ಮೈಸೂರಿನಿಂದ ಬೆಂಗಳೂರಿಗೆ ತೆರಳಲು ವಿಶೇಷ ವಿಮಾನ ಸೇವೆಯನ್ನು ಆರಂಭ ಮಾಡಲಾಗುತ್ತದೆ. ದಸರಾ ಸಂದರ್ಭದಲ್ಲಿ ಈ ಸೇವೆ ಲಭ್ಯವಿರಲಿದೆ.

ಬೆಂಗಳೂರು : ಮೈಸೂರು ದಸರಾ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ವಿಶೇಷ ವಿಮಾನ ಹಾಗೂ ‘ತೆರೆದ ಬಸ್‌’ ಪ್ರವಾಸ ಮತ್ತು ‘ಹೋಹೋ ಬಸ್‌’ ವ್ಯವಸ್ಥೆ ಕಲ್ಪಿಸಲು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್‌ಟಿಡಿಸಿ), ಬಿಎಂಟಿಸಿ, ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಯೋಜನೆ ಆರಂಭಿಸಿವೆ.

ದೇಶ, ವಿದೇಶಗಳಿಂದ ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಅ.10ರಿಂದ 19ರವರೆಗೆ ವಿಶೇಷ ವಿಮಾನ ಸೌಲಭ್ಯ ದೊರೆಯಲಿದೆ. ಅದಕ್ಕಾಗಿ ಕೆಎಸ್‌ಟಿಡಿಸಿ ಹಾಗೂ ಏರ್‌ ಇಂಡಿಯಾದ ಅಂಗ ಸಂಸ್ಥೆ ಅಲಯನ್ಸ್‌ ಏರ್‌ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದಂತೆ 72 ಸೀಟುಗಳುಳ್ಳ ಎಟಿಆರ್‌ ವಿಮಾನಗಳು ಮೈಸೂರು ಮತ್ತುಬೆಂಗಳೂರಿನ ನಡುವೆ ಹಾರಾಟ ನಡೆಸಲಿವೆ.

ಪ್ರತಿ ದಿನ ಮಧ್ಯಾಹ್ನ 2.10ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಆರಂಭವಾಗುತ್ತದೆ. ಮೈಸೂರಿನಿಂದ ಮಧ್ಯಾಹ್ನ 3.30ಕ್ಕೆ ವಿಮಾನವು ಬೆಂಗಳೂರಿನೆಡೆಗೆ ಪ್ರಯಾಣ ಆರಂಭಿಸಲಿದೆ. ಟಿಕೆಟ್‌ಗಳು .999ರಿಂದ .15 ಸಾವಿರ ದರದಲ್ಲಿ ಸಿಗಲಿದೆ. ಎಲ್ಲ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಕೇಂದ್ರಗಳಲ್ಲಿ ಟಿಕೆಟ್‌ಗಳು ಲಭ್ಯವಿರಲಿದೆ. ಕಳೆದೆರಡು ವರ್ಷಗಳಿಂದ ಕೆಎಸ್‌ಟಿಡಿಸಿ ಏಳು ಸೀಟುಗಳ ‘ಆಕಾಶ ಅಂಬಾರಿ’ ಕೆಸೆನ್ನಾ ವಿಮಾನಗಳ ಹಾರಾಟ ನಡೆಸಿತ್ತು.