ಕೋರ್ಟ್ ಆದೇಶಕ್ಕೆ ಮಣಿದ ಸರ್ಕಾರ ಇದೀಗ ಐಜಿಪಿಯಿಂದ ಎಡಿಜಿಪಿಯಾಗಿ ಮುಂಬಡ್ತಿ ನೀಡಿದೆ.
ಬೆಂಗಳೂರು (ಮೇ.31) ಖ್ಯಾತ ಐಪಿಎಸ್ ಅಧಿಕಾರಿ ಡಿ ರೂಪಾ ಇದೀಗ ಎಡಿಜಿಪಿಯಾಗಿ ಮುಂಬಡ್ತಿ ಪಡೆದಿದ್ದಾರೆ. ಕರ್ನಾಟಕ ಹೈ ಕೋರ್ಟ್ ಆದೇಶಕ್ಕೆ ಮಣಿಸಿದ ಸರ್ಕಾರ ಇದೀಗ ಅಧಿಕೃತವಾಗಿ ಮುಂಬಡ್ತಿ ನೀಡಿ ಆದೇಶ ಹೊರಡಿಸಿದೆ. ಐಜಿಪಿ ಹುದ್ದೆಯಲ್ಲಿದ್ದ ಡಿ ರೂಪಾ ಇದೀಗ ಎಡಿಜಿಪಿಯಾಗಿ ಮುಂಬಡ್ತಿ ಪಡೆದಿದ್ದಾರೆ.
ರೋಹಿಣಿ ಸಿಂಧೂರಿಯವರ ವಿಚಾರದಲ್ಲಿ ಸೃಷ್ಟಿಯಾದ ಗೊಂದಲದಲ್ಲಿ ಡಿ ರೂಪಾ ಶಿಸ್ತು ಕ್ರಮವನ್ನು ಎದುರಿಸಿದ್ದರು. ಮಾರ್ಚ್‌ನಲ್ಲಿ ತಮ್ಮ ಕ್ಯಾಬಿನ್‌ನಲ್ಲಿ ಫೈಲ್ ಇಟ್ಟು ಸಿಕ್ಕಿಹಾಕಿಸಲು ಪ್ರಯತ್ನಿಸಿದ್ದಾರೆ ಎಂದು ವರ್ತಿಕಾ ಕಟಿಯಾರ್ ಐಪಿಎಸ್ ಡಿ. ರೂಪ ವಿರುದ್ಧ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಡಿ ರೂಪ ಅವರನ್ನು ಗುಪ್ತಚರ ವಿಭಾಗದಿಂದ ವರ್ಗಾವಣೆ ಮಾಡಲಾಗಿತ್ತು. ಇತ್ತ ಕಾನೂನು ಸಮರ ಮುಂದುವರಿತ್ತು. ಇದೀಗ ಕೋರ್ಟ್ ಮಹತ್ವ ಆದೇಶ ನೀಡಿದೆ. ಕೋರ್ಟ್ ಆದೇಶಕ್ಕೆ ಮಣಿದ ಸರ್ಕಾರ ಮುಂಬಡ್ತಿ ನೀಡಿದೆ. ಈ ಕುರಿತು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಇದನ್ನೂ ಓದಿ: Rohini Sindhuri Vs D Roopa | ರಾಜೀ ಮೂಲಕ ಕದನಕ್ಕೆ ವಿರಾಮ ಘೋಷಿಸ್ತಾರಾ? | Kannada News | Suvarna News
ಕರ್ನಾಟಕ ಹೈಕೋರ್ಟ್ ಆದೇಶ
ಕರ್ನಾಟಕ ಹೈಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಸರ್ಕಾರ ಮುಂಬಡ್ತಿ ಆದೇಶ ಹೊರಡಿಸಿದೆ.
