Asianet Suvarna News Asianet Suvarna News

#Breaking ಸಿ.ಟಿ ರವಿ ಥರ್ಡ್ ಅಂಪೈರ್ ರಿಸಲ್ಟ್ 'ಔಟ್'..!

ಕೊರೋನಾ ಥರ್ಡ್‌ ಅಂಪೈರ್‌ ರಿಸಲ್ಟ್‌ ಹೊರಬಿದ್ದಿದ್ದು, ಪ್ರವಾಸೋಧ್ಯಮ ಸಚಿವ ಸಿ.ಟಿ. ರವಿಗೆ ಕೊರೋನಾ ಸೋಂಕು ಇರುವುದು ಮತ್ತೊಮ್ಮೆ ಖಚಿತವಾಗಿದೆ. ಇದರೊಂದಿಗೆ ಸಿ.ಟಿ. ರವಿ ಕೊರೋನಾ ಸೋಂಕಿಗೆ ತುತ್ತಾದ ರಾಜ್ಯದ ಮೊದಲ ಸಚಿವ ಎನಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Corona Third umpire Result out Minister CT Ravi Tested COVID 19 Positive
Author
Bengaluru, First Published Jul 13, 2020, 9:14 AM IST

ಚಿಕ್ಕಮಗಳೂರು(ಜು.13): ಬೆಳ್ಳಂಬೆಳಗ್ಗೆ ಕರ್ನಾಟಕದ ಪಾಲಿಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋಧ್ಯಮ ಸಚಿವ ಸಿ.ಟಿ. ರವಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಥರ್ಡ್ ಅಂಪೈರ್‌ ರಿಸಲ್ಟ್‌ಗಾಗಿ ಕಾಯುತ್ತಿದ್ದ ಸಚಿವರಿಗೆ ಶಾಕ್ ಎದುರಾಗಿದೆ.

ಹೌದು, ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಟಿ. ರವಿ ಒಂದು ವಾರದಲ್ಲಿ ಎರಡು ಬಾರಿ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದರು. ಈ ಪೈಕಿ ಒಮ್ಮೆ ನೆಗೆಟಿವ್ ಬಂದರೆ ಮತ್ತೊಮ್ಮೆ ಪಾಸಿಟಿವ್ ಬಂದಿತ್ತು. ಹೀಗಾಗಿ ಮೂರನೇ ಬಾರಿಗೆ ಟೆಸ್ಟ್‌ಗೆ ಒಳಗಾಗಿ ಥರ್ಡ್‌ ಅಂಪೈರ್‌ ರಿಸಲ್ಟ್‌ಗಾಗಿ ಕಾಯುತ್ತಿದ್ದೇನೆ ಎಂದು ಭಾನುವಾರವಷ್ಟೇ(ಜು.12) ಅವರು ಟ್ವೀಟ್ ಮಾಡಿದ್ದರು. ಇದೀಗ ಥರ್ಡ್ ಅಂಪೈರ್‌ ರಿಸಲ್ಟ್ 'ಔಟ್' ಆಗಿದೆ. ಇದರೊಂದಿಗೆ ಸಿ.ಟಿ. ರವಿ ಕೊರೋನಾ ಸೋಂಕಿಗೆ ತುತ್ತಾದ ರಾಜ್ಯದ ಮೊದಲ ಸಚಿವ ಎನಿಸಿದ್ದಾರೆ.

ಥರ್ಡ್ ಅಂಪೈರ್ ಫಲಿತಾಂಶದಲ್ಲಿ ನನಗೆ ಕೋವಿಡ್ ಪಾಸಿಟಿವ್ ಇದೆ ಎಂಬುದು ದೃಢವಾಗಿದೆ. ಆದರೆ ಯಾವುದೇ ತೊಂದರೆಗಳ ಲಕ್ಷಣಗಳಿಲ್ಲದೆ ನಾನು ಸಹಜವಾಗಿದ್ದೇನೆ. ಸೂಕ್ತ ಚಿಕಿತ್ಸೆಗಳನ್ನು ಪಡೆಯುತ್ತಾ ನಾನು ಇಲ್ಲಿಂದಲೇ ಕೆಲಸ ಮುಂದುವರಿಸುಲಿದ್ದು ಆದಷ್ಟು ಬೇಗ ಗುಣಮುಖನಾಗಿ ನಿಮ್ಮೆಲ್ಲರೊಂದಿಗೆ ಕೆಲಸ ಮಾಡುತ್ತೇನೆ ಎಂದು ಸಿ.ಟಿ. ರವಿ ಟ್ವೀಟ್ ಮೂಲಕ ತಮಗೆ ಸೋಂಕು ತಗುಲಿರುವುದನ್ನು ಖಚಿತ ಪಡಿಸಿದ್ದಾರೆ.

ಒಮ್ಮೆ ಕೊರೋನಾ ಪಾಸಿಟಿವ್, ಮತ್ತೊಮ್ಮೆ ನೆಗೆಟಿವ್: ಥರ್ಡ್ ಅಂಪೈರ್ ಮೊರೆ ಹೋದ ಸಿಟಿ ರವಿ

ಇದೇ ವೇಳೆ ನಿನ್ನೆ ನಾನು, ಮಡದಿ ಪಲ್ಲವಿ, ನನ್ನ ಸಿಬ್ಬಂದಿ ವರ್ಗ ಕೋವಿಡ್19 ಪರೀಕ್ಷೆಗೆ ಒಳಪಟ್ಟಿದ್ದೆವು. ಪಲ್ಲವಿ ಹಾಗೂ ನನ್ನ ಗನ್-ಮ್ಯಾನ್, ಚಾಲಕ ಸೇರಿ ಆಫೀಸ್ ಸಿಬ್ಬಂದಿ ಎಲ್ಲರದು ನೆಗೆಟಿವ್ ಬಂದಿದೆ. ಎಂದು ಟ್ವೀಟ್ ಮಾಡಿದ್ದಾರೆ.

ರಾಜಕಾರಣಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ ಕೊರೋನಾ: ಕೊರೋನಾ ವೈರಸ್ ಜನಸಾಮಾನ್ಯರು, ಕೊರೋನಾ ವಾರಿಯರ್ಸ್ ಮಾತ್ರವಲ್ಲದೆ ಇದೀಗ ರಾಜಕಾರಣಿಗಳನ್ನು ಕಾಡಲಾರಂಭಿಸಿದೆ. ಕುಣಿಗಲ್ ಕಾಂಗ್ರೆಸ್ ಶಾಸಕ ಡಾ. ರಂಗನಾಥ್, ಶರತ್ ಬಚ್ಚೇಗೌಡ, ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ, ಸೇಡಂ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ಸೇರಿದಂತೆ ರಾಜ್ಯದಲ್ಲಿ ಹಲವರಿಗೆ ಕೊರೋನಾ ಸೋಂಕು ವಕ್ಕರಿಸಿದೆ.
  

Follow Us:
Download App:
  • android
  • ios