ಚಿತ್ರದುರ್ಗ[ಜ.15]: ನಾನು ಮಾರಾಟವಾಗುವವನಲ್ಲ, ನಾನು ಗೂಳಿಹಟ್ಟಿ!

ಹೀಗೆಂದು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿಶೇಖರ್‌ ಸೋಮವಾರ ರಾತ್ರಿ ಹಾಕಿರುವ ವಾಟ್ಸಪ್‌ ಸ್ಟೇಟಸ್‌ ತೀವ್ರ ಕುತೂಹಲ ಮೂಡಿಸಿದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನಮ್ಮ ಶಾಸಕರಿಗೆ ಗಾಳ ಹಾಕುತ್ತಿದ್ದಾರೆಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು

ಬಿಜೆಪಿ ಶಾಸಕರನ್ನು ದೆಹಲಿಯ ರೆಸಾರ್ಟ್‌ಗೆ ಕರೆದೊಯ್ದ ಬೆನ್ನಲ್ಲೇ ಗೂಳಿಹಟ್ಟಿಶೇಖರ್‌ ತಮ್ಮ ಸ್ಟೇಟಸ್‌ ಅಪ್‌ಡೇಟ್‌ ಮಾಡಿರುವುದು ಯಾಕಾಗಿ? ಜೆಡಿಎಸ್‌ ಅಥವಾ ಕಾಂಗ್ರೆಸ್‌ನವರು ಅವರನ್ನು ಸಂಪರ್ಕಿಸಿದ್ದರೇ? ಆಮಿಷವೊಡ್ಡಿದ್ದರೇ ಎನ್ನುವ ಪ್ರಶ್ನೆ ಇದೀಗ ಮೂಡಿದೆ. ಆದರೆ, ಗೂಳಿಹಟ್ಟಿಮಾತ್ರ ಯಾರ ಸಂಪರ್ಕಕ್ಕೂ ಸಿಗದೆ ರೆಸಾರ್ಟ್‌ನಲ್ಲಿ ಕಾಲಕಳೆಯುತ್ತಿದ್ದಾರೆ.