಪ್ರೀತಿ, ಕರುಣೆ ಇದ್ದರೆ ಅವರು ಏನೇನ್ ಮಾತಾಡಿದ್ದಾರೆ ರೆಕಾರ್ಡ್ ಮಾಡಿಕೊಂಡು ಮೊದಲು ಅದರ ಬಗ್ಗೆ ಮಾತಾಡ್ಲಿ. ಸರ್ಕಾರ ಹೋದಾಗ ಆದಾದ ಮೇಲೆ ಏನೇನ್ ಘಟನೆ ನಡೀತು ಅದಕ್ಕೆ ಉತ್ತರ ಕೊಡ್ಲಿ. ಅವರ ಆತ್ಮಸಾಕ್ಷಿಗೆ ಕುಮಾರಸ್ವಾಮಿ ಉತ್ತರ ಕೊಡ್ಲಿ ಎಂದು ತಿವಿದ ಡಿಸಿಎಂ ಡಿಕೆ ಶಿವಕುಮಾರ.
ಇನ್ನು ಸಿಎಂ ಹುದ್ದೆಗೆ ಬಣ ರಾಜಕೀಯ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ, ನಮ್ಮ ಪಾರ್ಟಿಯವರು ಸಿಎಂ ಹುದ್ದೆ ಬಗ್ಗೆ ಮತಾಡಿದ್ದಾರೆ ಅಂತಾ ಅಂದುಕೊಂಡೆ. ಹೀಗಾಗಿ ನಾನು ನೋಟಿಸ್ ಕೋಡೋದಾಗಿ ಹೇಳಿದ್ದೆ. ಇಕ್ಬಾಲ್ ಹುಸೇನ್ ಗೂ ನೋಟಿಸ್ ಕೊಡಬೇಕು ಅಂತ ಮಾಡಿದ್ದೆ. ನನಗೆ ಯಾರ ರೆಕ್ಮೆಂಡೆಷನ್ ಬೇಡ. ನನ್ನ, ಸಿದ್ದರಾಮಯ್ಯ ನೇತೃತ್ವದಲ್ಲಿ ಸಾಮೂಹಿಕ ಎಲೆಕ್ಷನ್ ನಡೆಸಿದ್ದೇವೆ. ಜನ ಆಶೀರ್ವಾದ ಮಾಡಿದ್ದಾರೆ. ರಾಜ್ಯದಲ್ಲಿ ಒಳ್ಳೆಯ ಆಡಳಿತ ಕೊಡೋಣ. ನಾನು ಅರ್ಜೆಂಟ್ ನಲ್ಲಿ ಏನೂ ಇಲ್ಲ. ನಾನು ಯಾರನ್ನು ಇದುವರೆಗೂ ಕೇಳಿಲ್ಲ. ನಮ್ಮ ಹೈಕಮಾಂಡ್ ಇದೆ. ಏನ್ ತೀರ್ಮಾನ ಮಾಡಬೇಕೋ ಮಾಡುತ್ತೆ. ಇವತ್ತು ಕೂಡ ನಮ್ಮ MLAಗಳಿಗೆ ಏನ್ ಹೇಳಬೇಕೋ ಹೇಳಿದ್ದೇನೆ. ನಮ್ಮ ಎಂಎಲ್ ಗಳಿಗೆ, ಮಂತ್ರಿಗೆ ಬುದ್ದಿ ವಾದ ಹೇಳಿದ್ದೇವೆ. ಜನರ ಮೇಲೆ ನಮಗೆ ವಿಶ್ವಾಸ ಇತ್ತು. ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ಜನರ ಆಶೀರ್ವಾದ ಮಾಡಿದ ಮೇಲೆ ಬುತ್ತಿ ಎತ್ತಿಕೊಂಡು ಹೈಕಮಾಂಡ್ ಮುಂದೆ ಹೋದ್ವಿ. ಹೈಕಮಾಂಡ್ ಏನ್ ಮಾಡ್ತಿರಾ ಅಂತಾ ಕೇಳಿದ್ದೇವೆ. ಹೇಳ್ತೀವಿ ಅಂತ ಹೈಕಮಾಂಡ್ ನಾಯಕರು ಹೇಳಿದ್ರು. ಸಿದ್ದರಾಮಯ್ಯ ಸಹ ಅದನ್ನೇ ಹೇಳಿದ್ರು ಎಂದರು. ಇದೇ ಸಿದ್ದರಾಮಯ್ಯ ಐದು ವರ್ಷ ನಾನೇ ಸಿಎಂ ಎಂಬ ಹೇಳಿಕೆಗೆ ಸಂಬಂಧ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ, ಸಿದ್ದರಾಮಯ್ಯ ದೊಡ್ಡ ಲೀಡರ್. ಅದನ್ನು ನಾವು ಒಪ್ಪಿಕೊಂಡಿದ್ದೇವೆ. ಕೆಲಸ ಮಾಡಿಕೊಂಡು ಹೋಗುತ್ತೇವೆ. ಅವರ ಹೇಳಿಕೆ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಇನ್ನು 3-4 ದಿನದಲ್ಲಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಪಟ್ಟಿ: ಡಿಕೆಶಿ
ಇನ್ನು ಕುಮಾರಸ್ವಾಮಿ ರೈತ ಸಾಂತ್ವನ ಯಾತ್ರೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ, ಬಹಳ ಸಂತೋಷ. ನಾನ್ಯಾಕೆ ಕೈಜೋಡಿಸಲಿ? ಅವರು ಏನಾದರೂ ಒಂದು ವರದಿ ಕೊಡಲಿ. ಜೆಡಿಎಸ್ NDAದ ಒಂದು ಭಾಗ. ರೈತರು ಬರದಿಂದ ಸಂಕಷ್ಟದಲ್ಲಿ ಇದಾರೆ. ಮೊದಲು ಕೇಂದ್ರದಿಂದ ದುಡ್ಡು ಕೊಡಿಸಲಿ ಎಂದು ತಿರುಗೇಟು ನೀಡಿದರು.