BBMP: ಬಾಕಿ ಪಾವತಿಗಾಗಿ ಮತ್ತೆ ಬೀದಿಗೆ ಇಳಿದ ಪಾಲಿಕೆ ಗುತ್ತಿಗೆದಾರರು
ಕಳೆದ ಮೂರು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಕಾಮಗಾರಿಗಳ ಬಾಕಿ ಬಿಲ್ ಕೂಡಲೇ ಪಾವತಿಗೆ ಆಗ್ರಹಿಸಿ ಬಿಬಿಎಂಪಿ ಗುತ್ತಿಗೆದಾರರ ಒಕ್ಕೂಟದಿಂದ ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬೆಂಗಳೂರು (ಫೆ.15) : ಕಳೆದ ಮೂರು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಕಾಮಗಾರಿಗಳ ಬಾಕಿ ಬಿಲ್ ಕೂಡಲೇ ಪಾವತಿಗೆ ಆಗ್ರಹಿಸಿ ಬಿಬಿಎಂಪಿ ಗುತ್ತಿಗೆದಾರರ ಒಕ್ಕೂಟದಿಂದ ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪಾಲಿಕೆ ಕಾಮಗಾರಿ ವಿಭಾಗದಿಂದ ಕೆಆರ್‌ಐಡಿಎಲ್(KRIDL) ಸಂಸ್ಥೆಗೆ ಕೋಟ್ಯಂತರ ರುಪಾಯಿ ಮೊತ್ತದ ಕಾಮಗಾರಿಗಳನ್ನು ನೀಡಲಾಗಿತ್ತು. ಕೆಆರ್‌ಐಡಿಎಲ್ ಸಂಸ್ಥೆಯಿಂದ ಗುತ್ತಿಗೆ ಪಡೆದು .200 ಕೋಟಿಗೂ ಹೆಚ್ಚಿನ ಮೊತ್ತದ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಕಾಮಗಾರಿ ಮುಗಿದು ಮೂರು ವರ್ಷ ಕಳೆದರೂ ಬಿಬಿಎಂಪಿ(BBMP) 120ಕ್ಕೂ ಹೆಚ್ಚಿನ ಗುತ್ತಿಗೆದಾರರಿಗೆ ಬಿಲ್ ಪಾವತಿಸದೆ ಸತಾಯಿಸುತ್ತಿದೆ. ಕೂಡಲೇ ಬಾಕಿ ಬಿಲ್ ಪಾವತಿಸದಿದ್ದಲ್ಲಿ ಆತ್ಮಹತ್ಯೆ ಅನಿವಾರ್ಯವಾಗುತ್ತದೆ. ಇದಕ್ಕಾಗಿ ದಯಾಮರಣಕ್ಕೆ ಅನುಮತಿ ಕೋರಿ ರಾಷ್ಟ್ರಪತಿಗೆ ಪತ್ರ ಬರೆಯುವುದಾಗಿ ಎಚ್ಚರಿಸಿದರು.
Bengaluru: ಇಂದು ಬಿಸಿಯೂಟ ನೌಕರರಿಂದ ವಿಧಾನಸೌಧ ಮುತ್ತಿಗೆ
ನಿಯಮಾನುಸಾರ ಕಾಮಗಾರಿಗಳ ಗುಣಮಟ್ಟಪರೀಕ್ಷೆ ನಡೆದಿದ್ದು, ಆನ್‌ಲೈನ್ ಮುಖಾಂತರ ಬಿಲ್‌ಗಳನ್ನು ಸಲ್ಲಿಸಲಾಗಿದೆ. ಕಡತಗಳು ಹಾಗೂ ಕಾಮಗಾರಿಗಳ ಸ್ಥಳ ಪರಿಶೀಲನೆ ಕಾರ್ಯವೂ ಮುಗಿದಿದೆ. ಆದರೂ ಬಿಲ್ ಪಾವತಿಯಾಗಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಕೆಆರ್‌ಐಡಿಎಲ್ ಸಂಸ್ಥೆ ವಿರುದ್ಧ ಹೈಕೋರ್ಚ್‌ನಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನಡೆಯುತ್ತಿದೆ ಎನ್ನುತ್ತಾರೆ. ಆದರೆ, ಆದರೆ ಪ್ರಕರಣದಲ್ಲಿ ಗುತ್ತಿಗೆ ಹಣ ಬಿಡುಗಡೆ ಮಾಡದಂತೆ ಯಾವುದೇ ಸೂಚನೆ ಇಲ್ಲ. ಹೀಗಾಗಿ ಕೂಡಲೇ ಬಾಕಿ ಬಿಲ್ ಪಾವತಿಸುವಂತೆ ಗುತ್ತಿಗೆದಾರರು ಪಾಲಿಕೆಯನ್ನು ಒತ್ತಾಯಿಸಿದರು.
Siddaramaiah : ಸದನದಲ್ಲಿ ಮೊದಲಸಲ 40% ಕಮಿಷನ್ ಕದನ