Asianet Suvarna News Asianet Suvarna News

ಭತ್ತದ ಬೆಳೆಗೆ ಭದ್ರಾ ನೀರಿಗಾಗಿ ರೈತರ ಆಗ್ರಹ: ಇಂದು ದಾವಣಗೆರೆ ಜಿಲ್ಲೆ ಬಂದ್‌!

ಭದ್ರಾ ಜಲಾಶಯದಿಂದ ಬಲದಂಡೆ ಮತ್ತು ಎಡದಂಡೆ ನಾಲೆಗಳಿಗೆ ಸತತ 100 ದಿನ ಕಾಲ ನೀರು ಬಿಡದಿರುವ ನಿರ್ಧಾರ ಖಂಡಿಸಿ ದಾವಣಗೆರೆ ಭಾಗದ ರೈತರು ಸೋಮವಾರ ಜಿಲ್ಲಾ ಬಂದ್‌ಗೆ ಕರೆ ನೀಡಿದ್ದಾರೆ. 

Davangere Bandh On Sep 25th Demanding Bhadra Water To Canal gvd
Author
First Published Sep 25, 2023, 5:23 AM IST

ದಾವಣಗೆರೆ (ಸೆ.25): ಭದ್ರಾ ಜಲಾಶಯದಿಂದ ಬಲದಂಡೆ ಮತ್ತು ಎಡದಂಡೆ ನಾಲೆಗಳಿಗೆ ಸತತ 100 ದಿನ ಕಾಲ ನೀರು ಬಿಡದಿರುವ ನಿರ್ಧಾರ ಖಂಡಿಸಿ ದಾವಣಗೆರೆ ಭಾಗದ ರೈತರು ಸೋಮವಾರ ಜಿಲ್ಲಾ ಬಂದ್‌ಗೆ ಕರೆ ನೀಡಿದ್ದಾರೆ. ಬೇಸಿಗೆ ದಿನಗಳ ನೆಪವೊಡ್ಡಿ ಭದ್ರಾ ಕಾಡಾ ಸಮಿತಿ ದಿಢೀರ್‌ 40 ದಿನಕ್ಕೆ ನೀರು ಬಂದ್ ಮಾಡಿ ದಾವಣಗೆರೆ ಜಿಲ್ಲೆಯ ಅಚ್ಚುಕಟ್ಟು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. 1.25 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ಒಣಗಿ ರೈತರು ನಷ್ಟ ಅನುಭವಿಸುವ ಆತಂಕ ಎದುರಾಗಿದೆ. ಇದನ್ನು ಖಂಡಿಸಿ ಬಂದ್‌ ನಡೆಸಲಾಗುತ್ತಿದೆ ಎಂದು ಭಾರತೀಯ ರೈತ ಒಕ್ಕೂಟ ಹೇಳಿದೆ.

ದಾವಣಗೆರೆಯಾದ್ಯಂತ ಸೋಮವಾರ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳು, ಸಂಘಟನೆಗಳು, ವ್ಯಾಪಾರಸ್ಥರು, ಆಟೋ ರಿಕ್ಷಾ, ಸರಕು ಸಾಗಾಣಿಕೆ ವಾಹನ, ಲಾರಿ, ಎಪಿಎಂಸಿ, ಹೋಟೆಲ್‌ಗಳು ಸೇರಿ ಎಲ್ಲಾ ವ್ಯಾಪಾರ ವಹಿವಾಟು ಬಂದ್ ಮಾಡಿ, ಹೋರಾಟಕ್ಕೆ ಬೆಂಬಲಿಸಬೇಕು. ಅನ್ನದಾತ ರೈತರ ಹೋರಾಟಕ್ಕೆ ಸ್ವಯಂ ಪ್ರೇರಿತರಾಗಿ ಬಂದ್‌ಗೆ ಸಹಕರಿಸುವಂತೆ ಒಕ್ಕೂಟ ಮನವಿ ಮಾಡಿದೆ.

ರಾಜ್ಯ ಸರ್ಕಾರಕ್ಕೆ ಹಿಂದೂ ಚಟುವಟಿಕೆ, ಕಾರ್ಯಕರ್ತರೇ ಟಾರ್ಗೆಟ್‌: ಜೋಶಿ ಕಿಡಿ

ಭದ್ರಾವತಿ ಭಾಗದ ಅಚ್ಚುಕಟ್ಟು ರೈತರಲ್ಲದವರ ಒತ್ತಡಕ್ಕೆ ಮಣಿದು, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭದ್ರಾ ಕಾಡಾ ಸಮಿತಿ ಮೂಲಕ ನೀರು ನಿಲ್ಲಿಸಿದ್ದಾರೆ. ಅಚ್ಚುಕಟ್ಟು ರೈತರಿಗೆ ನ್ಯಾಯ ಕೊಡಿಸಬೇಕಿದ್ದ ಜಲ ಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇತ್ತ ಗಮನ ಹರಿಸುತ್ತಿಲ್ಲ ಎಂಬ ಆರೋಪ ಒಕ್ಕೂಟದ್ದಾಗಿದೆ.

ರಾಜ್ಯ ಸರ್ಕಾರ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಭದ್ರಾ ಡ್ಯಾಂನಲ್ಲಿ ಈಗ ಸಂಗ್ರಹವಿರುವ ನೀರಿನಲ್ಲಿ ಮಳೆಗಾಲದ ಬೆಳೆಗೆ ನೀರು ಬಿಟ್ಟರೂ ಬೇಸಿಗೆ ನೀರಿಗೆ ಸಮಸ್ಯೆ ಆಗದು. 8.43 ಟಿಎಂಸಿ ನೀರು ಬಳಕೆಗೆ ಸಿಗಲಿದೆ. ಹಿಂದೆ ಇದಕ್ಕಿಂತಲೂ ಕಡಿಮೆ ನೀರಿದ್ದಾಗಲೂ ಮಳೆಗಾಲದ ಬೆಳೆಗೆ ನೀರು ಬಿಡಲಾಗಿದೆ. ವಾಸ್ತವ ಹೀಗಿದ್ದರೂ ಮಧುಬಂಗಾರಪ್ಪಹಾಗೂ ಭದ್ರಾ ಕಾಡಾ ಸಮಿತಿ ಏಕಾಏಕಿ ನೀರು ನಿಲ್ಲಿಸಿ ದಾವಣಗೆರೆ ಭಾಗದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪಾಕಿಸ್ತಾನದ ಲಾಹೋರ್‌ನಲ್ಲಿ ಗಣೇಶ ಪ್ರತಿಷ್ಠಾಪಿಸುತ್ತೇವೆ: ಶಾಸಕ ಬಸನಗೌಡ ಯತ್ನಾಳ್‌

ಬಂದ್‌ ಯಾಕೆ?: ಭದ್ರಾ ಜಲಾಶಯದಿಂದ ಬಲದಂಡೆ, ಎಡದಂಡೆ ನಾಲೆಗಳಿಗೆ ವರ್ಷದಲ್ಲಿ 100 ದಿನ ನೀರು ಹರಿಸಬೇಕು. ಆದರೆ ಈ ಬಾರಿ 40 ದಿನಕ್ಕೇ ನೀರು ಬಂದ್‌ ಮಾಡಲಾಗಿದೆ. ಇದರಿಂದ 1.25 ಲಕ್ಷ ಎಕರೆ ಪ್ರದೇಶದ ಭತ್ತ ಒಣಗುವ ಆತಂಕ ರೈತರಿಗೆ ಎದುರಾಗಿದೆ. ಹೀಗಾಗಿ ಬಂದ್‌ಗೆ ಕರೆ ನೀಡಿದ್ದಾರೆ.

Follow Us:
Download App:
  • android
  • ios