ಅನುಮತಿ ಪಡೆಯದೆ ಮರ ಕಡಿದ ಪ್ರಕರಣ; ಕಾಂಗ್ರೆಸ್ ಎಂಎಲ್ಸಿಗೆ ನೋಟಿಸ್ ನೀಡಲು ಮುಂದಾದ ಅರಣ್ಯ ಇಲಾಖೆ
ಅರಣ್ಯ ಇಲಾಖೆ ಅನುಮತಿ ಪಡೆಯದೇ ಮರಗಳನ್ನು ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಎಲ್ಸಿಗೆ ನೋಟಿಸ್ ನೀಡಲು ಅರಣ್ಯ ಇಲಾಖೆ ಮುಂದಾಗಿದೆ. ಗಾಂಧಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ. ದಕ್ಷಿಣ ಪದವೀಧರರ ಕ್ಷೇತ್ರದಿಂದ ಚುನಾಯಿತರಾಗಿರುವ ಮಧು ಮಾದೇಗೌಡ ವಿರುದ್ಧ ಆರೋಪ ಕೇಳಿಬಂದಿದೆ.
ಮಂಡ್ಯ (ಜ.2): ಅರಣ್ಯ ಇಲಾಖೆ ಅನುಮತಿ ಪಡೆಯದೇ ಮರಗಳನ್ನು ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಎಲ್ಸಿಗೆ ನೋಟಿಸ್ ನೀಡಲು ಅರಣ್ಯ ಇಲಾಖೆ ಮುಂದಾಗಿದೆ. ಗಾಂಧಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ. ದಕ್ಷಿಣ ಪದವೀಧರರ ಕ್ಷೇತ್ರದಿಂದ ಚುನಾಯಿತರಾಗಿರುವ ಮಧು ಮಾದೇಗೌಡ ವಿರುದ್ಧ ಆರೋಪ ಕೇಳಿಬಂದಿರುವ ಹಿನ್ನೆಲೆ ನೋಟಿಸ್ ನೀಡಲು ಮುಂದಾದ ಅರಣ್ಯ ಇಲಾಖೆ. ಮಂಡ್ಯ ತಾಲೂಕಿನ ಹೆಚ್.ಮಲ್ಲಿಗೆರೆ ಫಾರಂನಲ್ಲಿ ನಡೆದಿದ್ದ ಮರಗಳ ಮಾರಣ ಹೋಮ. ಗಾಂಧಿ ಗ್ರಾಮಕ್ಕಾಗಿ 20 ಎಕರೆ ಜಮೀನು ಮಂಜೂರು ಮಾಡಿದ್ದ ಸರ್ಕಾರ. ಗ್ರಾಮದ ಅಭಿವೃದ್ದಿ ಹೆಸರಲ್ಲಿ 19 ಮರಗಳ ಹನನ ಮಾಡಲಾಗಿತ್ತು.
'ನನ್ನ ಅರೆಸ್ಟ್ ಹಿಂದೆ ವ್ಯವಸ್ಥಿತ ಪಿತೂರಿ ಇದೆ, ಟೈಮ್ ಬಂದಾಗ ಎಲ್ಲವನ್ನೂ ಹೇಳ್ತೇನೆ': ವಿಕ್ರಮ್ ಸಿಂಹ
ಮಾದೇಗೌಡ ಸೂಚನೆಯಂತೆ ಮರಗಳ ಕಡಿದು ಸಾಗಾಟ ಮಾಡಿರುವ ಆರೋಪ. ಈ ಹಿಂದೆ ರೇಷ್ಮೆ ಇಲಾಖೆಗೆ ಸೇರಿದ್ದ 20 ಎಕರೆ ಜಾಗ ಗಾಂಧಿ ಗ್ರಾಮಕ್ಕಾಗಿ ಗುರುತಿಸದಿದ್ದರು. ಆದರೆ ಈ ಜಾಗದಲ್ಲಿ ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಅಕ್ರಮವಾಗಿ ಮರಗಳನ್ನು ಕಡಿಯಲಾಗಿತ್ತು ಬಳಿಕ ಅನುಮತಿಗೆ ಮನವಿ ಪತ್ರ ಕೊಟ್ಟಿದ್ದ ಪರಿಷತ್ ಸದಸ್ಯ. ಈಗಾಗಲೇ ಮುಂದೆ ನಿಂತು ಮರ ಕಡಿಸಿದ್ದ ಗ್ರಾ.ಪಂ ಅಧ್ಯಕ್ಷ ಸೇರಿ ಇತರ ಮೇಲೆ ಅರಣ್ಯ ಕಾಯ್ದೆ ಮೊಕದ್ದಮೆ ದಾಖಲು ಮಾಡಲಾಗಿದೆ. ಇದೀಗ ಅದೇ ಪ್ರಕರಣದಲ್ಲಿ ಮಧು ಮಾದೇಗೌಡರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಮುಂದಾಗಿರೋ ಅರಣ್ಯ ಇಲಾಖೆ.
ಹಾಸನ ಮರ ಕಡಿತಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದ ವಿಕ್ರಂ ಸಿಂಹ!
ಇತ್ತೀಚೆಗೆ ಮರಗಳ್ಳತನ ಆರೋಪದ ಮೇಲೆ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹ ಅವರನ್ನು ಬಂಧಿಸಲಾಗಿತ್ತು. ಎಫ್‌ಐಆರ್‌ನಲ್ಲಿ ವಿಕ್ರಂ ಸಿಂಹರ ಹೆಸರೇ ಇಲ್ಲದಿದ್ರೂ ರಾಜಕೀಯ ದ್ವೇಷಕ್ಕೆ ಬಂಧಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಸ್ವಪಕ್ಷ ಶಾಸಕನ ವಿರುದ್ಧವೇ ನೋಟಿಸ್ ನೀಡಿರುವ ಅರಣ್ಯ ಇಲಾಖೆ. ನಿಜಕ್ಕೂ ವಿಚಾರಣೆಗೊಳಪಡಿಸುತ್ತದಾ? ಕಣ್ಣೊರೆಸುವ ತಂತ್ರವಾ ಕಾದು ನೋಡಬೇಕು.