ನಾಳೆ ಹೊಸಪೇಟೆಯಲ್ಲಿ ನಡೆಯಲಿರುವ ರಾಜ್ಯ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶದ ಹಿನ್ನೆಲೆಯಲ್ಲಿ, ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ ಅವರು ಯೂಥ್ ಕಾಂಗ್ರೆಸ್ ಆಯೋಜಿಸಿದ ಬೃಹತ್ ಬೈಕ್ ರ್ಯಾಲಿಗೆ ಚಾಲನೆ ನೀಡಿದರು.
ವಿಜಯನಗರ/ಬೆಂಗಳೂರು (ಮೇ.19): ನಾಳೆ ಹೊಸಪೇಟೆಯಲ್ಲಿ ನಡೆಯಲಿರುವ ರಾಜ್ಯ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶದ ಹಿನ್ನೆಲೆಯಲ್ಲಿ, ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ ಅವರು ಯೂಥ್ ಕಾಂಗ್ರೆಸ್ ಆಯೋಜಿಸಿದ ಬೃಹತ್ ಬೈಕ್ ರ್ಯಾಲಿಗೆ ಚಾಲನೆ ನೀಡಿದರು.
ತಲೆಗೆ ಹೆಲ್ಮೆಟ್ ಧರಿಸಿ, ಕಾಂಗ್ರೆಸ್ ಧ್ವಜದೊಂದಿಗೆ ಜಾಲಿಯಾಗಿ ಬೈಕ್ ಓಡಿಸಿದ ಡಿಸಿಎಂ, ಹೊಸಪೇಟೆ ನಗರದ ಹುಡಾ ವೃತ್ತದಿಂದ ರ್ಯಾಲಿಯನ್ನು ಆರಂಭಿಸಿದರು. ರ್ಯಾಲಿಯು ಡಾ ಬಿ ಆರ್ ಅಂಬೇಡ್ಕರ್ ಸರ್ಕಲ್, ಪುನೀತ್ ಸರ್ಕಲ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ್ದು, ನೂರಾರು ಯೂಥ್ ಕಾಂಗ್ರೆಸ್ ಕಾರ್ಯಕರ್ತರು 'ಕಾಂಗ್ರೆಸ್‌ಗೆ ಜೈಕಾರ ಹಾಕುತ್ತಾ'ಉತ್ಸಾಹದಿಂದ ಭಾಗವಹಿಸಿದರು.

ಇದನ್ನೂ ಓದಿ: ಎರಡು ವರ್ಷದಲ್ಲಿ ನೀವು, ನಿಮ್ಮ ಪಟಾಲಂ ಲೂಟಿ ಹೊಡೆದಿದ್ದು ಬಿಟ್ಟರೆ ಏನ್ ಸಾಧನೆ ನಿಮ್ದು? ಸಿಎಂ ವಿರುದ್ಧ ವಿಶ್ವನಾಥ ಗರಂ
ಬೆಂಗಳೂರಿಗರು ನೀರಿನಲ್ಲಿ..!
ಇತ್ತ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದ ನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ರಸ್ತೆಗಳು ಕೆರೆಗಳಂತಾಗಿ ಬೆಂಗಳೂರಿಗರು ವಾಹನ ಚಲಾಯಿಸಲಾಗದೆ ಪರದಾಡುತ್ತಿದ್ದಾರೆ. ತಡರಾತ್ರಿಯಿಂದ ಬೆಳಗಿನವರೆಗೆ ಸುರಿದ ಭಾರೀ ಮಳೆಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಸ್ತೆಗಳಲ್ಲಿ ನೀರು ತುಂಬಿ, ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ನಗರದ ಹಲವು ಭಾಗಗಳಲ್ಲಿ ಜಲಾವೃತವಾಗಿದೆ. ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಡಿಕೆ ಶಿವಕುಮಾರ್ ಅವರು ಹೊಸಪೇಟೆಯಲ್ಲಿ ರೋಡ್ ಶೋ ನಡೆಸುತ್ತಿದ್ದರೆ, ಇತ್ತ ಬೆಂಗಳೂರಿನ ಜನ ನೀರು ತುಂಬಿ ಕೆರೆಯಂತಾದ ರಸ್ತೆಗಳಲ್ಲೇ ವಾಹನ ಓಡಿಸುವ ಸಾಹಸ ಮಾಡುತ್ತಿದ್ದಾರೆ. ಸ್ಮಾರ್ಟ್ ಬೆಂಗಳೂರು, ಗ್ರೇಟರ್ ಬೆಂಗಳೂರು ಯಾವುದು ಬೇಡ, ಮಳೆಗಾಲದಲ್ಲಿ ಆಗುವ ಬೆಂಗಳೂರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಇದನ್ನೂ ಓದಿ: ನಾಳೆ ಸಿದ್ದು ಸರ್ಕಾರಕ್ಕೆ 2 ವರ್ಷ: 1,11,111 ಮಂದಿಗೆ ಹಕ್ಕುಪತ್ರ ವಿತರಣೆ; ಕಾರ್ಯಕ್ರಮದ ವಿವರ ಇಲ್ಲಿದೆ
ಸಾಧನಾ ಸಮಾವೇಶಕ್ಕೆ ರಾಜ್ಯದಾದ್ಯಂತ ಸುಮಾರು 2.5 ಲಕ್ಷ ಫಲಾನುಭವಿಗಳು ಆಗಮಿಸುವ ನಿರೀಕ್ಷೆಯಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿದಂತೆ ಹಿರಿಯ ನಾಯಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮುಂದಿನ ಅಪ್‌ಡೇಟ್‌ಗಾಗಿ ಸಂಪರ್ಕದಲ್ಲಿರಿ!


