ಬೆಂಗಳೂರು (ಸೆ.22): ರಾಜ್ಯದಲ್ಲಿ ಸೋಮವಾರ 7,339 ಮಂದಿಗೆ ಸೋಂಕು ದೃಢಪಟ್ಟಿದ್ದು 122 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5.26 ಲಕ್ಷಕ್ಕೆ ಹಾಗೂ ಕೊರೋನಾ ಸಾವಿನ ಸಂಖ್ಯೆ 8,145ಕ್ಕೆ ಏರಿಕೆಯಾಗಿದೆ. ಆದರೆ ಸಕ್ರಿಯ ಸೋಂಕಿ​ತರ ಸಂಖ್ಯೆ 98 ಸಾವಿ​ರ​ದಿಂದ 95,335ಕ್ಕೆ ಇಳಿ​ದಿ​ದೆ.

ಇದೇ ವೇಳೆ 9,925 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 4.23 ಲಕ್ಷಕ್ಕೆ ಏರಿಕೆಯಾಗಿದೆ. ಸೋಮವಾರ ಒಟ್ಟು 42,691 ಪರೀಕ್ಷೆ ನಡೆಸಿದ್ದು, ಈ ಪೈಕಿ 7,339 ಮಂದಿಗೆ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 5.26 ಲಕ್ಷಕ್ಕೆ ಏರಿಕೆಯಾಗಿದೆ. ಈವರೆಗೆ ಈ ಪೈಕಿ 4.23 ಲಕ್ಷ ಮಂದಿ ಗುಣಮುಖರಾಗಿದ್ದಾರೆ.

ಕರ್ನಾಟಕದಲ್ಲಿ ಕೊಂಚ ತಗ್ಗಿದ ಕೊರೋನಾ: ಸೋಮವಾರ ಗುಣಮುಖರಾದವರ ಸಂಖ್ಯೆಯೇ ಹೆಚ್ಚು..! ..

ಸದ್ಯ ರಾಜ್ಯದಲ್ಲಿ 95,335 ಸಕ್ರಿಯ ಪ್ರಕರಣಗಳಲ್ಲಿ ಸೋಂಕಿತರು ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಆಸ್ಪತ್ರೆಯಲ್ಲಿರುವವರ ಪೈಕಿ 809 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಪರೀಕ್ಷೆ ಕುಸಿ​ತ: ಸೋಂಕು ಪರೀಕ್ಷೆ ಪ್ರಮಾಣ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಸರಾಸರಿ 60 ರಿಂದ 70 ಸಾವಿರ ಪರೀಕ್ಷೆ ನಡೆಸುತ್ತಿದ್ದ ಆರೋಗ್ಯ ಇಲಾಖೆ ಸೋಮವಾರ 42 ಸಾವಿರ ಮಂದಿಗೆ ಮಾತ್ರ ಪರೀಕ್ಷೆ ನಡೆಸಿದೆ. ಹೀಗಾಗಿಯೇ ಸೋಂಕು ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ.

122 ಮಂದಿ ಸಾವು: ಬೆಂಗಳೂರಿನಲ್ಲಿ 32 ಮಂದಿ ಸೇರಿದಂತೆ ಒಟ್ಟು 122 ಮಂದಿ ಸೋಮವಾರ ಮೃತಪಟ್ಟಿದ್ದಾರೆ. ಮೈಸೂರು 15, ಶಿವಮೊಗ್ಗ 7, ಹಾಸನ, ಉಡುಪಿ, ಗದಗ, ಚಾಮರಾಜನಗರ ತಲಾ 4, ದಕ್ಷಿಣ ಕನ್ನಡ 8, ಬಳ್ಳಾರಿ 9, ಕೊಪ್ಪಳ, ಕಲಬುರಗಿ, ಬೆಂಗಳೂರು ಗ್ರಾಮಾಂತರ ತಲಾ 1, ಧಾರವಾಡ 7, ಬಾಗಲಕೋಟೆ, ಚಿಕ್ಕಬಳ್ಳಾಪುರ, ರಾಯಚೂರು, ವಿಜಯಪುರ ತಲಾ 2, ಹಾವೇರಿ, ಚಿಕ್ಕಮಗಳೂರು, ದಾವಣಗೆರೆ, ಬೆಳಗಾವಿ, ತುಮಕೂರು ತಲಾ ಮೂರು ಮಂದಿ ಮೃತಪಟ್ಟಿದ್ದಾರೆ.

ಉಳಿದಂತೆ ಸೋಮವಾರದ ಒಟ್ಟು ಸೋಂಕಿನ ಪೈಕಿ ಬೆಂಗಳೂರು 2886, ಮೈಸೂರು 524, ಶಿವಮೊಗ್ಗ 348, ಚಿತ್ರದುರ್ಗ 326, ತುಮಕೂರು 300, ಹಾಸನ 268, ದಕ್ಷಿಣ ಕನ್ನಡ 233, ಉಡುಪಿ 231, ಬಳ್ಳಾರಿ 196, ಉತ್ತರ ಕನ್ನಡ 184, ಬೆಳಗಾವಿ 171, ದಾವಣಗೆರೆ 162, ಕೊಪ್ಪಳ 155, ಕಲಬುರಗಿ 151, ಧಾರವಾಡ 130, ಬಾಗಲಕೋಟೆ 123 , ಬೆಂಗಳೂರು ಗ್ರಾಮಾಂತರ 114, ಚಿಕ್ಕಬಳ್ಳಾಪುರ 110, ಹಾವೇರಿ 103, ಮಂಡ್ಯ 102, ವಿಜಯಪುರ 102, ಗದಗ 81, ಚಿಕ್ಕಮಗಳೂರು 68, ರಾಯಚೂರು 60, ಚಾಮರಾಜನಗರ 57, ಕೋಲಾರ 53, ಯಾದಗಿರಿ 44, ರಾಮನಗರ 27, ಬೀದರ್‌ 17, ಕೊಡಗು ಜಿಲ್ಲೆಯಲ್ಲಿ 13 ಪ್ರಕರಣ ವರದಿಯಾಗಿದೆ.