ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕರಾಗಿ ಡಾ. ಸಿ.ಎನ್. ಮಂಜುನಾಥ್ ಮುಂದುವರಿಕೆ: ಸಾಧನೆಗೆ ಬಾಗಿದ ಸರ್ಕಾರ
ಡಾ.ಸಿ.ಎನ್. ಮಂಜುನಾಥ್ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕರಾಗಿ ಮುಂದಿನ 6 ತಿಂಗಳ ಕಾಲ ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ.
ಬೆಂಗಳೂರು (ಜು.17): ರಾಜ್ಯದಲ್ಲಿ ಕಡಿಮೆ ದರದಲ್ಲಿ ಅತ್ಯಂತ ಗುಣಮಟ್ಟದ ಹೃದ್ರೋಗ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡಿ ಪ್ರಸಿದ್ಧಿಯಾಗಿರುವ ಡಾ.ಸಿ.ಎನ್. ಮಂಜುನಾಥ್ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕರಾಗಿ ಮುಂದಿನ 6 ತಿಂಗಳ ಕಾಲ ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ.
ಈ ಕುರಿತು ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕರಾಗಿ ಡಾ ಸಿಎನ್ ಮಂಜುನಾಥ್ ಮುಂದುವರಿಕೆ ಮಾಡಲು ನಿರ್ಧಾರ ಕೈಕೊಂಡಿದ್ದಾರೆ. ಡಾ ಸಿಎನ್ ಮಂಜುನಾಥ್ ಮುಂದುವರೆಸುವಂತೆ ಇಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ 6 ತಿಂಗಳು ಸೇವಾವಧಿ ಮುಂದುವರೆಸುವಂತೆ ಕ್ರಮ ಕೈಗೊಳ್ಳಲಾಗಿದೆ. ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆ ಕೆಲಸ ಜವಾಬ್ದಾರಿ ಮುಗಿಸಲಿರುವ ಹಿನ್ನಲೆಯನ್ನು ಅವರನ್ನು ಮುಂದುವರಿಸಲು ನಿರ್ಧಾರ ಮಾಡಲಾಗಿದೆ.
Temple Mobile Ban:ಕರ್ನಾಟಕದ ಮುಜರಾಯಿ ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆ ನಿಷೇಧ
ಇನ್ನು ಡಾ.ಸಿ.ಎನ್. ಮಂಜುನಾಥ್ ಅವರ ಸೇವಾವಧಿ ಜು.19ಕ್ಕೆ ಪೂರ್ಣಗೊಳ್ಳಲಿತ್ತು. ಆದರೆ, ಈ ಅವಧಿ ಪೂರ್ಣಗೊಂಡ ಬೆನ್ನಲ್ಲೇ ಹಲವು ವೈದ್ಯಾಧಿಕಾರಿಗಳಿಂದ ನಿರ್ದೇಶಕರ ಹುದ್ದೆಗೆ ಭಾರಿ ಲಾಭಿ ಉಂಟಾಗುವ ಸಾಧ್ಯತೆಯಿದೆ ಎಂದರಿತ ಕಾಂಗ್ರೆಸ್ ಸರ್ಕಾರ ಜನವರಿ ತಿಂಗಳವರೆಗೆ ಡಾ. ಮಂಜುನಾಥ್ ಅವರನ್ನೇ ನಿರ್ದೇಶಕರಾಗಿ ಮುಂದುವರೆಸಲು ಮುಂದಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರವೂ ಕೂಡ ಡಾ.ಸಿ.ಎನ್. ಮಂಜುನಾಥ್ ಅವರು ಸೇವಾವಧಿ ವಿಸ್ತರಣೆ ಮಾಡಿತ್ತು. ಪ್ರಸ್ತುತ ಸೇವಾವಧಿ ವಿಸ್ತರಣೆಯಲ್ಲಿ ಸೇವೆ ಮಾಡುತ್ತಿರುವ ಮಂಜುನಾಥ್ ಅವರಿಗೆ ಮತ್ತಷ್ಟು ತಿಂಗಳ ಕಾಲ ನಿರ್ದೇಶಕರಾಗಿ ಸೇವೆ ಮಾಡಲು ಅವಕಾಶ ಒದಗಿ ಬಂದಿದೆ.
ಬಿಜೆಪಿ ಸರ್ಕಾರದಿಂದ ಒಂದು ವರ್ಷ ಮುಂದುವರಿಕೆ: ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಯದೇವ ಆಸ್ಪತ್ರೆ (Jayadeva Hospital) ನಿರ್ದೇಶಕರಾಗಿ (Director) ಸೇವಾ ಅವಧಿ ಪೂರ್ಣಗೊಳ್ಳುತ್ತಿದ್ದ ಡಾ.ಸಿ.ಎನ್.ಮಂಜುನಾಥ್ (C N Manjunath) ಸೇವೆಯನ್ನು ಒಂದು ವರ್ಷಗಳ ಕಾಲ ಸೇವೆ ಮುಂದುವರಿಸಲು ಆದೇಶ ಹೊರಡಿಸಿದ್ದರು. ಇನ್ನು ಮುಂದುವರಿಕೆ ಅವಧಿ ಜು.19ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ, ಕಲಬುರಗಿಯಲ್ಲಿ ಆಸ್ಪತ್ರೆ ನಿರ್ಮಾಣದ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರನ್ನೇ ಮುಂದುವರಿಕೆ ಮಾಡಲಾಗಿದೆ. ಮುಖ್ಯಮಂತ್ರಿಗಳು ಡಾ. ಸಿ. ಎನ್ ಮಂಜುನಾಥ್ ಅವರ ಸಾಧನೆ ಮತ್ತು ಆಡಳಿತ ವೈಖರಿ ಪರಿಗಣಿಸಿ, ಪುನಃ 6 ತಿಂಗಳು ಮುಂದುವರೆಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರಿಗೆ ಡಾ. ಸಿ ಎನ್ ಮಂಜುನಾಥ್ ಅಭಿನಂದನೆ ತಿಳಿಸಿದ್ದಾರೆ.
Bengaluru PES College: ಪರೀಕ್ಷೆಯಲ್ಲಿ ಕಾಪಿ ಮಾಡ್ತಿದ್ದ ವಿದ್ಯಾರ್ಥಿಗೆ ಅವಮಾನ: 14ನೇ ಮಹಡಿಯಿಂದ ಬಿದ್ದು ಸಾವು
2022ರ ಅಂತ್ಯಕ್ಕೆ ಡಾ.ಸಿ.ಎನ್. ಮಂಜುನಾಥ್ ಅವರ ಸಾಧನೆಗಳು
- 5,27,437 ಹೊರ ರೋಗಿಗಳನ್ನು ನೋಡಿದ್ದಾರೆ
- 53,806 ರಲ್ಲಿ - 30,000 ರೋಗಿಗಳಿಗೆ ಸಬ್ಸಿಡಿ ವೆಚ್ಚವಾಗಿ ಚಿಕಿತ್ಸೆ ನೀಡಲಾಗಿದೆ
- 42,865 ಕ್ಯಾಥ್ ಲ್ಯಾಬ್ ಕಾರ್ಯವಿಧಾನ (ದೇಶದಲ್ಲಿ ಅತಿ ಹೆಚ್ಚು)
- 24,447 ಆಂಜಿಯೋಗ್ರಾಮ್‍ಗಳು
- 1500 ಮಿಟ್ರಲ್ ವಾಲ್ವುಲೋಪ್ಲ್ಯಾಸ್ಟಿಗಳು (ಜಗತ್ತಿನಲ್ಲಿ ಅತಿ ಹೆಚ್ಚು)
- 15,000 ಆಂಜಿಯೋಪ್ಲ್ಯಾಸ್ಟಿಗಳು (ದೇಶದಲ್ಲಿ ಅತಿ ಹೆಚ್ಚು ಪ್ರಮಾಣ)
- 3,000 ಬೈಪಾಸ್ ಮತ್ತು ವಾಲ್ವ್ ರಿಪ್ಲೇಸ್‍ಮೆಂಟ್ ಸರ್ಜರಿಗಳು
- 3,00,054 ಎಕೋ - ಕಾರ್ಡಿಯೋಗ್ರಾಮ್‍ಗಳು (ಜಗತ್ತಿನಲ್ಲಿ ಅತಿ ಹೆಚ್ಚು)
9. ಬಡ ರೋಗಿಗಳ ಕಾರ್ಪಸ್ ನಿಧಿಯ ರಚನೆ ವಿವಿಧೆಡೆಯಿಂದ 100 ಕೋಟಿ ರೂ. ಸಂಗ್ರಹ