'ಮುಸಲ್ಮಾನ ವ್ಯಾಪಾರಿಗಳು ಮನೆ ಬಳಿ ಬಂದರೆ ಗುಂಡು': ಬಜರಂಗದಳ ಮುಖಂಡ ರಘು ವಿವಾದಾತ್ಮಕ ಹೇಳಿಕೆ
ನಮ್ಮ ಮನೆಯ ಬಳಿ ಜಿಹಾದಿಗಳು ಬಂದರೆ ತೋಟದ ಕೋವಿಗಳು ಹೊರಗೆ ಬರುತ್ತವೆ ಎಂದು ಬಜರಂಗದಳ ಸಂಘಟನೆ ಮುಖಂಡ ಸಕಲೇಶಪುರ ರಘು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹಾಸನ (ಜು.1) : ನಮ್ಮ ಮನೆಯ ಬಳಿ ಜಿಹಾದಿಗಳು ಬಂದರೆ ತೋಟದ ಕೋವಿಗಳು ಹೊರಗೆ ಬರುತ್ತವೆ ಎಂದು ಬಜರಂಗದಳ ಸಂಘಟನೆ ಮುಖಂಡ ಸಕಲೇಶಪುರ ರಘು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜಾನುವಾರುಗಳನ್ನ ಗುಂಡಿಟ್ಟು ಕೊಂದ ಘಟನೆ ಖಂಡಿಸಿ ಹಿಂದುಪರ ಸಂಘಟನೆ ಪ್ರತಿಭಟನೆ ನಡೆಸಿದ್ದವು. ಈ ವೇಳೆ ಮಾತನಾಡಿರುವ ರಘು, ನಮ್ಮ ಮನೆಯ ಬಳಿ ಬರೋ ಮೀನಿನ ವ್ಯಾಪಾರಿ, ತರಕಾರಿಯ ವ್ಯಾಪಾರಿಗಳು ಹಿಂದುಗಳ ಮನೆಯಂಗಳಕ್ಕೆ ಬರಬೇಕಾದ್ರೆ ಎಚ್ಚರಿಕೆಯಿಂದ ಇರಿ ಎಂದು ವಾರ್ನ್ ಮಾಡಿರುವ ರಘು, ಇಲ್ಲಂದ್ರೆ ಏನಾಗುತ್ತೆ ಗೊತ್ತಲ್ಲ, ನಮ್ಮ ಮನೆ ತೋಟದಲ್ಲಿರುವ ಕೋವಿಗಳು ಹೊರಗೆ ಬರುತ್ತವೆ. ನಾವು ಕೂಡ ಗುಂಡು ಹಾರಿಸುತ್ತೇವೆ ಎಂದು ಹೇಳಿದ್ದಾರೆ.
ಮುಸ್ಲಿಮರು ಎಂದಾದರೂ ಬಿಜೆಪಿಗೆ ಮತ ಹಾಕಿದ್ದಾರೆಯೇ?: ಬೆಲ್ಲದ ಪ್ರಶ್ನೆ
ಜೂನ್ 27 ರಂದು ಸಕಲೇಶಪುರ ತಾಲೂಕಿನ ಕ್ಯಾಮನಹಳ್ಳಿ ಗ್ರಾಮದಲ್ಲಿ ಎಮ್ಮೆ ಮೇಲೆ ಗುಂಡು ಹಾರಿಸಿ ಕೊಂದಿದ್ದ ಕಿಡಿಗೇಡಿಗಳು ಈ ಘಟನೆಗೆ ಎಲ್ಲೆಡೆ ಹಿಂದುಪರ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿದ್ದರು. ಪ್ರಕರಣ ಸಂಬಂಧ ಮೂವರನ್ನು ಬಂಧಿಸಿರೋ ಪೊಲೀಸರು