ಸಚಿವ ಅಶೋಕ್ ಉಸ್ತುವಾರಿ ವಯಲಯದಲ್ಲಿ ಕೈಮೀರಿದ ಕೊರೋನಾ: ಸುಧಾಕರ್ ಕಳವಳ
ರಾಜ್ಯದಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಗುಣಮುಖ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಆದ್ರೆ, ಬೆಂಗಳೂರು ದಕ್ಷಿಣ ವಲಯದಲ್ಲಿ ಕೊರೋನಾ ಕೈಮೀರುತ್ತಿದೆ.
ಬೆಂಗಳೂರು, (ಆ.26): ಬೆಂಗಳೂರು ದಕ್ಷಿಣ ಭಾಗದಲ್ಲಿ ಪ್ರಕರಣ ಹೆಚ್ಚಾಗುತ್ತಿದ್ದು, ಸೋಂಕು ಕೈಮೀರಿ ಹೆಚ್ಚಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ದಕ್ಷಿಣ ವಲಯ ಕೋವಿಡ್ ಉಸ್ತುವಾರಿ ಸಚಿವ ಅಶೋಕ್ ಅವರು ಕಂದಾಯ ಸಚಿವರಾಗಿರುವುದರಿಂದ ಮಳೆ ಅವಾಂತರ, ಪ್ರವಾಹದ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗುತ್ತೆ. ಅಶೋಕ್ ಸಹ ಎರಡು ಮೂರು ಸಭೆ ನಡೆಸಿದ್ದಾರೆ. ಅಧಿಕಾರಿಗಳು ಎಲ್ಲಾ ರೀತಿಯ ಪ್ರಯತ್ನ ಮಾಡ್ತಿದ್ದಾರೆ. ಜನರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಹತೋಟಿಗೆ ಬಾರದ ಕೊರೋನಾ: ಹಿರಿಯ ಅಧಿಕಾರಿಗಳ ಜೊತೆ ಸಿಎಂ ಯಡಿಯೂರಪ್ಪ ಸಭೆ
ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಪಾಡಿ, ಸರ್ಕಾರದ ಮಾರ್ಗಸೂಚಿಯನ್ನು ಜನರು ಪೂರ್ಣವಾಗಿ ಪಾಲಿಸಬೇಕು. ಆಗ ಮಾತ್ರ, ಕೊರೋನಾ ನಿಯಂತ್ರಣ ಮಾಡಬಹುದು. ಕೇವಲ ಸರ್ಕಾರದಿಂದ ಮಾತ್ರ ಇದು ಆಗೋಲ್ಲ, ಜನರ ಸಹಭಾಗಿತ್ವ ಇರಬೇಕು ಎಂದು ತಿಳಿಸಿದರು.
ಸೆಪ್ಟೆಂಬರ್ ನಲ್ಲಿ ಹೆಚ್ಚು ಸೋಂಕು ಸಾಧ್ಯತೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸುಧಾಕರ್, ಸದ್ಯ ಶೇ.70 ರಷ್ಟು ಗುಣಮುಖರಾಗಿದ್ದಾರೆ. ಶೇ.30 ರಷ್ಟು ಸಕ್ರಿಯ ಕೇಸ್ ಗಳಿವೆ. ಸೋಂಕು ಬಗ್ಗೆ ಆತಂಕ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ಮಾರ್ಗಸೂಚಿಯನ್ನ ಜನ ಅನುಸರಿಸಿದರೆ ಸೋಂಕು ಕೇಸ್ ಕಮ್ಮಿಯಾಗುತ್ತೆ. ಮೇ ನಲ್ಲಿ ಸಾವಿನ ಪ್ರಮಾಣ ಶೇ.3.5 ಇತ್ತು. ಈಗ ಸಾವಿನ ಪ್ರಮಾಣ ಶೇ.1.5 ಇದೆ. ಇದು ಈ ಸರ್ಕಾರದ ಸಾಧನೆ ಎಂದರು.
ಬೆಂಗಳೂರು: ಹುಟ್ಟಿದ ಕೆಲವೇ ಗಂಟೆಗಳಲ್ಲಿ ಕೊರೋನಾಗೆ ಬಲಿಯಾದ ಶಿಶು
"