ಬೆಂಗಳೂರು (ಅ.21):  ರಾಜ್ಯದಲ್ಲಿ ಕೊರೋನಾ ಸೋಂಕಿನ ಹೊಸ ಪ್ರಕರಣಗಳಿಗಿಂತ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಿರುವ ಪ್ರವೃತ್ತಿ ಮಂಗಳವಾರವೂ ಮುಂದುವರಿದಿದೆ. ರಾಜ್ಯದಲ್ಲಿ 6,297 ಹೊಸ ಪ್ರಕರಣಗಳು ದೃಢವಾಗಿದ್ದು 8,500 ಮಂದಿ ಕೊರೋನಾವನ್ನು ಜಯಿಸಿದ್ದಾರೆ. 66 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 1,03,045ಕ್ಕೆ ಇಳಿದಿದೆ. ಈ ಪೈಕಿ 941 ಮಂದಿ ವಿವಿಧ ಕೋವಿಡ್‌ ಅಸ್ಪತ್ರೆಗಳಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 7.76 ಲಕ್ಷಕ್ಕೆ ತಲುಪಿದೆ.

ಈವರೆಗೆ ಒಟ್ಟು 10,608 ಮಂದಿ ಈ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದ ಮಂಗಳವಾರದ ಮರಣ ದರ ಶೇ. 1.04 ಇತ್ತು. ಒಟ್ಟು ಕೊರೋನಾ ಪೀಡಿತರಲ್ಲಿ 6.62 ಲಕ್ಷ ಮಂದಿ ಸೋಂಕನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದಾರೆ.

6,835 ಮಂದಿ ಕೋವಿಡ್‌ ಪೀಡಿತರಿಗೆ ಆಪ್ತ ಸಮಾಲೋಚನೆ ನಡೆಸಲಾಗಿದೆ. 98,236 ಮಂದಿಯ ಕೊರೋನಾ ಪರೀಕ್ಷೆ ನಡೆಸಲಾಗಿದೆ. ರಾಜ್ಯದ ಒಟ್ಟು ಪರೀಕ್ಷೆಯ ಪ್ರಮಾಣ 68.44 ಲಕ್ಷಕ್ಕೆ ಏರಿದೆ.

ಬೆಂಗಳೂರಲ್ಲೇ ಅಧಿಕ:  ಬೆಂಗಳೂರು ನಗರ ಜಿಲ್ಲೆಯಲ್ಲಿ 36 ಮಂದಿ, ದಕ್ಷಿಣ ಕನ್ನಡ, ಕೋಲಾರ ತಲಾ 4, ಚಾಮರಾಜನಗರ 3, ಬೆಂಗಳೂರು ಗ್ರಾಮಾಂತರ, ಹಾಸನ, ಹಾವೇರಿ, ಮೈಸೂರು, ಶಿವಮೊಗ್ಗ ತಲಾ 2, ವಿಜಯಪುರ, ಉತ್ತರ ಕನ್ನಡ, ಉಡುಪಿ, ತುಮಕೂರು, ರಾಯಚೂರು, ರಾಮನಗರ, ಧಾರವಾಡ, ಬಾಗಲಕೋಟೆ ಮತ್ತು ಬಳ್ಳಾರಿಯಲ್ಲಿ ತಲಾ ಒಬ್ಬರು ಕೊರೋನಾದಿಂದ ಮೃತರಾಗಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 2,821 ಮಂದಿಯಲ್ಲಿ ಸೋಂಕಿರುವುದು ದೃಢವಾಗಿದ್ದು ಮೈಸೂರು 451, ತುಮಕೂರು 327, ಬೆಂಗಳೂರು ಗ್ರಾಮಾಂತರ 319, ಹಾಸನ 249, ದಾವಣಗೆರೆ 206, ಬಳ್ಳಾರಿ 188, ಉತ್ತರ ಕನ್ನಡ 180, ಚಿಕ್ಕಬಳ್ಳಾಪುರ 166, ದಕ್ಷಿಣ ಕನ್ನಡ 146, ಶಿವಮೊಗ್ಗ 116, ಚಿತ್ರದುರ್ಗ 109, ಮಂಡ್ಯ 108, ಧಾರವಾಡ ಮತ್ತು ಚಿಕ್ಕಮಗಳೂರು 104, ಉಡುಪಿ 103, ಬೆಳಗಾವಿ 89, ವಿಜಯಪುರ 80, ಕೊಪ್ಪಳ 77, ಕಲಬುರಗಿ 67, ಹಾವೇರಿ 42, ಗದಗ 38, ಯಾದಗಿರಿ 37, ಚಾಮರಾಜನಗರ 32, ಕೋಲಾರ 29, ಬಾಗಲಕೋಟೆ 27, ರಾಯಚೂರು 25, ಕೊಡಗು 24, ರಾಮನಗರ 23, ಬೀದರ್‌ ಜಿಲ್ಲೆಯಲ್ಲಿ 10 ಹೊಸ ಪ್ರಕರಣಗಳು ಪತ್ತೆಯಾಗಿವೆ.