ಮೋದಿಯೇ ಪ್ರಧಾನಿಯಾಗಲಿ ಎಂದು ಭಿಕ್ಷಾಟನೆ ಮಾಡಿದ ಶಾಸಕ ಸಿ. ಟಿ ರವಿ!

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಬೇಕೆಂದು‌ ಶಾಸಕ ಸಿ.ಟಿ.ರವಿ‌ ಅವರು ದತ್ತಾತ್ರೇಯ ಸ್ವಾಮಿಯ ಬಳಿ ಹರಕೆ ಕಟ್ಟಿಕೊಂಡಿದ್ದಾರೆ. ಇದಕ್ಕಾಗಿ ಮನೆ ಮನೆಗೆ ತೆರಳಿ ಬಿಕ್ಷಾಟನೆಯನ್ನೂ ನಡೆಸಿದ್ದಾರೆ.

CT Ravi begs for PM modi in chikmagalur during datta jayanti

ಚಿಕ್ಕಮಗಳೂರು[ಡಿ.21]: ನರೇಂದ್ರ ಮೋದಿಯೇ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕೆಂದು ದತ್ತಾತ್ರೇಯ ಸ್ವಾಮಿಯ ಬಳಿ ಶಾಸಕ ಸಿ. ಟಿ ರವಿ ಹರಕೆ ಕಟ್ಟಿಕೊಂಡಿದ್ದಾರೆ. ಇದಕ್ಕಾಗಿ ವರು ಭಿಕ್ಷಾಟನೆ ನಡೆಸಿದ್ದಾರೆ.

ದತ್ತಜಯಂತಿಯ ಅಂಗವಾಗಿ ಚಿಕ್ಕಮಗಳೂರಿನ ನಾರಾಯಣಪುರದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಶಾಸಕ ಸಿ. ಟಿ ರವಿ "ಮೋದಿ ಪ್ರಧಾನಿಯಾದ್ರೆ ಭಾರತದ ಭವಿಷ್ಯ ಗಟ್ಟಿಯಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 350ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು. ದೇಶಕ್ಕೆ ಸ್ವಾರ್ಥ ರಹಿತ ರಾಜಕಾರಣದ ಅವಶ್ಯವಿದೆ. ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಗೌರವ ಸಿಕ್ಕಿದೆ. ದೇಶದ ಪ್ರಗತಿಗೆ ಮೋದಿ ಪ್ರಧಾನಿಯಾಗಬೇಕೆಂದು ಹರಕೆ ಹೊತ್ತಿದ್ದೇನೆ" ಎಂದು ಭಿಕ್ಷಾಟನೆ (ಪಡಿ ಸಂಗ್ರಹ) ವೇಳೆ ಹೇಳಿದ್ದಾರೆ.

ಶಾಸಕ ಸಿ.ಟಿ.ರವಿ ಹಾಗೂ ದತ್ತ ಮಾಲಾಧಾರಿಗಳು ನಗರದ ನಾರಾಯಣಪುರದ ರಸ್ತೆಯಲ್ಲಿ ಮನೆ ಮನೆಗೆ ತೆರಳಿ ಪಡಿ ಸಂಗ್ರಹ ಮಾಡಿದ್ದಾರೆ. ಪಡಿ ಸಂಗ್ರಹಕ್ಕೆ ಆಗಮಿಸಿದ ದತ್ತಭಕ್ತರಿಗೆ ಅಕ್ಕಿ, ಬೆಲ್ಲ, ವೀಳ್ಯದೆಲೆಯನ್ನು ಜನರು ನೀಡಿದ್ದಾರೆ.

Latest Videos
Follow Us:
Download App:
  • android
  • ios