ಕರ್ನಾಟಕದಲ್ಲಿ ಹೇಗಿದೆ ಕ್ವಾರಂಟೈನ್ ನಿಯಮ? ಇಲ್ಲಿದೆ ಮಾರ್ಗಸೂಚಿ!
ಕೊರೋನಾ ತಡೆಯಲು ಸರ್ಕಾರದಿಂದ ಕ್ವಾರಂಟೈನ್| ಸ್ವದೇಶೀ ಹಾಗೂ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಹೀಗಿದೆ ಕ್ವಾರಂಟೈನ್ ನಿಯಮ| ಕ್ವಾರಂಟೈನ್ ಯಾರಿಗೆಲ್ಲಾ ಕಡ್ಡಾಯ? ಇಲ್ಲಿದೆ ವಿವರ
ಬೆಂಗಳೂರು(ಸೆ.12): ಹೆಲ್ತ್ ಸ್ಕ್ರೀನಿಂಗ್: ಎಲ್ಲಾ ಅಂತರಾಷ್ಟ್ರೀಯ ಕೊರೋನಾ ಸ್ಕ್ರೀನಿಂಗ್ ನಡೆಸಲಾಗುತ್ತದೆ. ಎಲ್ಲಾ ಪ್ರಯಾಣಿಕರಿಗೆ ಥರ್ಮಲ್ ಹಾಗೂ ಆಕ್ಸಿಮೀಟರ್ ಸ್ಕ್ರೀನಿಂಗ್ ನಡೆಸುಸುವುದು ಖಡ್ಡಾಯ.
ಕ್ವಾರಂಟೈನ್ ಯಾರ್ಯಾರಿಗೆ?
ಸ್ವದೇಶೀ ಪ್ರಯಾಣಿಕರಿಗೆ
* ಕೊರೋನಾ ಲಕ್ಷಣವಿಲ್ಲದ ಪ್ರಯಾಣಿಕರಿಗೆ ಕ್ವಾರಂಟೈನ್ ಅಗತ್ಯವಿಲ್ಲ.
* ಕೊರೋನಾ ಲಕ್ಷಣವಿರುವ ಪ್ರಯಾಣಿಕರು ಸ್ವಯಂ ಐಸೋಲೇಟ್ ಆಗಬೇಕು. ಕೂಡಲೇ ವೈದ್ಯರ ಸಲಹೆ ಅಥವಾ ಆಪ್ತಮಿತ್ರ ಸಹಾಯವಾಣಿ 14410ಗೆ ಕರೆ ಮಾಡಿ ಸಲಹೆ ಪಡೆದುಕೊಳ್ಳುವುದು.
ಅಂತರಾಷ್ಟ್ರೀಯ ಪ್ರಯಾಣಿಕರಿಗೆ:
* ಕೊರೋನಾ ಲಕ್ಷಣವಿರುವ ಪ್ರಯಾಣಿಕರನ್ನು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗುತ್ತದೆ.
* ಆರೋಗ್ಯಾಧಿಕಾರಿಗಳೇ ಕೊರೋನಾ ಲಕ್ಷಣವಿರುವ ಪ್ರಯಾಣಿಕರಿಗೆ ಕ್ವಾರಂಟೈನ್ ಮಾಡಬೇಕೋ, ಬೇಡವೋ ಎಂಬುವುದನ್ನು ನಿರ್ಧರಿಸುತ್ತಾರೆ.
* ಲಕ್ಷಣವಿಲ್ಲದ ಪ್ರಯಾಣಿಕರಿಗೆ 14 ದಿನ ಹೋಂ ಕ್ವಾರಂಟೈನ್ ಕಡ್ಡಾಯ.
* ಉದ್ಯೋಗ ನಿಮಿತ್ತ ಪ್ರಯಾಣಿಸಿ 48 ಗಂಟೆಯೊಳಗೆ ಮರಳಿ ಬರುವವರಿಗೆ ಕ್ವಾರಂಟೈನ್ ಇಲ್ಲ.
* ಒಂದು ವೇಳೆ ಉದ್ಯೋಗ ನಿಮಿತ್ತ ಪ್ರಯಾಣ ಕೈಗೊಂಡು 48 ಗಂಟೆ ಮೊದಲು ಮರಳಿ ಬಾರದಿದ್ದಲ್ಲ, ಆದರೆ ಏಳು ದಿನದೊಳಗೆ ಬರುವವರಿಗೆ ಕೊರೋನಾ ಟೆಸ್ಟ್ ಮಾಡಲಾಗುತ್ತದೆ. ಈ ವರದಿ ನೆಗೆಟಿವ್ ಬಂದರೆ ಅವರು ತಮ್ಮ ಮುಂದಿನ ಚಟುವಟಿಕೆ ಮಾಡಬಹುದು.
* ಉದ್ಯೋಗ ನಿಮಿತ್ತ ಭೇಟಿ ನೀಡುವವರು ಕೊರೋನಾ ನೆಗೆಟಿವ್ ವರದಿಯೊಂದಿಗೆ ಬಂದರೆ ಕ್ವಾರಂಟೈನ್ ಇಲ್ಲ. ಆದರೆ ಈ ಟೆಸ್ಟ್ ಭೇಟಿ ನೀಡುವ 96 ಗಂಟೆಯೊಳಗೆ ನಡೆದಿರಬೇಕು.
ಪ್ರಯಾಣಿಕರಿಗಿರುವ ನಿರ್ಬಂಧ:
* ಅಂತರಾಷ್ಟ್ರೀಯ ಪ್ರಯಾಣಿಕರು ಆರೋಗ್ಯ ಸೇತು, ಕ್ವಾರಂಟೈನ್ ವಾಚ್ ಹಾಗೂ ಆಪ್ತಮಿತ್ರ ಆಪ್ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಖಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕು( (https://covid19.karnataka.gov.in/new-page/softwares/en)
* ಅಂತರಾಷ್ಟ್ರೀಯ ಪ್ರಯಾಣಿಕರು ರಾಜ್ಯಕ್ಕ ಬಂದಿಳಿಯುವ ಕನಿಷ್ಟ 72 ಗಂಟೆ ಮೊದಲು ಯಾತ್ರಿ ಕರ್ನಾಟಕ ಆನ್‌ಲೈನ್ ಪೋರ್ಟಲ್‌ನಲ್ಲಿ ಸೆಲ್ಫ್ ಡಿಕ್ಲರೇಷನ್ ಫಾರಂ ಅಗತ್ಯವಾಗಿ ತುಂಬಬೇಕು( (https://www.covidwar.karnataka.gov.in/)