ಬೆಂಗಳೂರು, (ಜುಲೈ.12): ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ನಿಯಂತ್ರಣ ಕೆಲಸ ಮಾಡುವುದರ ಜೊತೆಗೆ ಈ ಕೊರೋನಾ ಕೆಲಸ ಶುರುವಾಗಿದೆ. 

ಬೆಂಗ್ಳೂರಿನ ಲಾಕ್‌ಡೌನ್‌ ಸ್ವರೂಪ ಈ ಬಾರಿ ಡಿಫರೆಂಟ್! ಹೀಗಿರುತ್ತೆ ಬಂದ್.!

ಈ ಹಿನ್ನೆಲೆಯಲ್ಲಿ ಬಹಳಷ್ಟು ಪೊಲೀಸರಿಗೆ ಕೊರೋನಾ ಸೋಂಕು ತಗುಲಿದೆ. ಇದರಿಂದ ಗೃಹ ಸಚಿವ ಬಸವರಾಜ ಬೊಮ್ಮೊಯಿ ಪೊಲೀಸ್ ಸಿಬ್ಬಂದಿಗೆ  ಕಾರ್ಯ ವಿಧಾನದಲ್ಲಿ ಕೆಲ ಬದಲಾವಣೆ ಮಾಡಿ ಹಿರಿಯ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಹಾಗಾದ್ರೆ ಬಸವರಾಜ ಬೊಮ್ಮಾಯಿ, ತಮ್ಮ ಅಧಿಕಾರಿಗಳಿಗೆ ಕೊಟ್ಟ ಸೂಚನೆಗಳೇನು ಎನ್ನುವುದನ್ನು ನೋಡುವುದಾದ್ರೆ, ಅವು ಈ ಕೆಳಗಿನಂತಿವೆ.

ಗೃಹ ಸಚಿವರ ಸೂಚನೆಗಳು
* ಆಸ್ಪತ್ರೆಗಳಲ್ಲಿ ಪೋಲಿಸ್  ಸಿಬ್ಬಂದಿಗಳಿಗೆ ಪ್ರತ್ಯೇಕ ಚಿಕಿತ್ಸೆಯ ವ್ಯವಸ್ಥೆ ಮಾಡಿ.
* ಪ್ರತಿಯೊಬ್ಬ ಪೊಲೀಸ್ ಕಾನ್ಸಟೇಬಲ್ ಗಳಿಗರ ಶಿಫ್ಟ್ ಅಧಾರದದಲ್ಲಿ ಕರ್ತವ್ಯ ನಿರ್ವಹಿಸಲು ಸೂಚನೆ.
* ಪೊಲೀಸ್ ಸ್ಟೇಷನ್ ಗಳಲ್ಲಿ ಸೊಂಕು ಹರಡುವ ಸ್ಥಳವಾಗಿರುವದರಿಂದ ಅವಶ್ಯಕತೆಯಿರುವ ಸಿಬ್ಬಂದಿಗಳನ್ನ ಮಾತ್ರ ನಿಯೋಸಿ.
* ಸಾರ್ವಜನಿಕ ದೂರುಗಳನ್ನ ಅನ್ ಲೈನ್ ಮೂಲಕ ಸ್ವೀಕರಿಸಿ ವಿಚಾರಣೆ ನಡೆಸಲು ಸೂಚನೆ.
* 50 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ಮನೆಯಿಂದಲ್ಲೇ ಕಾರ್ಯನಿರ್ವಹಿಸುವಂತೆ ಸಲಹೆ. ( work form home)
* ಕರ್ತವ್ಯ ಮುಗಿದ ನಂತರ ಸಿಬ್ಬಂದಿಗಳು ಠಾಣೆಗಳನ್ನ ಸ್ವಚ್ಛಗೊಳಿಸಯವ ವ್ಯವಸ್ಥೆ ಮಾಡಬೇಕು.
*  ಪೊಲೀಸ್ ಠಾಣೆಗಳಲ್ಲಿ ಗಾಜಿನ ಕ್ಯಾಬಿನೆಟ್‌ಗಳನ್ನ ಅಳವಡಿಸಿಕೊಂಡು ದೂರು ಸ್ವೀಕರಿಸಬೇಕು.
* ಕೋವಿಡ್ 19 ಆಸ್ಪತ್ರೆ ಹಾಗೂ ಸ್ಮಾಶನ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ಹೆಡ್ ಗ್ಲೇರ್ ,ಗ್ಲೌಸ್ ಹಾಗೂ ಪಿಪಿಇ * ಕಿಟ್ ಗಳು ಕಡ್ಡಾಯವಾಗಿ ನೀಡಬೇಕು.
* ಪೊಲೀಸ್ ಸಿಬ್ಬಂದಿಗೆ ರೋಗ ನಿರೋಧಕ ಶಕ್ತಿ ವೃದ್ಧಿಸಲು ಆಯುಷ್/ ಆಯುರ್ವೇದಿಕ್ ಔಷದಗಳನ್ನ ನೀಡಬೇಕು.

ಈ ಮೇಲಿನ ಅಂಶಗಳನ್ನ‌ಕಟ್ಟು ನಿಟ್ಟಾಗಿ ಪಾಲಿಸಿ ಎಂದ ಗೃಹ ಸಚಿವ ಬಸವರಾಜ್ ಬೊಮ್ಮೊಯಿ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.