Asianet Suvarna News Asianet Suvarna News

ರಾಜ್ಯದ ಎಲ್ಲ ಮಾಜಿ ಸಿಎಂಗಳ ಅನುಭವ ಕೇಳಿದ ಡಿ.ಕೆ. ಶಿವಕುಮಾರ್‌, ಇದರ ಗೂಡಾರ್ಥವೇನು?

ರಾಜ್ಯದ ಎಲ್ಲ ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅವರ ಆಡಳಿತ ಅನುಭವಗಳನ್ನು ತಿಳಿದುಕೊಂಡ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌. 

DCM DK Shivakumar met all former Chief Ministers of Karnataka and heard their experiences sat
Author
First Published Jun 29, 2023, 11:36 PM IST

ಬೆಂಗಳೂರು (ಜೂ.29): ನಾನು ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ದೇವೇಗೌಡರು, ಎಸ್.ಎಂ.ಕೃಷ್ಣ, ವೀರಪ್ಪ ಮೊಯ್ಲಿ, ಜಗದೀಶ್ ಶೆಟ್ಟರ್ ಅವರ ಭೇಟಿಯ ಮಾದರಿಯಲ್ಲೇ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಅವರ ಆಡಳಿತದ ಅಅನುಭವ ಕೇಳಿದ್ದೇನೆ. ಉಳಿದಂತೆ ಸದಾನಂದಗೌಡರು ಮತ್ತು ಕುಮಾರಸ್ವಾಮಿ ಅವರನ್ನು ಭೇಟಿ ಮಾಡುವುದು ಬಾಕಿಯಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. 

ಕೇಂದ್ರ  ಜಲಶಕ್ತಿ ಸಚಿವರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಎಲ್ಲಾ ಮಾಜಿ ಸಿಎಂ ಗಳನ್ನು ಸಹ ಭೇಟಿ ಮಾಡಿದ್ದೇನೆ. ದೇವೇಗೌಡರನ್ನ, ಎಸ್ ಎಂ ಕೃಷ್ಣ ಅವರನ್ನ, ವೀರಪ್ಪ ಮೊಯ್ಲಿ ಅವರನ್ನ, ಜಗದೀಶ್ ಶೆಟ್ಟರ್ ಅವ್ರನ್ನ ಭೇಟಿ ಮಾಡಿದ್ದೇನೆ. ಸದಾನಂದ ಗೌಡ್ರನ್ನ ಭೇಟಿ ಆಗೋಕೆ ಪ್ರಯತ್ನ ಮಾಡಿದ್ದೇನೆ, ಇನ್ನೊಂದಿನ ಸಿಕ್ತಿನಿ ಎಂದರು. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಹೋದಾಗ ಅವರು ಇರ್ಲಿಲ್ಲ. ಎಲ್ಲರನ್ನು ಭೇಟಿ ಮಾಡಿ ಅವ್ರ ಅನುಭವಗಳನ್ನ, ವಿಚಾರಧಾರೆಗಳನ್ನ ಕೇಳಿದ್ದೇನೆ ಎಂದು ಹೇಳಿದರು.

ಅನ್ನಭಾಗ್ಯ ಪಿತಾಮಹ ಸಿಎಂ ಸಿದ್ದರಾಮಯ್ಯ ಅಲ್ಲ, ಮಾಜಿ ಪ್ರಧಾನಿ ವಾಜಿಪೇಯಿ!

ಬಿಜೆಪಿ ಅವರು ಏನ್ ಬೇಕಾದ್ರೂ ಮಾಡಬಹುದು, ಆದ್ರೆ ನಮ್ಮ ಸಂಸ್ಕೃತಿ ಹಾಗೆ ಅಲ್ಲ. ಈಗ ನಮ್ಮ ಮುಖ್ಯಮಂತ್ರಿ ಬಂದು ಹೋಮ್ ಮಿನಿಸ್ಟರ್ ರನ್ನ ಭೇಟಿ ಮಾಡಿದರು. ಅಲ್ಲಿ ನಾವು ರಾಜಕಾರಣ ಮಾತಾಡೋಕೆ ಆಗುತ್ತಾ ಇದೊಂದು ಫೆಡರಲ್ ಸ್ಟ್ರಕ್ಚರ್. ನಾವು ಎಲೆಕ್ಷನ್ ಮಾಡಿದ್ದೇವೆ. ಎಲೆಕ್ಷನ್ ರಾಜಕಾರಣವೇ ಬೇರೆ, ಅಭಿವೃದ್ಧಿ ರಾಜಕಾರಣ ಬೇರೆ. ಅವರು ಸ್ಥಾನದಲ್ಲಿ ಇರೋರಿಗೆ ನಾವು ಮರ್ಯಾದಿ ಕೊಡಲೇಬೇಕು. ಬಿಜೆಪಿಯವರು ಹಾಗೆಲ್ಲ ಮಾತಾಡ್ತಾರೆ ಅಂತ ನಾನು ಮಾತಾಡೋಕೆ ಬರೋಲ್ಲ ಎಂದರು.

 ಬಿಜೆಪಿ ನಾಯಕರ ಬಗ್ಗೆ ಬಿಜೆಪಿಗರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಬಿಜೆಪಿ ಪಕ್ಷದ ವಿಚಾರವನ್ನ ಅವರೇ ನೋಡಿಕೊಳ್ತಾರೆ. ನಾನ್ಯಾಕೆ ಬಿಜೆಪಿಯ ತಟ್ಟೆಗೆ ಕೈ ಹಾಕೋಕೆ ಹೋಗ್ಲಿ. ಅವ್ರ ಪಾರ್ಟಿಯಲ್ಲಿ ಲೀಡರ್ಸ್ ಇದಾರೆ, ದೊಡ್ಡ ದೊಡ್ಡ ಲೀಡರ್ ಗಳು ಇದ್ದಾರೆ. ಕಾಂಗ್ರೆಸ್ ಪಾರ್ಟಿಯನ್ನ ಸಹ ಟೀಕೆ ಮಾಡುವವರು ಇದ್ದಾರೆ. ಅವ್ರ ಪಕ್ಷದ ಬಗ್ಗೆ ಟೀಕೆ ಮಾಡುವವರು ಸಹ ಇದ್ದಾರೆ ಎಂದ ಪರೋಕ್ಷವಾಗಿ ಟೀಕೆ ಮಾಡಿದರು.

ಎಲ್ಲಿ ಶ್ರಮ ಇದಿಯೋ ಅಲ್ಲಿ ಫಲ ಇದೆ:  ಕೆಂಪೇಗೌಡ ದಿನಾಚರಣೆ ವೇಳೆ ವಿಧಾನಸೌಧ ನಿರ್ಮಾಣದ ಕುರಿತು ಮಾತನಾಡುತ್ತಾ ಶ್ರಮ ಒಬ್ಬರದ್ದು, ಅನುಭವಿಸೋರು ಮತ್ತೊಬ್ಬರು ಎಂದು ಹೇಳಿಕೆಯನ್ನು ನಾನು ಆ ಥರ ಎಲ್ಲಿಯೂ ಮಾತಾಡೇ ಇಲ್ಲಾ. ಯಾವ ಶ್ರಮನು ಸಹ ಇಲ್ಲಾ, ಯಾವ ಫಲನು ಇಲ್ಲಾ. ಎಲ್ಲಿ ಶ್ರಮ ಇದಿಯೋ ಅಲ್ಲಿ ಫಲ ಇದೆ. ಎಲ್ಲಿ ಭಕ್ತಿ ಇದಿಯೋ ಅಲ್ಲಿ ಭಗವಂತ ಇದ್ದಾನೆ. 

ಗೃಹಲಕ್ಷ್ಮಿ ಯೋಜನೆ ಹೆಸರಲ್ಲಿ ದೋಖಾ: ಅರ್ಜಿ ಸಲ್ಲಿಕೆ ನೆಪದಲ್ಲಿ ಹಣ ವಸೂಲಿಗಿಳಿದ ಖಾಸಗಿ ಏಜೆನ್ಸಿ

ಇನ್ನು ಅಕ್ಕಿ ಕೊಡುವ ವಿಚಾರದಲ್ಲಿ ಬಿಜೆಪಿ ಅವ್ರ ಮಾತು ಕೇಳಿ ಸಹ ನಾವು ಈ ನಿರ್ಧಾರ ಮಾಡಿದ್ದೇವೆ. ಇದು ಕೇವಲ ಟೆಂಪರೋರಿ ಅಷ್ಟೇ, ಪರ್ಮನೆಂಟ್ ಅಲ್ಲ. ಅಕ್ಕಿ ಸಂಗ್ರಹ ಮಾಡೋಕೆ ಯೋಚನೆ ಇದೆ. ಕೆಲವರು ರಾಗಿ ಕೇಳ್ತಾರೆ, ಕೆಲುವರು ಜೋಳ ಅಂತಿದ್ದಾರೆ. ನಾವು 10 ಕೆಜಿ ಆಹಾರ ಧಾನ್ಯ ಕೊಡ್ತೀವಿ ಅಂತ ಹೇಳಿದ್ದೇವೆ. ನಾವು ಕೊಟ್ಟ ನಾತು ಉಳಿಸಿಕೊಳ್ತೀವೆ. ಸರ್ಕಾರ ಒಂದಂತೂ ತೀರ್ಮಾನ ಮಾಡಿದೆ. UPA ಸರ್ಕಾರ ಫುಡ್ ಸೆಕ್ಯೂರಿಟಿ ಆಕ್ಟ್ ನ್ನ ತೆಗೆದುಕೊಂಡು ಬಂದಿದೆ. ಅಕ್ಕಿ ಅವತ್ತಿಂದನು ಸಹ ಕೊಡ್ತಾ ಬಂದಿದ್ದೇವೆ. ನಾವು ಕೊಟ್ಟ ಮಾತು ಉಳಿಸಿಕೊಂಡು ಬಂದಿದ್ದೇವೆ. ಎಲ್ಲಾ ಚರ್ಚೆ ಮಾಡಿದ್ದೇವೆ. ಎಲ್ಲಾ ಒಪಿಕೊಂಡಿದ್ದರು, ಆದ್ರೆ ಇವಾಗ ರಿವರ್ಸ್ ಹೊಡ್ದಿದ್ದಾರೆ ಅಷ್ಟೇ ಎಂದು ಹೇಳಿದರು. 

Latest Videos
Follow Us:
Download App:
  • android
  • ios