Asianet Suvarna News Asianet Suvarna News

ರಿಯಾಲಿಟಿ ಶೋ ಮಾದರಿಯಲ್ಲಿ ದಸರಾ ಆಚರಣೆ!

ರಾಜ್ಯದಲ್ಲಿ ವಿಜೃಂಭಣೆಯಿಂದ ದಸರಾ ಸಂಭ್ರಮವನ್ನು ಆಚರಿಸಲಾಗಿದೆ. ಇದೇ ವೇಳೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದಲ್ಲಿ ವಿಶೇಷವಾಗಿ ರಿಯಾಲಿಟಿ ಶೋ ಮಾದರಿಯಲ್ಲಿ ದಸರಾ ಹಬ್ಬದ ಆಚರಣೆ ಮಾಡಲಾಗಿದೆ.

Dasara celebration in reality show style in koppal san
Author
First Published Oct 5, 2022, 4:45 PM IST

ವರದಿ- ದೊಡ್ಡೇಶ್ ಯಲಿಗಾರ್ ಸುವರ್ಣ ನ್ಯೂಸ್
ಕೊಪ್ಪಳ (ಅ.5): ನಾಡಹಬ್ಬ ದಸರಾ ಸಂಭ್ರಮ ನಾಡಿನಾದ್ಯಂತ ಸಂಭ್ರಮದಿಂದ ನಡೆಯುತ್ತಿದೆ. ಈ  ವೇಳೆ ದಸರಾ ಹಬ್ಬವನ್ನು ಇಲ್ಲೊಂದು ಸಮಾಜದವರು ವಿಭಿನ್ನ ರೀತಿಯಲ್ಲಿ ಆಚರಣೆ ಮಾಡಿದ್ದಾರೆ.  ಅಷ್ಟಕ್ಕೂ ಯಾವ ಸಮಾಜದವರು ದಸರಾ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಣೆ ಮಾಡಿದರು ಅನ್ನೋ ಕುತೂಹಲ ನಿಮ್ಮಲ್ಲಿದೆಯೇ ಈ ವರದಿ ಓದಿ. ನವ ದೇವತೆಗಳನ್ನು ಪೂಜಿಸುವ ನವರಾತ್ರಿ ಸಂಭ್ರಮದಲ್ಲಿ ದೇವಿ ಆರಾಧನೆಯ ಸಂದರ್ಭದಲ್ಲಿ ದೇವಿಗೆ ಘಟ್ಟ ಹಾಕಿದವರು ಒಂಬತ್ತು ದಿನವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಇದೇ ರೀತಿಯಲ್ಲಿ ಈ ಬಾರಿ ರಿಯಾಲಿಟಿ ಶೋಗಳ ಮಾದರಿಯಲ್ಲಿ ವಿಭಿನ್ನ ಆಟಗಳ ಮೂಲಕ ಹಬ್ಬದ ಆಚರಣೆ ಮಾಡಿದ್ದಾರೆ.  ಸಹಸ್ರಾರ್ಜುನ ಸೋಮವಂಶ ಕ್ಷತ್ರೀಯ ಸಮಾಜ ಬಾಂಧವರು ಅಂದರೆ ಸಾಕು ನಮಗೆ ತಟ್ಟನೆ ನೆನಪಾಗುವುದು ಇವರು ಅಂಬಾಭವಾನಿ ಆರಾಧಕರೆಂದು. ಈ ಸಮಾಜ ಬಾಂಧವರು ಪ್ರತಿವರ್ಷ ದಸರಾ ಸಮಯದಲ್ಲಿ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಬಂದಿದ್ದಾರೆ. ಈ ವರ್ಷ ಮಾತ್ರ ಸ್ವಲ್ಪ ಡಿಫ್ರೆಂಟ್ ಆಗಿಯೇ ಅವರು ದಸರಾ ಹಬ್ಬವನ್ನು ಆಚರಿಸಿದರು.  

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ (Hanumasagara) ಗ್ರಾ‌ಮದಲ್ಲಿ ಈ ಆಚರಣೆ ನಡೆದಿದೆ. ಸಹಸ್ರಾರ್ಜುನ ಸೋಮವಂಶ ಕ್ಷತ್ರೀಯ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಗ್ರಾಮ ಇದಾಗಿದೆ. ಈ ಗ್ರಾಮದಲ್ಲಿ ಅಂಬಾಭವಾನಿ ದೇವಸ್ಥಾನ ಇದೆ. ಈ ದೇವಸ್ಥಾನದಲ್ಲಿ ಒಂಬತ್ತು ದಿನಗಳ ಕಾಲ ದಸರಾ ಹಬ್ಬದ ಹಿನ್ನಲೆಯಲ್ಲಿ ವಿಶೇಷವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಆದರೆ ಇದೇ ಮೊದಲ ಬಾರಿಗೆ ರಿಯಾಲಿಟಿ ಶೋಗಳ ಮಾದರಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ನಾಡಹಬ್ಬದ ದಿನವೇ ಸಾರಿಗೆ ಸಂಸ್ಥೆಯಲ್ಲಿ ನಾಡಿಗೆ ಅಪಮಾನ!

ಸಹಸ್ರಾರ್ಜುನ ಸೋಮವಂಶ ಕ್ಷತ್ರೀಯ ಸಮಾಜ ಬಾಂಧವರಿಂದ ನವರಾತ್ರಿ (Navaratri) ಸಂಭ್ರಮದಲ್ಲಿ ರಿಯಾಲಿಟಿ ಶೋಗಳಲ್ಲಿ (Reality Show) ನಡೆಯುವಂತೆ ದಂಪತಿಗಳಿಗೆ ಮೋಜಿನ ಆಟ ನಡೆಸಲಾಯಿತು.  ಈ ಸಂದರ್ಭದಲ್ಲಿ ಬಾಲ್ ಒಂದನ್ನು ದಂಪತಿಗಳು ತುಟಿಯಲ್ಲಿ ಹಿಡಿದು ಬುಟ್ಟಿಗೆ ಹಾಕೋದು. ಅಭಿನಯ ಮುಖಾಂತರ ದೃಶ್ಯಗಳನ್ನು ಹಾಗೂ ವಸ್ತುಗಳನ್ನು, ನಟರ ಹೆಸರು ಹೇಳುವ ಸ್ಪರ್ಧೆ ನಡೆಯಿತು. ತಮಾಷೆಯಾಗಿರುವ ಈ ಆಟದಲ್ಲಿ ನೂರಾರು ದಂಪತಿಗಳು ಭಾಗವಹಿಸಿ ಮೋಜಿನ ಆಟವನ್ನು ಆಡಿ ಸಂಭ್ರಮಿಸಿದರು.  

ದಸರಾ ಸಂಭ್ರಮದಲ್ಲೂ ಹಲಾಲ್​ VS ಜಟ್ಕಾ ಕಟ್ ಅಭಿಯಾನ ಮತ್ತೆ ಸದ್ದು!

ಒಟ್ಟಿನಲ್ಲಿ ಒಂಬತ್ತು ದಿನ ದೇವಿಗೆ ಆಲಂಕಾರ ಮಾಡಿ, ದೇವಿಗೆ ಪೂಜೆ ಸಲ್ಲಿಸುವ ಜನ ಈ ಹಬ್ಬವನ್ನು ವಿವಿಧ ರೀತಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಂಭ್ರಮಿಸಿದ್ದು ವಿಶೇಷವಾಗಿತ್ತು.

Follow Us:
Download App:
  • android
  • ios