Asianet Suvarna News Asianet Suvarna News

ಕೊರೋನಾ ಕೇಸ್ : ಮತ್ತೆ ಏರಿದ ಮಹಾಮಾರಿ ಸೋಂಕು

ರಾಜ್ಯದಲ್ಲಿ ಮತ್ತೆ ಮಹಾಮಾರಿ ಸೋಂಕು ಏರಿಕೆಯಾಗಿದೆ. ಕೊಂಚ ಕಡಿಮೆಯಾಗಿದ್ದ ಪ್ರಕರಣಗಳು ಇದೀಗ ಮತ್ತೆ ರಾಜ್ಯದಲ್ಲಿ ಹೆಚ್ಚಾಗಿವೆ.

Corona Number Of Cases Raises In Karnataka  snr
Author
Bengaluru, First Published Sep 27, 2020, 8:52 AM IST

 ಬೆಂಗಳೂರು (ಸೆ.27):  ರಾಜ್ಯದಲ್ಲಿ ಶನಿವಾರ 8,811 ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಸಕ್ರಿಯ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಮತ್ತೆ ಲಕ್ಷದ ಗಡಿ ದಾಟಿದೆ. 86 ಮಂದಿ ಸೋಂಕು ಉಲ್ಬಣಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಇದೇ ವೇಳೆ 5,417 ಮಂದಿ ಗುಣಮುಖರಾಗಿದ್ದಾರೆ.

ಸೆಪ್ಟೆಂಬರ್‌ 16ರಿಂದ ಸೆಪ್ಟೆಂಬರ್‌ 19ರವರಗೆ ಒಂದು ಲಕ್ಷ ಮೀರಿದ ಸಂಖ್ಯೆಯ ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿದ್ದವು. ಅನಂತರ ಈ ಸಂಖ್ಯೆ ಕಡಿಮೆಯಾಗಿತ್ತು. ಶನಿವಾರ ಸಕ್ರಿಯ ಪ್ರಕರಣಗಳ ಸಂಖ್ಯೆ 1,01,782ಕ್ಕೆ ಏರಿದ್ದು, ದೇಶದಲ್ಲೇ ಮಹಾರಾಷ್ಟ್ರದ ನಂತರ ಅತಿ ಹೆಚ್ಚು ಸಕ್ರಿಯ ಪ್ರಕರಣಗಳು ಕರುನಾಡಿನಲ್ಲಿದ್ದಂತಾಗಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 5.66 ಲಕ್ಷ ಮಂದಿ ಕೊರೋನಾದಿಂದ ಬಾಧಿತರಾಗಿದ್ದಾರೆ.

ರಾಜ್ಯದಲ್ಲಿ 86 ಮಂದಿ ಕೊರೋನಾದಿಂದ ಪ್ರಾಣ ಕಳೆದುಕೊಂಡಿದ್ದು ರಾಜ್ಯದಲ್ಲಿನ ಸಾವಿನ ಸಂಖ್ಯೆ 8,503ಕ್ಕೆ ಏರಿಕೆಯಾಗಿದೆ. 5,417 ಮಂದಿ ಕೊರೋನಾ ಜಯಿಸಿದ್ದು ಒಟ್ಟು 4.55 ಲಕ್ಷ ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. 67,857 ಮಂದಿ ಕೊರೋನಾ ಪರೀಕ್ಷೆಗೆ ಒಳಗಾಗಿದ್ದಾರೆ.

ಬೆಂಗಳೂರಲ್ಲಿ ಕೇವಲ 30 ದಿನದಲ್ಲಿ ಕೊರೋನಾ ದುಪ್ಪಟ್ಟು: 1000 ಕ್ಕೂ ಅಧಿಕ ಮಂದಿ ಸಾವು ...

ಬೆಂಗಳೂರು ನಗರದಲ್ಲಿ 27, ದಕ್ಷಿಣ ಕನ್ನಡ, ಶಿವಮೊಗ್ಗ ತಲಾ 8, ಬಳ್ಳಾರಿ 7, ಮೈಸೂರು 6, ಧಾರವಾಡ 4, ಬೆಂಗಳೂರು ಗ್ರಾಮಾಂತರ 3, ವಿಜಯಪುರ, ತುಮಕೂರು, ರಾಮನಗರ, ಕೊಪ್ಪಳ, ದಾವಣಗೆರೆ, ಚಿಕ್ಕಬಳ್ಳಾಪುರ ತಲಾ 2, ಬಾಗಲಕೋಟೆ, ಚಿಕ್ಕಮಗಳೂರು, ಗದಗ, ಕೋಲಾರ, ಮಂಡ್ಯದಲ್ಲಿ ತಲಾ 1 ಸಾವು ಕೊರೋನಾದಿಂದ ಸಂಭವಿಸಿದೆ.

ಬೆಂಗಳೂರು ನಗರದಲ್ಲಿ ಸತತ ಮೂರನೇ ದಿನ 4,000ಕ್ಕಿಂತ ಹೆಚ್ಚು ಹೊಸ ಪ್ರಕರಣ ಪತ್ತೆಯಾಗಿದೆ. ಬೆಂಗಳೂರು ನಗರ 4083, ಬಳ್ಳಾರಿ 462, ದಕ್ಷಿಣ ಕನ್ನಡ 420, ಕೊಪ್ಪಳ 352, ಮಂಡ್ಯ 255, ಶಿವಮೊಗ್ಗ 254, ಬೆಂಗಳೂರು ಗ್ರಾಮಾಂತರ 241, ಹಾಸನ 239, ಧಾರವಾಡ 232, ಕೋಲಾರ 165, ಚಿಕ್ಕಬಳ್ಳಾಪುರ 164, ಬಾಗಲಕೋಟೆ 147, ದಾವಣಗೆರೆ 144, ತುಮಕೂರು 141, ಯಾದಗಿರಿ 133, ಬೆಳಗಾವಿ 132, ಹಾವೇರಿ 111, ಚಿಕ್ಕಮಗಳೂರು 109, ಉತ್ತರ ಕನ್ನಡ 104, ರಾಯಚೂರು 92, ಮೈಸೂರು, ಕೊಡಗು 79, ರಾಮನಗರ ತಲಾ 73, ಚಿತ್ರದುರ್ಗ 70, ವಿಜಯಪುರ 67, ಚಾಮರಾಜನಗರ 63, ಉಡುಪಿ 57, ಬೀದರ್‌ 56, ಗದಗ 44 ಹೊಸ ಪ್ರಕರಣಗಳು ಪತ್ತೆಯಾಗಿವೆ.

Follow Us:
Download App:
  • android
  • ios