Asianet Suvarna News Asianet Suvarna News

ರಾಜ್ಯದಲ್ಲಿ ಹೊರರಾಜ್ಯದವರೇ ಕೊರೋನಾ ‘ಸ್ಪ್ರೆಡರ್ಸ್'

ರಾಜ್ಯದ 287 ಸೋಂಕಿತರಿಂದ 1551 ಮಂದಿಗೆ ಮಾತ್ರ ಸೋಂಕು | 5743 ಸೋಂಕಿತರು ಅನ್ಯ ರಾಜ್ಯ, ವಿದೇಶ ಪ್ರವಾಸ ಹಿನ್ನೆಲೆಯವರು | 5 ಸಾವಿರ ಗಡಿಯತ್ತ ‘ಮಹಾ’ಸೋಂಕು | 351 ಜನಕ್ಕೆ ಅಂತಾರಾಷ್ಟ್ರೀಯ ಪ್ರಯಾಣ ಹಿನ್ನೆಲೆ | ಸಮರ್ಥವಾಗಿ ನಿಭಾಯಿಸದಿದ್ದರೆ ಕಷ್ಟ: ತಜ್ಞರು

Covid 19 cases cross 8 k in state out of state people spreaders
Author
Bengaluru, First Published Jun 21, 2020, 11:55 AM IST

ಬೆಂಗಳೂರು (ಜೂ. 21): ರಾಜ್ಯದಲ್ಲಿ ಕೊರೋನಾ ಸೋಂಕು ಬರೋಬ್ಬರಿ 8 ಸಾವಿರ ಗಡಿ ದಾಟಿ (8,281) ಆತಂಕ ಸೃಷ್ಟಿಸಿದೆ. ಆದರೆ, ಸೋಂಕಿತರಿಂದ ಈ ರೋಗ ಬೇರೆಯವರಿಗೆ ಹೆಚ್ಚು ಹಬ್ಬಿಲ್ಲ. ಬದಲಾಗಿ ಹೊರ ರಾಜ್ಯದಿಂದ ಸೋಂಕು ತಗುಲಿಸಿಕೊಂಡು ಬಂದವರೇ ಹೆಚ್ಚಿದ್ದಾರೆ.

ರಾಜ್ಯದ ಒಟ್ಟು ಸೋಂಕಿತರ ಪೈಕಿ 287 ಮಂದಿ ಮಾತ್ರ ಬೇರೆಯವರಿಗೆ ಸೋಂಕು ತಗುಲಿಸಿದ್ದಾರೆ. ಈ 287 ಮಂದಿ ಒಟ್ಟು 1551 ಮಂದಿಗೆ ಸೋಂಕು ತಗುಲಿಸಿದ್ದಾರೆ. ಇಷ್ಟಾದರೂ ರಾಜ್ಯದಲ್ಲಿ ಸೋಂಕಿನ ಪ್ರಮಾಣ 8 ಸಾವಿರ ದಾಟಲು ಕಾರಣ ಹೊರ ರಾಜ್ಯ, ದೇಶಗಳಿಂದ ಸೋಂಕು ತಗುಲಿಸಿಕೊಂಡು ಬಂದವರು. ಹೀಗೆ ಹೊರ ರಾಜ್ಯ ಹಾಗೂ ದೇಶದಿಂದ ಬಂದವರ ಸಂಖ್ಯೆ 5743 ಇದ್ದು, ಇಷ್ಟುಮಂದಿಯನ್ನು ಸಮರ್ಥವಾಗಿ ನಿಭಾಯಿಸಿದರೆ ರಾಜ್ಯ ಕೊರೋನಾ ಯುದ್ಧದಲ್ಲಿ ಅರ್ಧ ಸಫಲವಾದಂತೆ. ಇಲ್ಲದಿದ್ದರೆ ಸಮುದಾಯಕ್ಕೆ ಹಬ್ಬುವ ದುರಂತಕ್ಕೆ ನಾಂದಿಯಾಗುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ.

ರಾಜ್ಯದಲ್ಲಿ ಶುಕ್ರವಾರದವರೆಗೆ ವರದಿಯಾಗಿದ್ದ 8,281 ಪ್ರಕರಣಗಳ ಪೈಕಿ ಶೇ.3.46 (ಅರ್ಥಾತ್‌ 287)ಮಂದಿ ಮಾತ್ರ ಬೇರೆಯವರಿಗೆ ಸೋಂಕು ಹರಡಿದ್ದಾರೆ. ಇವರಿಂದ ಕೇವಲ 1,551 (ಶೇ.18.72) ಮಂದಿಗೆ ಸೋಂಕು ಹರಡಿದೆ. ಈ 287 ಸೆ್ೊ್ರಡರ್‌ಗಳಲ್ಲಿ (ಸೋಂಕು ಹರಡುವವರು) ಪ್ರತಿಯೊಬ್ಬರು ಸರಾಸರಿ 5.4 ಮಂದಿಗೆ ರಾಜ್ಯದಲ್ಲಿ ಸೋಂಕು ಹರಡಿದ್ದಾರೆ. ಉಳಿದ 7,994 ಸೋಂಕಿತರು ಈವರೆಗೆ ಯಾರಿಗೂ ಸೋಂಕು ಹರಡಿಲ್ಲ ಎಂದು ಆರೋಗ್ಯ ಇಲಾಖೆ ನಡೆಸಿದ ಸೋಂಕಿನ ಮೂಲದ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಕೊರೋನಾ ಮಾಹಿತಿ ಹಂಚಿಕೆ: ಕರ್ನಾಟಕ ಬೆಸ್ಟ್‌, ತಾಲೂಕು ಮಟ್ಟದ ಮಾಹಿತಿಯೂ ಲಭ್ಯ!

ಸಂಪರ್ಕಿತರಿಂದ ಹರಡಿದ 1,551 ಸೋಂಕು ಹೊರತುಪಡಿಸಿದರೆ 5,392 ಮಂದಿಗೆ ಅಂತಾರಾಜ್ಯ, 351 ಮಂದಿಗೆ ವಿದೇಶ ಸಂಪರ್ಕದಿಂದ ಸೋಂಕು ಹರಡಿದೆ. ಉಳಿದಂತೆ ಐಎಲ್‌ಐ (ವಿಷಮಶೀತ ಜ್ವರ) ಹಿನ್ನೆಲೆಯ 241, ಸಾರಿ (ಉಸಿರಾಟ ತೊಂದರೆ) ಹಿನ್ನೆಲೆಯ 130 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ 375 ಮಂದಿಯ ಸೋಂಕಿನ ಮೂಲ ಪತ್ತೆಯಾಗಿಲ್ಲ. ಇಷ್ಟೆಲ್ಲಾ ಸೇರಿ 8,281 ಸೋಂಕಿತರಲ್ಲಿ ಕೇವಲ 287 ಮಂದಿಯಿಂದ ಮಾತ್ರ ಬೇರೊಬ್ಬರಿಗೆ ಸೋಂಕು ಹರಡಿದೆ.

ಹೀಗಾಗಿ, ಅನ್ಯರಾಜ್ಯ, ದೇಶದಿಂದ ಆಗಮಿಸಿದ 5,743 ಮಂದಿಯ ಸಂಪರ್ಕಿತರನ್ನು ಸಮರ್ಥವಾಗಿ ನಿಭಾಯಿಸಿದರೆ ಮಾತ್ರ ಸೋಂಕು ನಿಯಂತ್ರಣ ಮಾಡಬಹುದು. ಇಲ್ಲದಿದ್ದರೆ ತ್ವರಿತಗತಿಯಲ್ಲಿ ಸಮುದಾಯಕ್ಕೆ ಹರಡಿ ಅಪಾಯ ಸೃಷ್ಟಿಯಾಗಲಿದೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಲ್ಲಿ ಹೆಚ್ಚು:

ಅತಿ ಹೆಚ್ಚು ಸೋಂಕು ವರದಿಯಾಗಿರುವ ಪ್ರಥಮ 4 ಜಿಲ್ಲೆಗಳ ಪೈಕಿ ಬೆಂಗಳೂರಿನಲ್ಲಿ ಮಾತ್ರವೇ ಸ್ಥಳೀಯವಾಗಿ ಹೆಚ್ಚು ಮಂದಿಗೆ ಸೋಂಕು ಹರಡಿದೆ. ಕಳೆದ ಗುರುವಾರದವರೆಗೆ ವರದಿಯಾಗಿದ್ದ 844 ಪ್ರಕರಣಗಳಲ್ಲಿ 79 ಮಂದಿ ಯೂನಿಕ್‌ ಸ್ಪ್ರೆಡರ್‌ಗಳಿಂದ 4.4 ಸರಾಸರಿಯಂತೆ ಬರೋಬ್ಬರಿ 336 ಮಂದಿಗೆ ಸೋಂಕು ತಗುಲಿದೆ. ಉಳಿದಂತೆ ಅತಿ ಹೆಚ್ಚು ಸೋಂಕು ದಾಖಲಾಗಿರುವ ಉಡುಪಿ, ಯಾದಗಿರಿಯಲ್ಲಿ ಸ್ಥಳೀಯವಾಗಿ ಸೋಂಕು ಹರಡಿಲ್ಲ. ಹೀಗಾಗಿ ಉದ್ಯಾನನಗರಿಯಲ್ಲಿ ಸೋಂಕು ನಿಯಂತ್ರಣ ಕ್ರಮ ಮತ್ತಷ್ಟುಕಠಿಣಗೊಳಿಸಬೇಕು ಎಂದು ಹೇಳಿದ್ದಾರೆ.

ಬೆಳಗಾವಿ: SSLC ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗೂ ಕೊರೋನಾ ಸೋಂಕು!

5 ಸಾವಿರ ಗಡಿಯತ್ತ ಮಹಾರಾಷ್ಟ್ರ ಸೋಂಕು:

ಉಳಿದಂತೆ ಅನ್ಯ ರಾಜ್ಯದಿಂದ ಆಗಮಿಸಿದ ಬರೋಬ್ಬರಿ 5,392 ಮಂದಿಗೆ ರಾಜ್ಯದಲ್ಲಿ ಸೋಂಕು ಹರಡಿದ್ದು, ಈ ಪೈಕಿ ಗುರುವಾರದವರೆಗೆ 4,624 ಮಂದಿಗೆ ಮಹಾರಾಷ್ಟ್ರದಿಂದ ಆಗಮಿಸಿದವರಲ್ಲೇ ಸೋಂಕು ಹರಡಿದೆ. ಈ ಮೂಲಕ ರಾಜ್ಯವನ್ನು ‘ಮಹಾ’ ಸೋಂಕು ಇನ್ನಿಲ್ಲದಂತೆ ಕಾಡುತ್ತಿದೆ.

ಉಡುಪಿ: ಸ್ಥಳೀಯವಾಗಿ ಸೋಂಕು ಹರಡಿಲ್ಲ

ಉಡುಪಿಯ 1,039 ಪ್ರಕರಣಗಳಲ್ಲಿ 4 ಮಂದಿಗೆ ಮಾತ್ರ ಸ್ಥಳೀಯವಾಗಿ ಸೋಂಕು ಹರಡಿದೆ. ಇದರಲ್ಲಿ ಇಬ್ಬರು ಮಾತ್ರ ಬೇರೆಯವರಿಗೆ ಸೋಂಕು ಹರಡಿದ್ದಾರೆ. ವಿಚಿತ್ರವೆಂದರೆ, 746 ಪ್ರಕರಣಗಳಲ್ಲಿ ಎಲ್ಲವೂ (ಶೇ.100) ಬೇರೆ ರಾಜ್ಯದಿಂದ ಬಂದವರಲ್ಲೇ ವರದಿಯಾಗಿದೆ.

ಕಲಬುರಗಿಯ 1,074 ಪ್ರಕರಣಗಳ ಪೈಕಿ 26 ಮಂದಿ ಯುನಿಕ್‌ ಸೆ್ೊ್ರಡರ್‌ಗಳಿಂದ ತಲಾ 3.3 ರಂತೆ 86 ಮಂದಿಗೆ ಸೋಂಕು ಹರಡಿದೆ. ಈ ಮೂಲಕ ಒಟ್ಟು ಸೋಂಕಿನ ಶೇ.8 ರಷ್ಟುಮಂದಿಗೆ ಮಾತ್ರ ಸಂಪರ್ಕಿತರಿಂದ ಸೋಂಕು ಹರಡಿದೆ. ಉಳಿದೆಲ್ಲವರೂ ಅಂತರ್‌ರಾಜ್ಯ, ವಿದೇಶ, ಐಎಲ್‌ಐ ಲಕ್ಷಣದವರಿಂದ ವರದಿಯಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಹೊಸ 14 ಕೊರೋನಾ ಪಾಸಿಟಿವ್‌ ಕೇಸ್‌

ರೋಗ ಲಕ್ಷಣಗಿಳಿಲ್ಲದವರಿಂದ ಸೋಂಕು ಹರಡುತ್ತಿಲ್ಲ?

ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಶೇ.84.77 ರಷ್ಟುಸೋಂಕಿತರಿಗೆ ರೋಗ ಲಕ್ಷಣಗಳಿಲ್ಲ. ಜತೆಗೆ ಸಕ್ರಿಯವಾಗಿರುವ 2,940 ಪ್ರಕರಣಗಳಲ್ಲಿ ಶೇ.97 ಮಂದಿಗೆ ಸೋಂಕು ಲಕ್ಷಣಗಳ ಇಲ್ಲ. 7,944 ಮಂದಿಯಲ್ಲಿ ಈವರೆಗೆ ಕೇವಲ 276 ಮಂದಿಯಿಂದ ಮಾತ್ರ ಸೋಂಕು ಹರಡಿದ್ದು, ಇದರಿಂದ ವಿಶ್ವ ಆರೋಗ್ಯ ಸಂಸ್ಥೆ ಹೇಳಿದಂತೆ ರಾಜ್ಯದಲ್ಲೂ ರೋಗ ಲಕ್ಷಣ ಇಲ್ಲದಿರುವುದರಿಂದ ಬಹುತೇಕ ಸೋಂಕು ವರದಿಯಾಗುತ್ತಿಲ್ಲ ಎಂದು ತಿಳಿದುಬಂದಿದೆ.

- ಶ್ರೀಕಾಂತ್‌ ಎನ್‌. ಗೌಡಸಂದ್ರ

Follow Us:
Download App:
  • android
  • ios