Asianet Suvarna News Asianet Suvarna News

ಮತ್ತೆ ರಾಜ್ಯದಲ್ಲಿ 5% ಗಡಿ ದಾಟಿದ ಪಾಸಿಟಿವಿಟಿ ದರ

  • ರಾಜ್ಯದಲ್ಲಿ ನಾಳೆಯಿಂದ ಅನ್‌ಲಾಕ್‌ಗೆ ತೀರ್ಮಾನ
  • ಕೊಂಚ ಏರಿಕೆಯಾದ ಕೋವಿಡ್ ಪಾಸಿಟಿವಿದಿ ದರ
  • ಕರ್ನಾಟಕದಲ್ಲಿ ಪತ್ತೆಯಾದ ಕೋವಿಡ್ ಕೇಸುಗಳ ಸಂಖ್ಯೆ ಏರಿಕೆ
Covid 19 Cases Slightly Hike in Karnataka Again snr
Author
Bengaluru, First Published Jun 13, 2021, 7:11 AM IST

ಬೆಂಗಳೂರು (ಜೂ.13):  ರಾಜ್ಯದಲ್ಲಿ ಶನಿವಾರ ಕೋವಿಡ್‌-19 ಪ್ರಕರಣಗಳ ಸಂಖ್ಯೆ ತುಸು ಹೆಚ್ಚಳವಾಗಿದೆ. 9,785 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 144 ಮಂದಿ ಮೃತರಾಗಿದ್ದಾರೆ. 21,614 ಮಂದಿ ಗುಣ ಮುಖರಾಗಿದ್ದಾರೆ. ಶುಕ್ರವಾರ 8,249 ಪ್ರಕರಣ ಬೆಳಕಿಗೆ ಬಂದು ಪಾಸಿಟಿವಿಟಿ ದರ ಶೇ.4.86ಕ್ಕೆ ಕುಸಿದಿತ್ತು. ಆದರೆ ಶನಿವಾರ ಪಾಸಿಟಿವಿಟಿ ದರ ಶೇ.6.61ಕ್ಕೆ ಏರಿಕೆ ಆಗಿದೆ.

ಬೆಂಗಳೂರು ನಗರದಲ್ಲಿ 2454 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಕಳೆದ ಏಪ್ರಿಲ್‌ 25ರ ಬಳಿಕ (143 ಸಾವು) ಶನಿವಾರ 144 ಜನರು ಸಾವಿಗೀಡಾಗಿದ್ದು, ಮರಣ ದರ ಶೇ. 1.47ಕ್ಕೆ ಇಳಿದಿದೆ.

1.58 ಲಕ್ಷ ಮಂದಿಗೆ ಲಸಿಕೆ: ರಾಜ್ಯದಲ್ಲಿ ಶನಿವಾರ 1.58 ಲಕ್ಷ ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. ಈ ಪೈಕಿ ಯಾರಲ್ಲಿಯೂ ಅಡ್ಡ ಪರಿಣಾಮ ಕಾಣಿಸಿಕೊಂಡಿಲ್ಲ. ಈವರೆಗೆ ಒಟ್ಟು 1.67 ಕೋಟಿ ಡೋಸ್‌ ಲಸಿಕೆ ವಿತರಣೆಯಾಗಿದ್ದು 29.94 ಲಕ್ಷ ಮಂದಿ ಎರಡೂ ಡೋಸ್‌ ಪಡೆದಿದ್ದಾರೆ.

ಕರ್ನಾಟಕದಲ್ಲಿ ಇಳಿಕೆಯತ್ತ ಕೊರೋನಾ, ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚು ...

ಉಳಿದಂತೆ ಶಿವಮೊಗ್ಗ 715, ಹಾಸನ 624 ಮತ್ತು ದಕ್ಷಿಣ ಕನ್ನಡದಲ್ಲಿ 614 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಯಾದಗಿರಿ 9, ಬೀದರ್‌ 30, ರಾಮನಗರ 32, ರಾಯಚೂರು 59, ಕಲಬುರಗಿ ಹಾಗೂ ಗದಗ ತಲಾ 60, ಹಾವೇರಿ 65 ಮತ್ತು ಬಾಗಲಕೋಟೆಯಲ್ಲಿ 70 ಜನರಲ್ಲಿ ಸೋಂಕು ಕಂಡು ಬಂದಿದೆ.

ಬೆಂಗಳೂರು ನಗರದಲ್ಲಿ 21 ಮಂದಿ, ಮೈಸೂರು 20, ಧಾರವಾಡ ಮತ್ತು ಬೆಳಗಾವಿಯಲ್ಲಿ ತಲಾ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬಾಗಲಕೋಟೆ, ಬೀದರ್‌, ಚಾಮರಾಜನಗರ, ರಾಯಚೂರು, ರಾಮನಗರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಕೋವಿಡ್‌ ಸಾವು ವರದಿಯಾಗಿಲ್ಲ.

ಇದೇ ವೇಳೆ ಕೋವಿಡ್‌ನಿಂದ ಹೆಚ್ಚೆಚ್ಚು ಮಂದಿ ಗುಣಮುಖರಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1.91 ಲಕ್ಷಕ್ಕೆ ಕುಸಿದಿದೆ. ಏಪ್ರಿಲ್‌ 24ಕ್ಕೆ 2 ಲಕ್ಷದ ಗಡಿ ದಾಟಿದ್ದ ಸಕ್ರಿಯ ಪ್ರಕರಣ ಬಳಿಕ 6 ಲಕ್ಷ ಮೀರಿತ್ತು. ಮೇ 18ರ ಬಳಿಕ ನಿರಂತರವಾಗಿ ಗುಣಮುಖರಾಗುತ್ತಿರುವರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತೆ 2 ಲಕ್ಷದ ಸೀಮೆಯೊಳಗೆ ಬಂದಿದೆ.

ರಾಜ್ಯದಲ್ಲಿ ಈವರೆಗೆ 27.57 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 25.32 ಲಕ್ಷ ಮಂದಿ ಗುಣಮುಖರಾಗಿದ್ದಾರೆ. 32,788 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು 3.15 ಕೋಟಿ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ.

ಶನಿವಾರ 1.43 ಲಕ್ಷ ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. 18-44 ವರ್ಷದೊಳಗಿನ 87,239 ಮಂದಿ, 45 ವರ್ಷ ಮೇಲ್ಪಟ್ಟ52,139 ಮಂದಿ, ಮುಂಚೂಣಿ ಕಾರ್ಯಕರ್ತರು 3,663 ಮಂದಿ, ಆರೋಗ್ಯ ಕಾರ್ಯಕರ್ತರು 719 ಮಂದಿ ಮೊದಲ ಡೋಸ್‌ ಪಡೆದಿದ್ದಾರೆ.

ಎರಡನೇ ಡೋಸ್‌ ಅನ್ನು 45 ವರ್ಷ ಮೇಲ್ಪಟ್ಟ12,542 ಮಂದಿ, ಮುಂಚೂಣಿ ಕಾರ್ಯಕರ್ತರು 3,663 ಮಂದಿ, 18- 44 ವರ್ಷದೊಳಗಿನ 1,084 ಮಂದಿ, ಆರೋಗ್ಯ ಕಾರ್ಯಕರ್ತರು 561 ಮಂದಿ ಪಡೆದಿದ್ದಾರೆ.

Follow Us:
Download App:
  • android
  • ios