ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಹಿಂದಿನ ಬಿಜೆಪಿ ಸರ್ಕಾರದ ವಿರುದ್ದ 40 ಪರ್ಸೆಂಟ್ ಆರೋಪ ಮಾಡಿತ್ತು. ಇದೀಗ ಸರ್ಕಾರ ಈ ಆರೋಪದ ಕುರಿತು ತನಿಖೆ ಪೂರ್ಣಗೊಳಿಸಿಲ್ಲ. ಇದರ ಬೆನ್ನಲ್ಲೋ ಕೋರ್ಟ್ ಸಿದ್ದರಾಮಯ್ಯ, ರಾಹುಲ್ ಗಾಂಧಿ ಹಾಗೂ ಡಿಕೆ ಶಿವಕುಮಾರ್‌ಗೆ ಸಮನ್ಸ್ ನೀಡಿದೆ. 

ಬೆಂಗಳೂರು(ಫೆ.23) ಕರ್ನಾಟಕ ವಿಧಾನಸಭಾ ಚುನಾವಣೆ 2023ರ ವೇಳೆ ಬಿಜೆಪಿ ವಿರುದ್ಧ ಕಾಂಗ್ರೆಸ್ 40 ಪರ್ಸೆಂಟ್ ಸರ್ಕಾರ ಎಂದು ಗಂಭೀರ ಆರೋಪ ಮಾಡಿತ್ತು. ಪೇಸಿಎಂ ಸೇರಿದಂತೆ ಹಲವು ಅಭಿಯಾನ ನಡೆಸಿತ್ತು. ಕಾಂಗ್ರೆಸ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಆರೋಪವನ್ನು ಮಾಡಿತ್ತು. ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬಂದ ಕೆಲ ಆರೋಪಗಳನ್ನು ಆಧಾರವಾಗಿಟ್ಟುಕೊಂಡು ಕಾಂಗ್ರೆಸ್ ಈ ಗಂಭೀರ ಆರೋಪ ಮಾಡಿತ್ತು. ಇದೀಗ ಈ ಪ್ರಕರಣ ಸಂಬಂಧ ಕೋರ್ಟ್ ಶಾಸಕರು ಸಂಸದರ ಕೋರ್ಟ್ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಮನ್ಸ್ ನೀಡಿದೆ.

2023ರ ವಿಧಾನಸಭಾ ಚುನಾವಣೆ ವೇಳೆ ಅಂದಿನ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಗಂಬೀರ ಆರೋಪ ಮಾಡಿತ್ತು. 40 ಪರ್ಸೆಂಟ್ ಸರ್ಕಾರ, ಪೇಸಿಎಂ ಎಂಬ ಅಭಿಯಾನ ಆರಂಭಿಸಿ ಭಾರಿ ಜನಾಂದೋಲನವಾಗಿ ಪರಿವರ್ತಿಸಿತ್ತು. ಕ್ಯೂಆರ್ ಕೋಡ್ ಕ್ಯಾಂಪೇನ್ ಕರ್ನಾಟಕದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು.

ಕಾಂಗ್ರೆಸ್‌ ಸರ್ಕಾರದಲ್ಲೂ 40% ಕಮಿಷನ್: ಕೆಂಪಣ್ಣ ಗಂಭೀರ ಆರೋಪ

ಬೊಮ್ಮಾಯಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡಿದ್ದ ಗಂಭೀರ ಆರೋಪದ ವಿರುದ್ಧ ಬಿಜೆಪಿ ವಕೀಲ ವಿನೋದ್ ಕುಮಾರ್ ದೂರು ದಾಖಲಿಸಿದ್ದಾರೆ. ಈ ಕುರಿತು ಕಾಂಗ್ರೆಸ್ ಸುಳ್ಳು ಜಾಹೀರಾತು ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಜಾಹೀರಾತು ಮೂಲಕ ಬಿಜೆಪಿ ಸರ್ಕಾರದ ವಿರುದ್ದ ಸುಳ್ಳು ಆರೋಪ ಮಾಡಿದ್ದಾರೆ. ಚುನಾವಣೆ ಸಮಯದಲ್ಲಿ ಬಿಜೆಪಿ ಕುರಿತು ಜನರಲ್ಲಿ ತಪ್ಪು ಕಲ್ಪನೆ ಮೂಡಿಸಲು ಜಾಹೀರಾತು ನೀಡಲಾಗಿದೆ. ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಕುರಿತು ಜಸ್ಟೀಸ್ ಜೆ ಪ್ರೀತ್ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರು. ಐಪಿಎಸ್ ಸೆಕ್ಷನ್ 499 ಹಾಗೂ 500 ಅಡಿಯಲ್ಲಿ ಕರ್ನಾಟಕ ಕಾಂಗ್ರೆಸ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಈ ಸುಳ್ಳು ಆರೋಪಗಳಿಗೆ ನೇರ ಕಾರಣರಾಗಿದ್ದಾರೆ. ಇದರ ಜೊತೆಗೆ ಜಾಹೀರಾತಿನಲ್ಲಿ ರಾಹುಲ್ ಗಾಂಧಿ ಫೋಟೋವನ್ನು ಬಳಸಿಕೊಳ್ಳಾಗಿದೆ. ಹೀಗಾಗಿ ರಾಹುಲ್ ಗಾಂಧಿ ಕೂಡ ಬಿಜೆಪಿ ವಿರುದ್ಧ ಸುಳ್ಳು ಹರಡಿ ಮತ ಪಡೆಯುವ ಷಡ್ಯಂತ್ರದಲ್ಲಿ ಪಾಲುದಾರರಾಗಿದ್ದಾರೆ ಎಂದು ಬಿಜೆಪಿ ವಕೀಲ ವಿನೋದ್ ಕುಮಾರ್ ಆರೋಪಿಸಿದ್ದರು. ಶಾಸಕರು ಸಂಸದರ ಕೋರ್ಟ್‌ನಲ್ಲಿ ದಾವೇ ಹೂಡಿದ್ದರು. ಈ ಪ್ರಕರಣ ಸಂಬಂಧ ಕೋರ್ಟ್‌ಗೆ ಹಾಜರಾಗುವಂತೆ ಮೂವರು ಕಾಂಗ್ರೆಸ್ ನಾಯಕರಿಗೆ ಕೋರ್ಟ್ ಸಮನ್ಸ್ ನೀಡಿದೆ. 

ಕಾಂಗ್ರೆಸ್ ಸರ್ಕಾರದಲ್ಲೂ ಶೇ.40 ಕಮಿಷನ್ ಕಂಟಿನ್ಯೂ ಆಗಿದೆ; ಆಗ ಶಾಸಕರು ಕೇಳ್ತಿದ್ರು, ಈಗ ಅಧಿಕಾರಿಗಳೇ ಕೇಳ್ತಾರೆ!

ಇತ್ತ ಕರ್ನಾಟಕ ಹೈಕೋರ್ಟ್ ಇದೇ ಪ್ರಕರಣ ಸಂಬಂಧ ಈಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಹತ್ವ ಸೂಚನೆ ನೀಡಿದೆ.ಮುಂದಿನ 6 ವಾರಗಳಲ್ಲಿ ಈ ಆರೋಪ ಕುರಿತು ತನಿಖೆ ಪೂರ್ಣಗೊಳಿಸುವಂತೆ ಸೂಚಿಸಿದೆ.